ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈ ವಾರ ತೆರೆಗೆ

Last Updated 21 ನವೆಂಬರ್ 2019, 19:30 IST
ಅಕ್ಷರ ಗಾತ್ರ

ಕನ್ನಡ್‌ ಗೊತ್ತಿಲ್ಲ

ರಾಮರತ್ನ ಪ್ರೊಡಕ್ಷನ್ಸ್‌ನಡಿ ಕುಮಾರ ಕಂಠೀರವ ನಿರ್ಮಿಸಿರುವ ‘ಕನ್ನಡ್ ಗೊತ್ತಿಲ್ಲ’ ಸಿನಿಮಾ ತೆರೆ ಕಾಣುತ್ತಿದೆ.

ಮಯೂರ ರಾಘವೇಂದ್ರ ಈ ಚಿತ್ರ ನಿರ್ದೇಶಿಸಿದ್ದಾರೆ. ಕನ್ನಡ ಭಾಷಾ ಪ್ರೇಮವನ್ನು ಸಾರುವ ಥ್ರಿಲ್ಲರ್ ಚಿತ್ರ ಇದು. ಗಿರಿಧರ್ ದಿವಾನ್ ಅವರ ಛಾಯಾಗ್ರಹಣ ಹಾಗೂ ಸಂಕಲನವಿದೆ. ನಕುಲ್ ಅಭಯಂಕರ ಸಂಗೀತ ಸಂಯೋಜಿಸಿದ್ದಾರೆ. ಹರಿಪ್ರಿಯಾ ಮುಖ್ಯಭೂಮಿಕೆಯಲ್ಲಿದ್ದಾರೆ. ಉಳಿದಂತೆ ಸುಧಾರಾಣಿ, ಪವನ್ ಕುಮಾರ್, ಧರ್ಮಣ್ಣ, ಸಂತೋಷ್ ಕರ್ಕಿ ತಾರಾಗಣದಲ್ಲಿದ್ದಾರೆ.

ನ್ಯೂರಾನ್‌

ವಿನಯ್‍ಕುಮಾರ್‌ ವಿ.ಆರ್. ನಿರ್ಮಿಸಿರುವ ‘ನ್ಯೂರಾನ್’ ಚಿತ್ರ ಬಿಡುಗಡೆಯಾಗುತ್ತಿದೆ.

ನೈಜ ಘಟನೆ ಆಧಾರಿತ ಸಸ್ಪೆನ್ಸ್, ಥ್ರಿಲ್ಲರ್ ಚಿತ್ರ ಇದು. ಇದಕ್ಕೆ ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ ವಿಕಾಸ್ ಪುಷ್ಪಗಿರಿ. ಗುರುಕಿರಣ್‌ ಅವರ ಸಂಗೀತವಿದೆ. ಶೋಯಬ್ ಅಹಮದ್‌ ಅವರ ಛಾಯಾಗ್ರಹಣವಿದೆ. ಶ್ರೀಧರ್‌ ಅವರ ಸಂಕಲನವಿದೆ.

ಥ್ರಿಲ್ಲರ್ ಮಂಜು ಸಾಹಸ ಸಂಯೋಜಿಸಿದ್ದಾರೆ. ಶಿವಕುಮಾರ್ ಅವರ ಕಲಾ ನಿರ್ದೇಶನವಿದೆ. ವಿ. ನಾಗೇಂದ್ರಪ್ರಸಾದ್, ಕವಿರಾಜ್ ಅವರ ಗೀತ ಸಾಹಿತ್ಯವಿದೆ. ಶ್ರೀಹರ್ಷ ಸಂಭಾಷಣೆ ಬರೆದಿದ್ದಾರೆ.

ಯುವ ಈ ಚಿತ್ರದ ನಾಯಕ. ನೇಹಾ ಪಾಟೀಲ್ ನಾಯಕಿ. ವೈಷ್ಣವಿ ಮೆನನ್, ಜೈಜಗದೀಶ್, ಶಿಲ್ಪಾ ಶೆಟ್ಟಿ, ವರ್ಷಾ, ಅರವಿಂದ್ ರಾವ್, ಕಬೀರ್ ದುಹಾನ್‌ ಸಿಂಗ್, ರಾಕ್‍ಲೈನ್ ಸುಧಾಕರ್, ಕಾರ್ತಿಕ್ ತಾರಾಬಳಗದಲ್ಲಿದ್ದಾರೆ.

ಮನರೂಪ

ಹೊಸ ತಲೆಮಾರಿನವರ ಮನೋಲೋಕವನ್ನು ತೆರೆದಿಡುವ ಸೈಕಾಲಜಿಕಲ್ ಥ್ರಿಲ್ಲರ್ ಚಿತ್ರ ‘ಮನರೂಪ’ ತೆರೆ ಕಾಣುತ್ತಿದೆ. ಮನುಷ್ಯರ ಬೇರೆ ಬೇರೆ ಮುಖಗಳನ್ನು ಅರ್ಥಮಾಡಿಕೊಳ್ಳಲು ನಿರ್ಭಿಡೆಯಿಂದ ಪ್ರಯತ್ನಿಸಿರುವ ಅಸಂಗತ ಸಿನಿಮಾ ಇದು ಎಂದು ಚಿತ್ರತಂಡ ಹೇಳಿದೆ.

ಹೊಸ ಪ್ರತಿಭೆ ದಿಲೀಪ್ ಕುಮಾರ್‌ ಇದರ ನಾಯಕ. ಅನುಷಾ ರಾವ್, ನಿಶಾ ಬಿ.ಆರ್., ಆರ್ಯನ್, ಶಿವಪ್ರಸಾದ್‌, ಅಮೋಘ ಸಿದ್ದಾರ್ಥ್, ಗಜ ನೀನಾಸಂ ಹಾಗೂ ಪ್ರಜ್ವಲ್ ಗೌಡ ಅಪರೂಪದ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ಬಿ. ಸುರೇಶ್, ರಮಾನಂದ ಐನಕೈ, ಸತೀಶ್ ಹೆಗಡೆ ಗೋಳಿಕೊಪ್ಪ, ಪವನ್ ಕಲ್ಮನೆ, ಯಶೋದಾ, ಮಂಜುನಾಥ್ ಬೆಂಗಳೂರು, ಭಾಗೀರತಿ ಪೋಷಕ ಪಾತ್ರಗಳಲ್ಲಿ ನಟಿಸಿದ್ದಾರೆ.

ಮಹಾಬಲ ಸೀತಾಳಭಾವಿ ಸಂಭಾಷಣೆ ಬರೆದಿದ್ದಾರೆ. ಗೋವಿಂದರಾಜ್ ಅವರ ಛಾಯಾಗ್ರಹಣವಿದೆ. ಸೂರಿ ಮತ್ತು ಲೋಕಿ ಅವರ ಸಂಕಲನವಿದೆ. ಸರವಣ ಸಂಗೀತ ನೀಡಿದ್ದಾರೆ. ನಾಗರಾಜ್ ಹುಲಿವಾನ್ ಶಬ್ದ ಮತ್ತು ಧ್ವನಿ ವಿನ್ಯಾಸ ಮಾಡಿದ್ದಾರೆ. ಸಿ.ಎಂ.ಸಿ.ಆರ್. ಮೂವೀಸ್‌ನಡಿ ಈ ಚಿತ್ರ ನಿರ್ಮಿಸಲಾಗಿದೆ.

ರಾಜಲಕ್ಷ್ಮಿ

ಎಸ್.ಕೆ.ಎಂ. ಮೂವೀಸ್ ಲಾಂಛನದಡಿ ಮೋಹನ್ ಕುಮಾರ್ ಎಸ್.ಕೆ. ನಿರ್ಮಿಸಿರುವ ‘ರಾಜಲಕ್ಷ್ಮಿ’ ಬಿಡುಗಡೆಯಾಗುತ್ತಿದೆ.

ಶ್ರೀಕಾಂತ್ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿದ್ದಾರೆ. ನಾಗರಾಜಮೂರ್ತಿ ಅವರ ಛಾಯಾಗ್ರಹಣವಿದೆ. ಎ.ಟಿ. ರವೀಶ್ ಸಂಗೀತ ಸಂಯೋಜಿಸಿದ್ದಾರೆ. ಕಿರಣ್‌, ಅರ್ಜುನ್ ಅವರ ಸಂಕಲನವಿದೆ. ನವೀನ್ ಕನ್ನಡಿಗ ನೃತ್ಯ ಸಂಯೋಜಿಸಿದ್ದಾರೆ. ಶಂಕರ್ ಶಾಸ್ತ್ರಿ ಅವರ ಸಾಹಸ ನಿರ್ದೇಶನವಿದೆ. ಮಾಗಡಿ ಯತೀಶ್ ಸಂಭಾಷಣೆ ಬರೆದಿದ್ದಾರೆ.

ಹೊನ್ನವಳ್ಳಿ ಕೃಷ್ಣ, ಟೆನಿಸ್ ಕೃಷ್ಣ, ನವೀನ್ ತೀರ್ಥಹಳ್ಳಿ, ರಶ್ಮಿಗೌಡ, ಚಂದ್ರಪ್ರಭ, ಸ್ಮೈಲ್ ಶಶಿ, ಸೀತಾರಾಂ, ಮುತ್ತುರಾಜ್, ಸದಾನಂದ್‌ ತಾರಾಗಣದಲ್ಲಿದ್ದಾರೆ.

ಕಾಳಿದಾಸ ಕನ್ನಡ ಮೇಷ್ಟ್ರು

ಕನ್ನಡ ನಾಡು- ನುಡಿಯ ಸುತ್ತ ಹೆಣೆದಿರುವ ‘ಕಾಳಿದಾಸ ಕನ್ನಡ ಮೇಷ್ಟ್ರು’ ಸಿನಿಮಾ ಬಿಡುಗಡೆಯಾಗುತ್ತಿದೆ. ಗೀತ ಸಾಹಿತಿ ಕವಿರಾಜ್ ಈ ಚಿತ್ರ ನಿರ್ದೇಶಿಸಿದ್ದಾರೆ.

ಜಗ್ಗೇಶ್‌ ಈ ಚಿತ್ರದ ನಾಯಕ. ಮೇಘನಾ ಗಾಂವ್ಕರ್ ನಾಯಕಿಯಾಗಿದ್ದಾರೆ. ಕನ್ನಡದ 21 ನಾಯಕಿಯರು ಒಂದೇ ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ. ಕನ್ನಡ ವರ್ಸಸ್ ಇಂಗ್ಲಿಷ್ ವ್ಯಾಮೋಹ ಕುರಿತಾದ ಸಿನಿಮಾ ಇದು. ಅಂಬಿಕಾ, ತಬಲಾ ನಾಣಿ, ಟಿ.ಎಸ್. ನಾಗಾಭರಣ, ಸುಂದರ್, ಯತಿರಾಜ್, ಉಷಾ ಭಂಡಾರಿ, ರಘು ರಾಮನಕೊಪ್ಪ, ಪ್ರಣೀತಾ, ಆರ್ಯ, ಗೌತಮ್, ಗಣೇಶ ಶ್ರಾವಣಿ ತಾರಾಗಣದಲ್ಲಿದ್ದಾರೆ.

ಯು.ಆರ್. ಉದಯಕುಮಾರ್‌ ಬಂಡವಾಳ ಹೂಡಿದ್ದಾರೆ. ಗುರುಕಿರಣ್ ಸಂಗೀತ ನೀಡಿದ್ದಾರೆ. ಗುಂಡ್ಲುಪೇಟೆ ಸುರೇಶ್ ಅವರ ಛಾಯಾಗ್ರಹಣವಿದೆ. ಕೆ.ಎಂ. ಪ್ರಕಾಶ್ ಅವರ ಸಂಕಲನವಿದೆ. ಥ್ರಿಲ್ಲರ್ ಮಂಜು ಸಾಹಸ ಸಂಯೋಜಿಸಿದ್ದಾರೆ. ಮೋಹನ್ ಬಿ. ಕೆರೆ ಕಲಾ ನಿರ್ದೇಶಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT