ಶುಕ್ರವಾರ, 4 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

Kannada Movies: ‘ಎಲ್ಲಿಗೆ ಪಯಣ...’ವೆಂದ ಅಭಿಮನ್ಯು ಕಾಶಿನಾಥ್

Published : 13 ಸೆಪ್ಟೆಂಬರ್ 2024, 0:11 IST
Last Updated : 13 ಸೆಪ್ಟೆಂಬರ್ 2024, 0:11 IST
ಫಾಲೋ ಮಾಡಿ
Comments

ಹೆಸರಾಂತ ನಿರ್ದೇಶಕ ಕಾಶಿನಾಥ್‌ ಅವರ ಪುತ್ರ ಅಭಿಮನ್ಯು ಕಾಶಿನಾಥ್ ‘ಎಲ್ಲಿಗೆ ಪಯಣ ಯಾವುದೋ ದಾರಿ’ ಚಿತ್ರದ ಮೂಲಕ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. ಚಿತ್ರದ ಟೀಸರ್‌ ಇತ್ತೀಚೆಗಷ್ಟೇ ಬಿಡುಗಡೆಗೊಂಡಿದೆ. 

ಕಾರ್‌ನಲ್ಲಿ ಪಯಣಕ್ಕೆ ಹೊರಡುವ ದೃಶ್ಯದ ಟೀಸರ್‌ ಈ ಚಿತ್ರ ವಿಭಿನ್ನ ಕಥೆಯನ್ನು ಹೊಂದಿರುವ ಸುಳಿವು ನೀಡುತ್ತಿದೆ. ಸಾಕಷ್ಟು ವರ್ಷಗಳ ಕಾಲ ಚಿತ್ರರಂಗದ ಬೇರೆ ಬೇರೆ ಕ್ಷೇತ್ರಗಳಲ್ಲಿ ಕೆಲಸ ಮಾಡಿ ಅನುಭವ ಹೊಂದಿರುವ ಕಿರಣ್ ಎಸ್ ಸೂರ್ಯ ಈ ಚಿತ್ರದ ಮೂಲಕ ನಿರ್ದೇಶಕರಾಗಿದ್ದಾರೆ. 

‘ಪ್ರೀತಿಯ ಜೊತೆಗೆ ಥ್ರಿಲ್ಲರ್ ಜಾನರ್‌ ಹೊಂದಿರುವ ಚಿತ್ರ. ಹಾಗೆಂದ ಮಾತ್ರಕ್ಕೆ ಆ ಪರಿಧಿಗೆ ಸೀಮಿತವಾದ ಕಥೆ ಇಲ್ಲಿದೆ ಎಂದುಕೊಳ್ಳುವಂತಿಲ್ಲ. ಕೇವಲ ಕೊಲೆಯೊಂದರ ಸುತ್ತ ಕಥೆ ಸಾಗುವುದಿಲ್ಲ. ಇದುವರೆಗೆ ನೋಡಿದ್ದು ನಿಜವೋ ಸುಳ್ಳೋ ಎಂಬ ಅನುಮಾನ ಮೂಡಿಸುವ ರೀತಿಯಲ್ಲಿ ಕಥೆ ಸಾಗುತ್ತದೆ. ವಿಶೇಷವೆಂದರೆ ಕಿಚ್ಚ ಸುದೀಪ್ ಈ ಚಿತ್ರದ ಹಾಡೊಂದನ್ನು ಹಾಡಿದ್ದಾರೆ’ ಎಂದರು ನಿರ್ದೇಶಕರು. 

ಸುದರ್ಶನ ಆರ್ಟ್ಸ್ ಬ್ಯಾನರಿನಡಿಯಲ್ಲಿ ಜತಿನ್ ಪಟೇಲ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಅಭಿಮನ್ಯು ಕಾಶಿನಾಥ್ ಅವರಿಗೆ ಸ್ಫೂರ್ತಿ ಉಡಿಮನೆ ನಾಯಕಿಯಾಗಿ ಸಾಥ್ ಕೊಟ್ಟಿದ್ದಾರೆ. ವಿಜಯಶ್ರೀ ಕಲಬುರ್ಗಿ, ಬಲ ರಾಜವಾಡಿ, ಶೋಭನ್, ಅಯಾಂಕ್, ರಿನಿ ಬೋಪಣ್ಣ ಮುಂತಾದವರ ತಾರಾಗಣವಿದೆ. ಪ್ರಣವ್ ರಾವ್ ಸಂಗೀತ ನಿರ್ದೇಶನ, ಸತ್ಯ ರಾಮ್ ಛಾಯಾಚಿತ್ರಗ್ರಹಣವಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT