ಬುಧವಾರ, ಡಿಸೆಂಬರ್ 8, 2021
23 °C

ಶಿವಣ್ಣ ಅಭಿನಯದ ಭಜರಂಗಿ-2 ನಾಳೆ ಬಿಡುಗಡೆ: ಅಭಿಮಾನಿಗಳಲ್ಲಿ ಸಂಭ್ರಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೊಸಪೇಟೆ(ವಿಜಯನಗರ): ನಗರ ಸೇರಿದಂತೆ ರಾಜ್ಯದಾದ್ಯಂತ ಶುಕ್ರವಾರ ಚಿತ್ರಮಂದಿರಗಳಲ್ಲಿ ಭಜರಂಗಿ–2 ಚಿತ್ರ ತೆರೆ ಕಾಣಲಿದ್ದು, ನಟ ಶಿವರಾಜಕುಮಾರ್‌ ಅವರ ಅಭಿಮಾನಿಗಳಲ್ಲಿ ಸಂಭ್ರಮ ಮನೆ ಮಾಡಿದೆ.

ಇಲ್ಲಿನ ರಾಜವಂಶ ಅಭಿಮಾನಿಗಳ ಸಂಘದ ರಾಜಣ್ಣ ಮತ್ತು ಅವರ ಸ್ನೇಹಿತರು ಗುರುವಾರ ರಾತ್ರಿ ನಗರದ ಸರಸ್ವತಿ ಚಿತ್ರಮಂದಿರದಲ್ಲಿ ಶಿವಣ್ಣನ ಬೃಹತ್‌ ಕಟೌಟ್‌ ನಿಲ್ಲಿಸಿ, ವಿದ್ಯುತ್‌ ದೀಪಗಳಿಂದ ಅಲಂಕಾರ ಮಾಡಿದ್ದಾರೆ.

ಚಿತ್ರಮಂದಿರದ ಆವರಣದಲ್ಲಿ ಬಂಟಿಂಗ್ಸ್‌ ಕಟ್ಟಿದ್ದಾರೆ. ಶಿವಣ್ಣನ ಭಾವಚಿತ್ರಕ್ಕೆ ಬೃಹತ್‌ ಹೂಮಾಲೆ ಹಾಕಿ, ಪಟಾಕಿ ಸಿಡಿಸಿ ಅಭಿಮಾನ ತೋರಿದ್ದಾರೆ. ಚಿತ್ರದ ಯಶಸ್ವಿಗೆ ಹಾರೈಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು