ಬುಧವಾರ, ಮೇ 18, 2022
28 °C

ಎಣ್ಣೆ ಬಾಟಲ್ ಹಿಡಿದ ರಚಿತಾ ರಾಮ್! ಏಕ್ ಲವ್ ಯಾ ಸಿನಿಮಾದ ಹೊಸ ಹಾಡು ಬಿಡುಗಡೆ

ಪ್ರಜಾವಾಣಿ ವೆಬ್‌ಡೆಸ್ಕ್‌‌ Updated:

ಅಕ್ಷರ ಗಾತ್ರ : | |

ಬೆಂಗಳೂರು: ಜೋಗಿ ಪ್ರೇಮ್ ನಿರ್ದೇಶನದ ಬಹುನಿರೀಕ್ಷಿತ ‘ಏಕ್ ಲವ್ ಯಾ‘ ಸಿನಿಮಾ ತನ್ನ ಮೇಕಿಂಗ್ ಸ್ಟೈಲ್‌ನಿಂದ ಸದಾ ಸುದ್ದಿಯಲ್ಲಿದೆ. ಇದೀಗ ಚಿತ್ರದ ಲಿರಿಕಲ್ ಹಾಡೊಂದು ಬಿಡುಗಡೆಯಾಗಿದ್ದು ಯೂಟ್ಯೂಬ್‌ನಲ್ಲಿ ಸದ್ದು ಮಾಡುತ್ತಿದೆ.

ಈ ಹಾಡಿನಲ್ಲಿ ನಟಿ ರಚಿತಾ ರಾಮ್ ಎಣ್ಣೆ ಬಾಟಲ್ (ಮದ್ಯ) ಹಿಡಿದುಕೊಂಡು ‘ಎಣ್ಣೆಗೂ ಹೆಣ್ಣಿಗೂ ಏನು ಸಂಬಂಧ‘? ಎಂದು ನಶೆಯಲ್ಲಿ ತೇಲಾಡಿದ್ದಾರೆ. ರಚಿತಾ ರಾಮ್ ಅಭಿಮಾನಿಗಳು ಈ ಹಾಡನ್ನು ಮಾಲಾಶ್ರೀ ಅವರ ‘ಒಳಗೆ ಸೇರಿದರೆ ಗುಂಡು‘ ಎಂಬ ಹಾಡಿಗೆ ಹೋಲಿಸಿದ್ದಾರೆ.

ಸ್ವತಃ ಪ್ರೇಮ್ ಅವರೇ ಈ ಚಿತ್ರದ ಗೀತ ರಚನೆ ಮಾಡಿದ್ದು, ಸ್ಯಾಂಡಲ್‌ವುಡ್‌ಗೆ ಮತ್ತೊಂದು ಎಣ್ಣೆ ಹಾಡನ್ನು ಕಾಣಿಕೆ ನೀಡಿದ್ದಾರೆ ಎನ್ನಲಾಗುತ್ತಿದೆ. ಗಾಯಕಿ ಮಂಗ್ಲಿ ಹಾಗೂ ಕೈಲಾಶ್ ಕೇರ್ ಅವರು ಈ ಗೀತೆಯನ್ನು ಹಾಡಿದ್ದಾರೆ. ಅರ್ಜುನ್‌ ಜನ್ಯಾ ‘ಏಕ್‌ ಲವ್‌ ಯಾ‘ ಗೆ ಸಂಗೀತ ಸಂಯೋಜನೆ ಮಾಡಿದ್ದಾರೆ.

‘ಏಕ್ ಲವ್ ಯಾ‘ದಲ್ಲಿ ನಟಿ ರಕ್ಷಿತಾ ಪ್ರೇಮ್‌ ಸಹೋದರ ರಾಣಾ ನಾಯಕರಾಗಿದ್ದಾರೆ. ಈ ಚಿತ್ರದಲ್ಲಿ ರಚಿತಾ ರಾಮ್‌ ಬೋಲ್ಡ್‌ ಆಗಿ ಕಾಣಿಸಿಕೊಂಡಿರುವುದು ವಿಶೇಷ. ಇತ್ತೀಚೆಗಷ್ಟೇ ‘ಲವ್ ಯು ರಚ್ಚು‘ ಸಿನಿಮಾದ ಪತ್ರಿಕಾಗೋಷ್ಟಿಯಲ್ಲಿ ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದ್ದ ಅವರು, ‘ಮೊದಲ ರಾತ್ರಿಯಲ್ಲಿ ಎಲ್ಲರೂ ಏನು ಮಾಡುತ್ತಾರೋ ಸಿನಿಮಾದ ರೋಮ್ಯಾಂಟಿಕ್ ಹಾಡಿನಲ್ಲಿ ನಾವು ಅದನ್ನೇ ಮಾಡಿದ್ದು‘ ಎಂದು ಬೋಲ್ಡಾಗಿ ಮಾತನಾಡಿ ಗಮನ ಸೆಳೆದಿದ್ದರು.

‘ವಿಲನ್‌’ ಗುಂಗಿನಿಂದ ಹೊರಬಂದಿರುವ ಪ್ರೇಮ್‌ ಈಗ ‘ಏಕ್‌ ಲವ್‌ ಯಾ’ ಎಂದು ಹೇಳುತ್ತಿದ್ದಾರೆ. ಇತ್ತೀಚೆಗೆ ಚಿತ್ರದ ಫಸ್ಟ್‌ಲುಕ್‌ ಬಿಡುಗಡೆಯಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ಸಾಕಷ್ಟು ಸದ್ದು ಮಾಡಿತ್ತು. ರಕ್ಷಿತಾ ಪ್ರೇಮ್ ಅವರೇ ಈ ಚಿತ್ರದ ನಿರ್ಮಾಣದ ಹೊಣೆ ಹೊತ್ತಿದ್ದಾರೆ.

 

ಇದನ್ನೂ ಓದಿ: ದುಬೈ ಮರುಭೂಮಿಯಲ್ಲಿ ಸಫಾರಿ ಬಳಿಕ ಜಾಹ್ನವಿ ಕಪೂರ್ ಲುಂಗಿ ಡ್ಯಾನ್ಸ್!

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು