ಮಂಗಳವಾರ, ನವೆಂಬರ್ 24, 2020
25 °C

ಮತ್ತೆ ನಿರ್ದೇಶನದತ್ತ ದುನಿಯಾ ವಿಜಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮತ್ತೆ ನಿರ್ದೇಶನಕ್ಕೆ ಬರುತ್ತಿದ್ದಾರೆ ದುನಿಯಾ ವಿಜಿ. ಯುವಜನರಿಗೆ ಹತ್ತಿರವಾಗುವ ಪ್ರೇಮಕಥೆಯೊಂದನ್ನು ಅವರು ನಿರ್ದೇಶಿಸುತ್ತಿದ್ದಾರೆ. ಇದು ‘ಸಲಗ’ ಚಿತ್ರಕ್ಕಿಂತ ಭಿನ್ನವಾಗಿರಲಿದೆ ಎಂದು ಅವರು ಹೇಳಿಕೊಂಡಿದ್ದಾರೆ. 

ಸುಮಾರು 18ರಿಂದ 22ರ ವಯೋಮಾನದ ಯುವಜನರನ್ನು ಕೇಂದ್ರವಾಗಿಟ್ಟುಕೊಂಡು ಈ ಚಿತ್ರ ಬರುತ್ತಿದೆ. ಅಂದಹಾಗೆ ಈ ಚಿತ್ರಕ್ಕೆ ಲಕ್ಕಿ (ಲಕ್ಷ್ಮಣ ಗೋಪಾಲ್‌) ನಾಯಕನಾಗಲಿದ್ದಾರೆ ಎಂದೂ ಅವರು ಫೇಸ್‌ ಬುಕ್‌ನಲ್ಲಿ ಬರೆದ ದೀರ್ಘ ಬರಹದಲ್ಲಿ ಪ್ರಕಟಿಸಿದ್ದಾರೆ. 

ಲಾಕ್‌ಡೌನ್‌ ಅವಧಿಯಲ್ಲಿ ಕೆಲವು ಹೊಸ ಸ್ಕ್ರಿಪ್ಟ್‌ ಬರೆದಿದ್ದೇನೆ. ಅವುಗಳ ಪೈಕಿ ಒಂದು ಸಿನಿಮಾ ಆಗುತ್ತಿದೆ ಎಂದು ಹೇಳಿಕೊಂಡಿದ್ದಾರೆ. 

ಹೊಸ ಚಿತ್ರಕ್ಕೆ ನಟ ಶಿವರಾಜ್‌ ಕುಮಾರ್‌ ಶುಭ ಹಾರೈಸಿದ್ದಾರೆ. ದುನಿಯಾ ವಿಜಿ ಶಿವರಾಜ್‌ ಕುಮಾರ್‌ ಲಕ್ಕಿ ಜೊತೆಯಾಗಿ ನಿಂತಿರುವ ಚಿತ್ರವನ್ನು ವಿಜಿ ಫೇಸ್‌ ಬುಕ್‌ನಲ್ಲಿ ಹಂಚಿಕೊಂಡಿದ್ದಾರೆ. ಅಭಿಮಾನಿಗಳ ಬೆಂಬಲವನ್ನೂ ಕೋರಿದ್ದಾರೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು