ಭಾನುವಾರ, 26 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಕ್ಟೋರಿಯಾ ಮಾನ್ಷನ್‌ ಸಿನಿಮಾ: ಹೊಸಬರಿಗೆ ಶಿವರಾಜ್‌ಕುಮಾರ್ ಬೆಂಬಲ

Published 4 ಏಪ್ರಿಲ್ 2024, 17:45 IST
Last Updated 4 ಏಪ್ರಿಲ್ 2024, 17:45 IST
ಅಕ್ಷರ ಗಾತ್ರ

ಬಹುತೇಕ ಹೊಸಬರಿಂದಲೇ ಕೂಡಿರುವ ‘ವಿಕ್ಟೋರಿಯಾ ಮಾನ್ಷನ್‌’ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಇತ್ತೀಚೆಗಷ್ಟೇ ಬಿಡುಗಡೆಗೊಂಡಿದೆ. ಹೊಸಬರ ಚಿತ್ರಗಳಿಗೆ ಸದಾ ಪ್ರೋತ್ಸಾಹ ನೀಡುವ ನಟ ಶಿವರಾಜ್‌ಕುಮಾರ್‌ ಈ ಚಿತ್ರದ ಪೋಸ್ಟರ್‌ ಬಿಡುಡಗೆಗೊಳಿಸಿ ತಂಡಕ್ಕೆ ಶುಭ ಹಾರೈಸಿದರು.

ರಾಜೇಶ್‌ ಬಲಿಪ ನಿರ್ದೇಶನದ ಚಿತ್ರಕ್ಕೆ ಉಮೇಶ್.ಕೆ.ಎನ್ ಅವರು ಪದ್ಮಾವತಿ ಪ್ರೊಡಕ್ಷನ್ ಮೂವೀ ಬ್ಯಾನರ್‌ದಲ್ಲಿ ಅಡಿಯಲ್ಲಿ ಬಂಡವಾಳ ಹೂಡಿದ್ದಾರೆ.

‘ಚಿತ್ರರಂಗಕ್ಕೆ ಹೊಸ ಪ್ರತಿಭೆಗಳು ಬರಬೇಕು. ಆಗಲೇ ವಿನೂತನ ಕಥೆಗಳು ಬರುತ್ತವೆ. ಈ ಚಿತ್ರದ ಟೀಸರ್‌ ನೋಡಿದ್ದೇನೆ. ಹೊಸಬರದ್ದು ಅನ್ನಿಸುವುದಿಲ್ಲ. ಪ್ರಯತ್ನ ನಿರಂತರವಾಗಿರಲಿ’ ಎಂದರು ಶಿವಣ್ಣ. 

‘1900ರಲ್ಲಿ ಹನುಮಗಿರಿ ಎಂಬ ಪುಟ್ಟ ಗ್ರಾಮದಲ್ಲಿ ಭೀಕರ ಘಟನೆಗಳು ನಡೆಯುತ್ತಿರುತ್ತವೆ. ಅಲ್ಲಿನ ವಿಚಿತ್ರ ಆಚರಣೆಗಳು ಎಷ್ಟೋ ಶತಮಾನಗಳಿಂದ ನಿಗೂಢ. ಇದನ್ನೇ ಕಥೆಯಾಗಿಸಿಕೊಂಡಿರುವ ಥ್ರಿಲ್ಲರ್‌ ಚಿತ್ರ’ ಎಂದು ನಿರ್ದೇಶಕರು ತಿಳಿಸಿದರು.

ರಾಜೇಶ್‌ಗೆ ಕಾಶೀಮ ಜೋಡಿಯಾಗಿದ್ದಾರೆ. ಮಿಮಿಕ್ರಿ ಗೋಪಿ, ಮಠಕೊಪ್ಪಳ, ಶ್ರೀಧರ್, ಬಲ ರಾಜವಾಡಿ, ಗುರುದೇವ್‌ ನಾಗರಾಜ್ ಮುಂತಾದವರು ನಟಿಸುತ್ತಿದ್ದಾರೆ. ಸಂಗೀತ ಕಿರಣ್‌ ರವೀಂದ್ರನಾಥ್, ಛಾಯಾಚಿತ್ರಗ್ರಹಣ ವೀರೇಶ್‌ ಬುಗುಡೆ ಅವರದ್ದು. ಬೆಂಗಳೂರು, ಮಂಗಳೂರು, ಮೂಡಬಿದ್ರಿ, ಚಿಕ್ಕಮಗಳೂರು, ಬೇಲೂರಿನಲ್ಲಿ ಚಿತ್ರೀಕರಣಗೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT