ನವದೆಹಲಿ: ಕೊರೊನಾ ವೈರಸ್ ಸೋಂಕು ತಗುಲಿದ್ದ ಬಾಲಿವುಡ್ ನಟಿ ಮಲೈಕಾ ಅರೋರಾ, ತಾವು ಸೋಂಕಿನಿಂದ ಗುಣಮುಖರಾಗಿರುವುದಾಗಿ ಇನ್‌ಸ್ಟಾಗ್ರಾಂ ಪೋಸ್ಟ್‌ನಲ್ಲಿ ಭಾನುವಾರ ತಿಳಿಸಿದ್ದಾರೆ.

ಮಾಸ್ಕ್ ಧರಿಸಿರುವ ತಮ್ಮ ಭಾವಚಿತ್ರವೊಂದನ್ನು ಪೋಸ್ಟ್ ಮಾಡಿರುವ ಅವರು, ಬಹಳ ದಿನಗಳ ಬಳಿಕ ತನ್ನ ಕೋಣೆಯಿಂದ ಹೊರಬಂದಿದ್ದೇನೆ ಮತ್ತು ಇದು ಔಟಿಂಗ್‌ನಿಂದ (ವಿಹಾರ) ಬಂದಂತೆ ಭಾಸವಾಗುತ್ತಿದೆ ಎಂದು ಪ್ರಕಟಿಸಿದ್ದಾರೆ.

'ಬಹಳ ದಿನಗಳ ನಂತರ ಕೊನೆಗೂ ನನ್ನ ಕೋಣೆಯಿಂದ ಹೊರಬಂದಿದ್ದೇನೆ. ಅದು ಸ್ವತಃ ಒಂದು ವಿಹಾರದಂತೆ ಭಾಸವಾಗುತ್ತಿದೆ.... ಕಡಿಮೆ ನೋವು ಮತ್ತು ಅಸ್ವಸ್ಥಗೊಳ್ಳದೆಈ ವೈರಸ್‌ನಿಂದ ಹೊರಬರಲು ನನಗೆ ತುಂಬಾ ಆಶೀರ್ವಾದ ದೊರಕಿದೆ. ವೈದ್ಯರು ಮತ್ತು ಅವರ ಮಾರ್ಗದರ್ಶನಕ್ಕಾಗಿ, ಯಾವುದೇ ತೊಂದರೆ ಎದುರಾಗದಂತೆ ಮಾಡಿದ್ದಕ್ಕಾಗಿ ಬಿಎಂಸಿಗೆ, ಅಪಾರ ಬೆಂಬಲ ನೀಡಿದ ನನ್ನ ಕುಟುಂಬದವರಿಗೆ, ನನ್ನೆಲ್ಲ ಸ್ನೇಹಿತರು, ನೆರೆಹೊರೆಯವರು, ಅಭಿಮಾನಿಗಳ ಶುಭ ಹಾರೈಕೆಗಳಿಗಾಗಿ, ಸಂದೇಶ ಮತ್ತು ಬೆಂಬಲದ ಮೂಲಕ ನಿಮ್ಮಿಂದ ನಾನು ಪಡೆದ ಶಕ್ತಿಗಾಗಿ ಎಲ್ಲರಿಗೂ ಧನ್ಯವಾದಗಳು' ಎಂದಿದ್ದಾರೆ.

ಮುಂದುವರಿದು, ಈ ಕಷ್ಟದ ಸಮಯದಲ್ಲಿ ನೆರವಾದ ಪ್ರತಿಯೊಬ್ಬರಿಗೂ ನಾನು ಪದಗಳಲ್ಲಿ ಧನ್ಯವಾದ ಹೇಳಲಾರೆ. ನೀವೆಲ್ಲರೂ ದಯವಿಟ್ಟು ಸುರಕ್ಷಿತವಾಗಿರಿ ಮತ್ತು ಕಾಳಜಿ ವಹಿಸಿ ಎಂದು ಬರೆದುಕೊಂಡಿದ್ದಾರೆ.

ಮಲೈಕಾ ಅವರಿಗೆ ಸೋಂಕು ತಗುಲಿರುವುದು ಪತ್ತೆಯಾದ ಬಳಿಕ ಅವರು ತನ್ನ ಮುಂಬೈ ನಿವಾಸದಲ್ಲಿ ಸ್ವಯಂ ಕ್ವಾರಂಟೈನ್‌ಗೆ ಒಳಗಾಗಿದ್ದರು. ಮಗ ಅರ್ಹನ್ ಮತ್ತು ಮನೆಯಲ್ಲಿ ಸಾಕಿರುವ ನಾಯಿ ಪೂಚ್ ಕ್ಯಾಸ್ಪರ್ ಅವರ ಚಿತ್ರಗಳನ್ನು ಸಹ ಹಂಚಿಕೊಂಡು, ಮನೆಯ ಕ್ಯಾರೆಂಟೈನ್ ಅವಧಿಯಲ್ಲಿ ತಮ್ಮ ಮಕ್ಕಳೊಂದಿಗೆ (ಮಗ ಮತ್ತು ಶ್ವಾನ) ಹೇಗೆ ಸಂಪರ್ಕದಲ್ಲಿದ್ದರು ಎಂಬುದನ್ನು ಬರೆದುಕೊಂಡಿದ್ದರು.

ಇಂದು ನಾನು ಕೋವಿಡ್-19 ಸೋಂಕಿಗೆ ತುತ್ತಾಗಿದ್ದೇನೆ. ಆದರೆ ಈ ಮೂಲಕ ನಿಮಗೆಲ್ಲ ನಾನು ಕ್ಷೇಮವಾಗಿರುವುದಾಗಿ ತಿಳಿಸಲು ಬಯಸುತ್ತೇನೆ. ನನಗೆ ಸೋಂಕು ಲಕ್ಷಣಗಳಿಲ್ಲ ಹಾಗೂ ಅಗತ್ಯವಿರುವಎಲ್ಲಾ ನಿಯಮಗಳನ್ನು ಅನುಸರಿಸುತ್ತಿದ್ದೇನೆ. ವೈದ್ಯರು ಮತ್ತು ಅಧಿಕಾರಿಗಳ ಸೂಚನೆಯಂತೆ ಮನೆಯಲ್ಲಿಯೇ ಕ್ವಾರಂಟೈನ್ ಆಗುತ್ತಿದ್ದೇನೆ. ನೀವೆಲ್ಲರೂ ಶಾಂತಿ ಮತ್ತು ಸುರಕ್ಷಿತವಾಗಿರಲು ನಾನು ವಿನಂತಿಸುತ್ತೇನೆ. ನಿಮ್ಮ ಎಲ್ಲ ಬೆಂಬಲಕ್ಕೆ ಧನ್ಯವಾದಗಳು ಎಂದು ಸೆ.7 ರಂದು ಮಾಹಿತಿ ನೀಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.