ಮೈ ನವಿರೇಳಿಸುವ ರೇಸ್, ಚೇಸಿಂಗ್ ಮತ್ತು ಆ್ಯಕ್ಷನ್ ಮೂಲಕ ಜಗತ್ತಿನಾದ್ಯಂತ ಹೊಸ ಟ್ರೆಂಡ್ ಹುಟ್ಟು ಹಾಕಿದ್ದ ಯುನಿವರ್ಸಲ್ ಪಿಕ್ಚರ್ಸ್ನ ‘ಫಾಸ್ಟ್ ಆ್ಯಂಡ್ ಫ್ಯೂರಿಯಸ್‘ ಹಾಲಿವುಡ್ ಸರಣಿ ಚಿತ್ರಗಳಿಗೆ ಸದ್ಯದಲ್ಲೇ ‘ಹಾಬ್ಸ್ ಆ್ಯಂಡ್ ಶಾ‘ ಚಿತ್ರ ಹೊಸದಾಗಿ ಸೇರ್ಪಡೆಯಾಗಲಿದೆ. ಸ್ಟ್ರೀಟ್ ರೇಸಿಂಗ್, ಬೇಹುಗಾರಿಕೆ ಮತ್ತು ಭರಪೂರ ಆ್ಯಕ್ಷನ್ ಕಥೆ ಹೊಂದಿದ್ದ ‘ಫಾಸ್ಟ್ ಆ್ಯಂಡ್ ಫ್ಯೂರಿಯಸ್’ನ ಎಂಟು ಸರಣಿ ಚಿತ್ರಗಳು ಜಗತ್ತಿನಾದ್ಯಂತ ಬಿಡುಗಡೆಯಾದ ಕಡೆಯಲ್ಲೆಲ್ಲಾ ಎರಡೂ ಕೈಗಳಿಂದ ಹಣ ಬಾಚಿಕೊಂಡಿದ್ದವು.

ಈ ಬಾರಿ ‘ಫಾಸ್ಟ್ ಆ್ಯಂಡ್ ಫ್ಯೂರಿಯಸ್’ನ ‘ಹಾಬ್ಸ್ ಆ್ಯಂಡ್ ಶಾ‘ ಚಿತ್ರ ರೇಸಿಂಗ್ ಮತ್ತು ಆ್ಯಕ್ಷನ್ ಸ್ವಲ್ಪ ವಿಭಿನ್ನ ಕಥೆಯೊಂದಿಗೆ ತೆರೆಗೆ ಬರುತ್ತಿದೆ. ಡ್ವೇನ್ ಜಾನ್ಸನ್ ಮತ್ತು ಜಾಸನ್ ಸ್ಟಾಥಮ್, ಲ್ಯೂಕ್ ಹಾಬ್ಸ್ ಮತ್ತು ಡೆಕಾರ್ಡ್ ಶಾ ಎಂಬ ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.ಇಡಿರಿಸ್ ಎಲ್ಬಾ, ವನೆಸ್ಸಾ ಕಿರ್ಬಿ ಮತ್ತು ಹೆಲೆನ್ ಮಿರ್ರೆನ್ ನಟಿಸಿರುವ ಈ ಆ್ಯಕ್ಷನ್ ಚಿತ್ರಕ್ಕೆ ಡೇವಿಡ್ ಲೀಚ್ ನಿರ್ದೇಶನವಿದೆ. ಫಾಸ್ಟ್ ಆ್ಯಂಡ್ ಫ್ಯೂರಿಯಸ್ ಸರಣಿಯ ಎಲ್ಲ ಚಿತ್ರಗಳಂತೆ ಮೈ ನವಿರೇಳಿಸುವ ಫೈಟ್, ಆ್ಯಕ್ಷನ್ ಸೀನ್ಗಳಿಗೆ‘ಹಾಬ್ಸ್ ಆ್ಯಂಡ್ ಶಾ‘ ಚಿತ್ರದಲ್ಲೂ ಕೊರತೆ ಇಲ್ಲ. ಪ್ರತಿ ಫ್ರೇಮ್ ಕೂಡ ಅದ್ಭುತವಾಗಿ ಮೂಡಿ ಬಂದಿವೆ.

2017ರಲ್ಲಿ ತೆರೆಕಂಡ ‘ದ ಫೇಟ್ ಆಫ್ ದಿ ಫ್ಯೂರಿಯಸ್’ನಲ್ಲಿ ಅಂತ್ಯಗೊಂಡಿದ್ದ ಕತೆಯೊಂದಿಗೆ ‘ಹಾಬ್ಸ್ ಆ್ಯಂಡ್ ಶಾ’ ಆರಂಭವಾಗುತ್ತದೆ. ಜಾಗತಿಕ ಭಯೋತ್ಪಾದಕ ಬ್ರಿಕ್ಸ್ಟೋನ್ ಲೋರ್ ಮಾನವ ಕುಲದ ವಿರುದ್ಧ ಹೂಡಿದ ಮಾರಣಾಂತಿಕ ಜೆನೆಟಿಕ್ ಸೈಬರ್ ಯುದ್ಧವನ್ನು ಕೊನೆಗಾಣಿಸಲು ಪರಸ್ಪರ ಹಾವು, ಮುಂಗುಸಿಯಂತಿರುವ ಹಾಬ್ಸ್ ಮತ್ತು ಶಾ ಅನಿವಾರ್ಯವಾಗಿ ಕೈಜೋಡಿಸುತ್ತಾರೆ. ಲೋರ್ ಯೋಜನೆಯನ್ನು ಈ ಜೋಡಿ ಹೇಗೆ ವಿಫಲಗೊಳಿಸುತ್ತಾರೆ ಎನ್ನುವ ಕತೆಯನ್ನು ನಿರ್ದೇಶಕರು ಅತ್ಯಂತ ಕುತೂಹಲಕಾರಿಯಾಗಿ ಅನಾವರಣಗೊಳಿಸುತ್ತಾ ಹೋಗುತ್ತಾರೆ. ಪ್ರತಿಕ್ಷಣವೂ ಮುಂದೆ ಏನಾಗಬಹುದು ಎಂದು ಪ್ರೇಕ್ಷಕರು ತುದಿಗಾಲ ಮೇಲೆ ನಿಲ್ಲುವಂತೆ ಮಾಡುತ್ತದೆ.

ಇನ್ನೊಂದು ವಿಶೇಷ ಎಂದರೆ ಯುನಿವರ್ಸಲ್ ಪಿಕ್ಚರ್ಸ್ ಇಂಡಿಯಾ ಈ ಚಿತ್ರವನ್ನು ಕನ್ನಡ ಸೇರಿದಂತೆ ಭಾರತೀಯ ಭಾಷೆಗಳಿಗೆ ತರುತ್ತಿದೆ. ಕನ್ನಡದಲ್ಲಿ ಮೂರು ನಿಮಿಷದ ಟ್ರೇಲರ್ವೊಂದನ್ನು ಇತ್ತೀಚೆಗೆ ಬಿಡುಗಡೆ ಮಾಡಿತ್ತು. ಆಗಸ್ಟ್ 2ರಂದು ಈ ಚಿತ್ರ ಭಾರತದಲ್ಲಿ ತೆರೆ ಕಾಣಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.