ಮುಂಬೈ; ಬಾಲಿವುಡ್ ನಟ ಅಭಿಷೇಕ್ ಬಚ್ಚನ್ ಅಭಿನಯದ ‘ಬಿ ಹ್ಯಾಪಿ’ ಚಿತ್ರದ ಫಸ್ಟ್ ಲುಕ್ ಅನ್ನು ಚಿತ್ರತಂಡ ಬಿಡುಗಡೆ ಮಾಡಿದೆ.
ಈ ಸಂಬಂಧ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡಿರುವ ‘ಅಮೆಜಾನ್ ಪ್ರೈಮ್ ವಿಡಿಯೊ’, ‘ವಿಭಿನ್ನ ಕಥೆಯೊಂದಿಗೆ ‘ ಬಿ ಹ್ಯಾಪಿ’ ಚಿತ್ರ ತೆರೆ ಕಾಣಲಿದ್ದು, ತಂದೆ–ಮಗಳ ಬಾಂಧವ್ಯವನ್ನು ಪ್ರಸ್ತುತ ಪಡಿಸಲಿದೆ. ಒಂಟಿ ತಂದೆಯು ತನ್ನ ಮಗಳ ಕನಸುಗಳನ್ನು ಈಡೇರಿಸುವ ಸಲುವಾಗಿ ಆತ ಎದುರಿಸುವ ಸವಾಲುಗಳನ್ನು ಈ ಕಥೆ ಕಟ್ಟಿಕೊಡಲಿದೆ. ಹಾಸ್ಯ ಜತೆಗೆ ಭಾವನಾತ್ಮಕತೆಯನ್ನು ಚಿತ್ರ ಒಳಗೊಂಡಿದೆ’ ಎಂದು ವಿವರಿಸಿದೆ.