ಮಂಗಳವಾರ, ಮಾರ್ಚ್ 31, 2020
19 °C

First Look | 'ವಕೀಲ್ ಸಾಬ್‌' ಪವನ್‌ ಕಲ್ಯಾಣ್‌ ಮತ್ತೆ ಕಮ್‌ಬ್ಯಾಕ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೈದರಾಬಾದ್: ಟಾಲಿವುಡ್‌ ಅಜ್ಞಾತವಾಸದಿಂದ ಹೊರಬಂದಿರುವ ಪವನ್‌ ಕಲ್ಯಾಣ್‌ 'ವಕೀಲ್‌ ಸಾಬ್‌' ಆಗುವ ಮೂಲಕ ಅಭಿಮಾನಿಗಳಿಗೆ ಸಿಹಿ ಸುದ್ದಿ ಕೊಟ್ಟಿದ್ದಾರೆ.

ಹೌದು, ಪವನ್‌ ಕಲ್ಯಾಣ್‌ 'ವಕೀಲ್‌ ಸಾಬ್‌' ಸಿನಿಮಾದಲ್ಲಿ ನಟಿಸುತ್ತಿದ್ದು ಈ ಚಿತ್ರದ ಫಸ್ಟ್‌ಲುಕ್‌ ಬಿಡುಗಡೆಯಾಗಿದೆ. ರಿಲ್ಯಾಕ್ಸ್‌ ಮೂಡ್‌ನಲ್ಲಿ ಪುಸ್ತಕ ಓದುತ್ತಿರುವ ಪೋಸ್ಟರ್‌ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ತಮ್ಮ ಹಳೇಯ ಲುಕ್‌ನಲ್ಲಿ ಪವನ್‌ ಮತ್ತೆ ಟಾಲಿವುಡ್‌ಗೆ ಎಂಟ್ರಿ ಕೊಟ್ಟಿದ್ದಾರೆ.

2018ರಲ್ಲಿ ತೆರೆಕಂಡ, ತ್ರಿವಿಕ್ರಮ್ ಶ್ರೀನಿವಾಸ್‌ ನಿರ್ದೇಶನದ ‘ಅಜ್ಞಾತವಾಸಿ’ ಸಿನಿಮಾವು ಪವನ್‌ ಕಲ್ಯಾಣ್‌ ಅವರಿಗೆ ನಿರೀಕ್ಷಿಸಿದಂತಹ ಗೆಲುವು ತಂದುಕೊಡಲಿಲ್ಲ. ಈ ಚಿತ್ರದ ಬಳಿಕ ಪವನ್‌ ಕಲ್ಯಾಣ್‌ ಯಾವ ಚಿತ್ರವನ್ನೂ ಮಾಡಲಿಲ್ಲ.  ರಾಜಕೀಯದ ಕಡೆಗೆ ಪೂರ್ಣ ಗಮನ ಕೊಟ್ಟಿದ್ದ ಅವರು ಇದೀಗ 'ವಕೀಲ್‌ ಸಾಬ್‌' ಮೂಲಕ ವಾಪಸ್ಸಾಗುತ್ತಿದ್ದಾರೆ.

ಹಿಂದಿಯ ‘ಪಿಂಕ್‌’ ಚಿತ್ರ ತೆಲುಗಿಗೆ  'ವಕೀಲ್‌ ಸಾಬ್‌' ಆಗಿ ರಿಮೇಕ್‌ ಆಗುತ್ತಿದೆ. ಪಿಂಕ್‌ ಚಿತ್ರದಲ್ಲಿ ಅಮಿತಾಭ್‌ ಬಚ್ಚನ್‌, ತಾಪ್ಸಿ ಪನ್ನು ಮುಖ್ಯಪಾತ್ರದಲ್ಲಿ ನಟಿಸಿದ್ದರು. ಅಮಿತಾಭ್‌ ಪಾತ್ರವನ್ನು ವಕೀಲ್‌ ಸಾಬ್‌ನಲ್ಲಿ ಪವನ್‌ ಕಲ್ಯಾಣ್‌ ಮಾಡುತ್ತಿದ್ದಾರೆ. 

ದಿಲ್‌ ರಾಜು ಮತ್ತು ಬೋನಿ ಕಪೂರ್‌ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ. ಇದರಲ್ಲಿ ಅಂಜಲಿ, ನಿವಿತಾ ಥಾಮಸ್‌ ಮತ್ತು ಅನನ್ಯ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಎಸ್‌ಎಸ್‌ ತಮನ್ ಸಂಗೀತ ಸಂಯೋಜನೆ, ವೇಣು ಶ್ರೀರಾಮ್‌ ನಿರ್ದೇಶನ ಮಾಡುತ್ತಿದ್ದಾರೆ. 

‘ಪಿಂಕ್‌’ ಚಿತ್ರದ ತಮಿಳು ರಿಮೇಕ್‌ ‘ನೇರ್ಕೊಂಡ ಪಾರ್ವೈ’ ಸಿನಿಮಾವು ಕಾಲಿವುಡ್‌ನಲ್ಲಿ ಭಾರಿ ಹಿಟ್‌ ಆಗಿತ್ತು. ಇದರಲ್ಲಿ ಅಜಿತ್ ನಟಿಸಿದ್ದರು. ಈ ಸಿನಿಮಾವನ್ನು ಬೋನಿ ಕಪೂರ್‌ ನಿರ್ಮಾಣ ಮಾಡಿದ್ದರು

ಈ ಚಿತ್ರಕ್ಕೆ ಪವನ್‌ ಕಲ್ಯಾಣ್‌ 20 ದಿನಗಳ ಕಾಲ್‌ ಶೀಟ್‌ ನೀಡಿದ್ದಾರೆ ಎನ್ನಲಾಗಿದ್ದು ಸುಮಾರು ₹ 50 ಕೋಟಿ ಸಂಭಾವನೆ ಪಡೆದಿದ್ದಾರೆ ಎಂಬ ಮಾತುಗಳು ಕೇಳಿ ಬಂದಿವೆ. 

ರಾಜಕೀಯ ಪ್ರವೇಶ ಮಾಡಿದ್ದರಿಂದ ಪವನ್‌ ಕಲ್ಯಾಣ್‌ ಸಿನಿಕ್ಷೇತ್ರದಿಂದ ಈಗ ಸ್ವಲ್ಪ ದೂರ ಇದ್ದರು. ಈಗ ರಾಜಕೀಯದಿಂದ ಸ್ವಲ್ಪ ಬಿಡುವು ಪಡೆದು ಟಾಲಿವುಡ್‌ಗೆ ವಾಪಸ್ಸಾಗುತ್ತಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು