ಬುಧವಾರ, ಜನವರಿ 22, 2020
18 °C

ನಿರ್ಮಾಣಕ್ಕೆ ಇಳಿದ ದಿಯಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನಟಿ ದಿಯಾ ಮಿರ್ಜಾ ಅವರು ತಮ್ಮದೇ ಆದ ನಿರ್ಮಾಣ ಸಂಸ್ಥೆ ಆರಂಭಿಸಿದ್ದಾರೆ. ಈ ಸಂಸ್ಥೆಯ ಮೂಲಕ ಬೇರೆ ಬೇರೆ ರೀತಿಯಲ್ಲಿ, ಬೇರೆ ಬೇರೆ ವೇದಿಕೆಗಳಿಗಾಗಿ ಕಾರ್ಯಕ್ರಮಗಳನ್ನು ನಿರ್ಮಾಣ ಮಾಡುವುದು ಅವರ ಉದ್ದೇಶ.

ಅಂದಹಾಗೆ, ದಿಯಾ ಅವರು ಈ ಸಂಸ್ಥೆಗೆ ‘ಒನ್‌ ಇಂಡಿಯಾ ಸ್ಟೋರಿಸ್’ ಎಂಬ ಹೆಸರು ಇತ್ತಿದ್ದಾರೆ. ಇದಕ್ಕೆ ಅವರು ತಮ್ಮ 38ನೆಯ ಜನ್ಮದಿನದಂದು ಚಾಲನೆ ನೀಡಿದ್ದಾರೆ.

ಚಿತ್ರಕಥೆ ಬರೆಯುವವರು, ಸಿನಿಮಾ ನಿರ್ದೇಶನ ಮಾಡುವವರ ಜೊತೆ ಮಾತುಕತೆ ನಡೆಯುತ್ತಿದೆ. ಹೊಸ ಯೋಜನೆಗಳು ಯಾವುವು ಎಂಬುದನ್ನು ಶೀಘ್ರದಲ್ಲೇ ತಿಳಿಸಲಾಗುವುದು ಎನ್ನುವುದು ದಿಯಾ ಅವರ ಹೇಳಿಕೆ. ಮಹಿಳೆಯನ್ನು ಕೇಂದ್ರವಾಗಿ ಇರಿಸಿಕೊಂಡ ಕಾರ್ಯಕ್ರಮಗಳನ್ನು ರೂಪಿಸುವುದು ಕೂಡ ಅವರ ಸಂಸ್ಥೆಯ ಒಂದು ಉದ್ದೇಶ.

‘ಒಗ್ಗಟ್ಟಿನ ಶಕ್ತಿಯಲ್ಲಿ ನನಗೆ ನಂಬಿಕೆ ಇದೆ. ಜನ ಒಂದು ನಿಮಿಷ ನಿಂತು ಆಲೋಚನೆ ಮಾಡುವಂತಹ ಕಥೆಗಳನ್ನು ವೀಕ್ಷಕರಿಗೆ ನೀಡಬೇಕು. ಇಂಥದ್ದೊಂದು ನಿರ್ಮಾಣ ಸಂಸ್ಥೆ ಆರಂಭಿಸಬೇಕು ಎಂಬ ಆಲೋಚನೆ ನನ್ನಲ್ಲಿ ಬಹುದಿನಗಳಿಂದ ಇತ್ತು’ ಎನ್ನುತ್ತಾರೆ ದಿಯಾ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು