ಮಂಗಳವಾರ, 23 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಜುಲೈ 19ಕ್ಕೆ ‘ಹೆಜ್ಜಾರು’ ತೆರೆಗೆ

Published 26 ಜೂನ್ 2024, 18:35 IST
Last Updated 26 ಜೂನ್ 2024, 18:35 IST
ಅಕ್ಷರ ಗಾತ್ರ

ಕಿರುತೆರೆಯ ಹೆಸರಾಂತ ನಿರ್ದೇಶಕ ಕೆ.ಎಸ್.ರಾಮಜಿ ಗಗನ ಎಂಟರ್‌ಪ್ರೈಸಸ್‌ ಮೂಲಕ ನಿರ್ಮಿಸಿ, ಜನಪ್ರಿಯ ಗೀತ ಸಾಹಿತಿ ಹರ್ಷಪ್ರಿಯ ನಿರ್ದೇಶಿಸಿರುವ ‘ಹೆಜ್ಜಾರು’ ಚಿತ್ರ ಜುಲೈ 19ರಂದು ತೆರೆಗೆ ಬರಲಿದೆ.‌

‘ಈ ಹಿಂದೆ ಸಾಕಷ್ಟು ಕಿರುತೆರೆ, ಹಿರಿತೆರೆಗೆ ಗೀತೆಗಳಿಗೆ ಸಾಹಿತ್ಯ ರಚಿಸಿದ್ದೇನೆ. ದಶಕಗಳ ಕಾಲ ಕಿರುತೆರೆಯ ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡಿದ ಅನುಭವದಿಂದ ಈ ಚಿತ್ರ ನಿರ್ದೇಶನಕ್ಕಿಳಿದೆ. ಕನ್ನಡದ ಮೊಟ್ಟ ಮೊದಲ ಪ್ಯಾರಲಲ್ ಲೈಫ್‌ ಸಿನಿಮಾವಿದು. ಥ್ರಿಲ್ಲರ್‌ ಜಾನರ್‌ನ ಕಥೆ ಹೊಂದಿದೆ’ ಎನ್ನುತ್ತಾರೆ ನಿರ್ದೇಶಕ ಹರ್ಷಪ್ರಿಯ ಭದ್ರಾವತಿ.

ಭಗತ್ ಆಳ್ವಾ ಚಿತ್ರದ ನಾಯಕ. ನಾಯಕಿಯಾಗಿ ಶ್ವೇತ ಲೀಯೊನಿಲ್ಲಾ ಡಿಸೋಜಾ ಹಾಗೂ ಮೊದಲ ಬಾರಿಗೆ ನವೀನ್ ಕೃಷ್ಣ ಅವರು ವಿಲನ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಗೋಪಾಲಕೃಷ್ಣ ದೇಶಪಾಂಡೆ, ಅರುಣಾ ಬಾಲರಾಜ್, ಮುನಿರಾಜ್ ಮೊದಲಾದವರು ಚಿತ್ರದಲ್ಲಿದ್ದಾರೆ. 

‘ಲೂಸಿಯಾ’ ಖ್ಯಾತಿಯ ಪೂರ್ಣಚಂದ್ರ ತೇಜಸ್ವಿ ಸಂಗೀತ, ಅಮರ್ ಗೌಡ ಕ್ಯಾಮೆರಾ ಕೈಚಳಕವಿದೆ. ಮಂಗಳೂರು, ಉಪ್ಪಿನಂಗಡಿ, ಗುರುವಾಯನಕೆರೆ ಹಾಗೂ ಮಲೆನಾಡಿನಲ್ಲಿ ಚಿತ್ರೀಕರಣ ಮಾಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT