ಆ 9ಕ್ಕೆ ತೆರೆಗೆ ‘ಬಕ್ರೀದ್‌’

ಶನಿವಾರ, ಜೂಲೈ 20, 2019
22 °C
ಕಾಲಿವುಡ್‌

ಆ 9ಕ್ಕೆ ತೆರೆಗೆ ‘ಬಕ್ರೀದ್‌’

Published:
Updated:
Prajavani

ನಟ ವಿಕ್ರಾಂತ್‌ ಅವರ ಬಹುನಿರೀಕ್ಷಿತ ತಮಿಳು ಸಿನಿಮಾ ‘ಬಕ್ರೀದ್‌’ ಆಗಸ್ಟ್ 9ರಂದು ತೆರೆಕಾಣಲಿದೆ.

ವಿಕ್ರಾಂತ್‌ ನಟನೆಯ ಆ್ಯಕ್ಷನ್‌ ಹಾಗೂ ಥ್ರಿಲ್ಲರ್‌ ಸಿನಿಮಾ ‘ಸುತ್ತು ಪಿಡಿಕ್ಕ ಉತ್ತರಾವು’ ಇತ್ತೀಚೆಗೆ ತೆರೆಕಂಡಿತ್ತು. ಈ ಸಿನಿಮಾವನ್ನು ರಾಮಪ್ರಕಾಶ್‌ ರಾಯಪ್ಪ ನಿರ್ದೇಶಿಸಿದ್ದರು. ಇದು ವಿಮರ್ಶಕರಿಂದ ಹೊಗಳಿಕೆಯನ್ನೂ ಪಡೆದಿತ್ತು.

‘ವೆನ್ನಿಲಾ ಕಬಡ್ಡಿ ಕುಜು 2’ ಸಿನಿಮಾ ಕೂಡ ಬಿಡುಗಡೆಗೆ ಸಿದ್ದವಾಗಿದೆ. ಜುಲೈ 12ರಂದು ಬಿಡುಗಡೆಗೆ ದಿನಾಂಕ ನಿಗದಿಯಾಗಿದೆ.

ಬಕ್ರೀದ್ ಚಿತ್ರ ಸಿನಿಪ್ರಿಯರಲ್ಲಿ ಸಾಕಷ್ಟು ಕುತೂಹಲ ಹುಟ್ಟುಹಾಕಿದೆ. ಮೊದಲ ಬಾರಿಗೆ ಒಂಟೆಯನ್ನು ಕೇಂದ್ರೀಕರಿಸಿ ತೆಗೆದ ಸಿನಿಮಾ ಇದಾಗಿದೆ. ಒಂಟೆಯನ್ನು ಖರೀದಿಸುವ ವಿಕ್ರಾಂತ್‌ ಅದನ್ನು ಸಾಕಲು ಹೆಣಗಾಡುತ್ತಾನೆ. ವಾತಾವರಣದ ಬದಲಾವಣೆಯಿಂದಾಗಿ ಈ ಪ್ರಾಣಿ ದಿನೇ ದಿನೇ ಬಡವಾಗುತ್ತದೆ. ರಾಜಸ್ತಾನದಲ್ಲಿ ನಾಯಕ ಈ ಪ್ರಾಣಿಯ ಜೊತೆಗೆ ಕಷ್ಟದ ದಿನಗಳನ್ನು ಕಳೆಯುವುದು ಕತೆಯ ಮುಖ್ಯ ಭಾಗವಾಗಿದೆ. ರೋಹಿತ್ ಪಾಠಕ್‌ ಕೂಡ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ.

Post Comments (+)