ಶುಕ್ರವಾರ, ಮಾರ್ಚ್ 31, 2023
32 °C

ಶ್ರೀದೇವಿ ಪುಣ್ಯ ತಿಥಿ: ಚೀನಾದ 6,000 ಪರದೆಗಳಲ್ಲಿ 'ಇಂಗ್ಲಿಷ್ ವಿಂಗ್ಲಿಷ್'

ಪಿಟಿಐ Updated:

ಅಕ್ಷರ ಗಾತ್ರ : | |

ಮುಂಬೈ: ಬಾಲಿವುಡ್‌ನ ಖ್ಯಾತ ನಟಿ, ದಿವಂಗತ ಶ್ರೀದೇವಿ ಅಭಿನಯದ ಬ್ಲಾಕ್ ಬಸ್ಟರ್ ಚಿತ್ರ 'ಇಂಗ್ಲಿಷ್ ವಿಂಗ್ಲಿಷ್' ಚೀನಾದಲ್ಲಿ ಮತ್ತೊಮ್ಮೆ ತೆರೆ ಕಾಣಲು ವೇದಿಕೆ ಸಜ್ಹಾಗಿದೆ.

ಶ್ರೀದೇವಿಯವರ 5ನೇ ಪುಣ್ಯ ತಿಥಿ ಹಿನ್ನೆಲೆಯಲ್ಲಿ ಫೆಬ್ರುವರಿ 24ರಂದು ಚೀನಾದಲ್ಲಿ ಚಿತ್ರ ಬಿಡುಗಡೆ ಆಗಲಿದೆ.

ವಿತರಕ ಸಂಸ್ಥೆ ಎರೋಸ್ ಇಂಟರ್‌ನ್ಯಾಷನಲ್ ಪ್ರಕಾರ, ಚಿತ್ರವು ಚೀನಾದ 6,000 ಪರದೆಗಳಲ್ಲಿ ಪ್ರದರ್ಶನಗೊಳ್ಳಲಿದೆ.

2012ರಲ್ಲಿ ತೆರೆ ಕಂಡಿದ್ದ ಈ ಚಿತ್ರವನ್ನು ಗೌರಿ ಶಿಂದೆ ನಿರ್ದೇಶನ ಮಾಡಿದ್ದರು. ಹಿಂದಿ ಭಾಷೆಯ ಕೌಟುಂಬಿಕ ಕಾಮಿಡಿ ಕಥಾಹಂದರ ಒಳಗೊಂಡಿರುವ ಚಿತ್ರ ಇದಾಗಿದ್ದು, 15 ವರ್ಷಗಳ ಬ್ರೇಕ್ ಬಳಿಕ ಶ್ರೀದೇವಿ ಈ ಚಿತ್ರದ ಮೂಲಕ ಕಮ್‌ಬ್ಯಾಕ್ ಮಾಡಿದ್ದರು.

‘ಇಂಗ್ಲಿಷ್ ವಿಂಗ್ಲಿಷ್’ ಚಿತ್ರವು ಶಾಂತ ಸ್ವಭಾವದ ಗೃಹಿಣಿಯ ಕಥೆಯನ್ನು ವಿವರಿಸುತ್ತದೆ. ಇಂಗ್ಲಿಷ್ ಮಾತನಾಡಲು ಮತ್ತು ಅರ್ಥ ಮಾಡಿಕೊಳ್ಳಲು ಸಾಧ್ಯವಾಗದೆ ಪ್ರತಿದಿನ ಅವರು, ತಮ್ಮ ಸುಶಿಕ್ಷಿತ ಪತಿ ಮತ್ತು ಮಗಳಿಂದ ಎದುರಾಗುವ ಕಷ್ಟಗಳನ್ನು ಸಹಿಸಿಕೊಳ್ಳುತ್ತಾರೆ. ಭಾಷೆಯನ್ನು ಕಲಿಯುವ ಅವರ ಪ್ರಯತ್ನವು ತನ್ನನ್ನು ತಾನು ಕಂಡುಕೊಳ್ಳಲು ಮತ್ತು ತನ್ನ ಮೌಲ್ಯವನ್ನು ಪುನಃ ಪ್ರತಿಪಾದಿಸಲು ಸಹಾಯ ಮಾಡುತ್ತದೆ.

ಮಸಾಲೆ ಪದಾರ್ಥಗಳ ಉದ್ಯಮ ನಡೆಸುತ್ತಿದ್ದ ತಮ್ಮ ತಾಯಿಯೇ ನಿರ್ದೇಶಕ ಶಿಂದೆಗೆ ಈ ಕಥೆ ರೂಪಿಸಲು ಸ್ಫೂರ್ತಿಯಾಗಿದ್ದರು.

ವಿಶ್ವದ ಎರಡನೇ ಅತಿದೊಡ್ಡ ಚೀನಾದ ಸ್ಪರ್ಧಾತ್ಮಕ ಚಲನಚಿತ್ರ ಮಾರುಕಟ್ಟೆಯಲ್ಲಿ ಭಾರತದ ಚಿತ್ರಗಳು ಕ್ರಮೇಣ ಬೇಡಿಕೆ ಪಡೆದುಕೊಳ್ಳುತ್ತಿವೆ. ಅದರಲ್ಲೂ ಸಾಂಸ್ಕೃತಿಕ ಅಂಶಗಳನ್ನು ಒಳಗೊಂಡ ಚಿತ್ರಗಳು ಮಹತ್ವ ಪಡೆದುಕೊಳ್ಳುತ್ತಿವೆ.

‘ದಿವಂಗತ ನಟಿ ಶ್ರೀದೇವಿಯವರ ಅತ್ಯದ್ಭುತ ಅಭಿನಯ ಇರುವ ಈ ಮಾಸ್ಟರ್ ಪೀಸ್ ಅನ್ನು ಚೀನಾ ಪ್ರೇಕ್ಷಕರ ಮುಂದಿಡಲು ನಾವು ಅತ್ಯಂತ ಉತ್ಸುಕರಾಗಿದ್ದೇವೆ’ಎಂದು ಎರೋಸ್ ಇಂಟರ್‌ ನ್ಯಾಷನಲ್ ಸಿಒಒ ಕುಮಾರ್ ಅಹುಜಾ ಹೇಳಿದ್ದಾರೆ.

ಚಿತ್ರದಲ್ಲಿ ಆದಿಲ್ ಹುಸೇನ್, ಸುಮೀತ್ ವ್ಯಾಸ್, ಪ್ರಿಯಾ ಆನಂದ್, ಮತ್ತು ಫ್ರೆಂಚ್ ನಟ ಮೆಹದಿ ನೆಬೂ ಸಹ ನಟಿಸಿದ್ಧಾರೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು