ಬುಧವಾರ, 18 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

‘ಕರಿಕಾನು ಗುಡ್ಡ’ವೇರಿದ ಪ್ರಮೋದ್‌ ಶೆಟ್ಟಿ

ಮಲೆನಾಡಿನ ಗುಡ್ಡವೊಂದರ ಮೇಲೆ ನಡೆಯುವ ಹಾಸ್ಯಮಯ ಕಥಾಹಂದರ ಹೊಂದಿರುವ ಚಿತ್ರ
Published : 1 ಸೆಪ್ಟೆಂಬರ್ 2024, 19:00 IST
Last Updated : 1 ಸೆಪ್ಟೆಂಬರ್ 2024, 19:00 IST
ಫಾಲೋ ಮಾಡಿ
Comments

‘ಲಾಫಿಂಗ್ ಬುದ್ಧ’ನಾಗಿ ಸದ್ಯ ಪ್ರೇಕ್ಷಕರನ್ನು ನಗಿಸುತ್ತಿರುವ ನಟ ಪ್ರಮೋದ್‌ ಶೆಟ್ಟಿ ತಮ್ಮ ನೂತನ ಚಿತ್ರದ ಕುರಿತು ಹೊಸ ಅಪ್‌ಡೇಟ್‌ ನೀಡಿದ್ದಾರೆ. ಈಗಾಗಲೇ ಚಿತ್ರೀಕರಣ ಪೂರ್ಣಗೊಳಿಸಿರುವ ಪ್ರಮೋದ್‌ ಶೆಟ್ಟಿ ನಟನೆಯ ‘ಕರಿಕಾನು ಗುಡ್ಡದ ಮೇಲೊಂದು ಅಧಿಕ ಪ್ರಸಂಗ’ ಚಿತ್ರ ತೆರೆಗೆ ಬರಲು ಸಿದ್ಧವಾಗಿದೆ.

ಮಲೆನಾಡಿನ ಗುಡ್ಡವೊಂದರ ಮೇಲೆ ನಡೆಯುವ ಹಾಸ್ಯಮಯ ಕಥಾಹಂದರ ಹೊಂದಿರುವ ಚಿತ್ರಕ್ಕೆ ಅನೀಶ್‌ ಶರ್ಮಾ ಆ್ಯಕ್ಷನ್‌–ಕಟ್‌ ಹೇಳಿದ್ದಾರೆ. ಈ ಹಿಂದೆ ಇವರು ‘ವಡ್ಡಾರಾಧಕ’, ‘ಶಬರಿ’ ಕಿರುಚಿತ್ರಗಳನ್ನು ನಿರ್ದೇಶಿಸಿದ್ದರು. 

ಜೋಗದ ಬಳಿಯ ಇಡುವಾಣಿ, ತಲವಾಟದ ಸುತ್ತಮುತ್ತ ಚಿತ್ರೀಕರಣಗೊಂಡಿರುವ ಚಿತ್ರದಲ್ಲಿ ಶೆಟ್ಟರು ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಕಾಣಿಸಿಕೊಂಡಿದ್ದಾರೆ. ಸದ್ಯದಲ್ಲಿಯೇ ಚಿತ್ರದ ಟೀಸರ್‌ ಹೊರಬರಲಿದೆ, ನಂತರ ಚಿತ್ರ ಬಿಡುಗಡೆ ದಿನಾಂಕ ಘೋಷಿಸುತ್ತೇವೆ ಎಂದು ಚಿತ್ರತಂಡ ಹೇಳಿದೆ. 

ಚಿತ್ತರಂಜನ್ ಕಶ್ಯಪ್, ವಲ್ಲಭ್ ಸೂರಿ, ಸುನಿತ್ ಹಲಗೇರಿ ಈ ಚಿತ್ರದ ನಿರ್ಮಾಪಕರು. ರಾಘು ಶಿವಮೊಗ್ಗ, ಕಿರಣ್ ನಾಯಕ್, ಮಂಜುನಾಥ್ ಹೆಗಡೆ ಮೊದಲಾದವರು ಚಿತ್ರದಲ್ಲಿದ್ದಾರೆ. ಚೇತನ್‌ ಕುಮಾರ್‌ ಸಂಗೀತ, ಸುಮಂತ್‌ ಶರ್ಮಾ ಛಾಯಾಚಿತ್ರಗ್ರಹಣ ಈ ಚಿತ್ರಕ್ಕಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT