ಸೋಮವಾರ, ಮೇ 17, 2021
21 °C

ಶಶಿ ಕಪೂರ್‌ ಜತೆ ಫ್ಲರ್ಟ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಿರಿಯ ನಟಿಯರಾದ ಅರುಣಾ ಇರಾನಿ ಮತ್ತು ಬಿಂದು ಕಿರುತೆರೆಯ ‘ಕಪಿಲ್‌ ಶರ್ಮಾ ಶೋ’ದಲ್ಲಿ ವೃತ್ತಿ ಜೀವನದ ಹಲವು ರಹಸ್ಯಗಳನ್ನು ಬಹಿರಂಗಗೊಳಿಸಿದ್ದಾರೆ. ತಮ್ಮ ಜಮನಾದಲ್ಲಿ ಯಾವೆಲ್ಲ ನಟರ ಜತೆ ಫ್ಲರ್ಟ್‌ ಮಾಡುತ್ತಿದ್ದೆವು ಎಂಬ ಗುಟ್ಟನ್ನು ರಟ್ಟು ಮಾಡಿದ್ದಾರೆ. ಗುಳಿ ಕೆನ್ನೆಯ ಸುಂದರ ನಟರಾಗಿದ್ದ ಶಶಿ ಕಪೂರ್‌ ಜತೆ ತಾವು ಫ್ಲರ್ಟ್ ಮಾಡುತ್ತಿದ್ದಾಗಿ ಅರುಣಾ ಇರಾನಿ ಹೇಳಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಲು ಶಶಿ ಕಪೂರ್‌ ಈಗ ಇಲ್ಲ. 

ಹಳೆಯ ಜಮಾನಾದ ವಿಲನ್‌ಗಳಾದ ಪ್ರೇಮ್‌ ಚೋಪ್ರಾ ಮತ್ತು ರಣಜೀತ್‌ ಅವರನ್ನು ಎಲ್ಲಿಯಾದರೂ ಕಂಡರೆ ಪೋಷಕರು ತಮ್ಮ ವಯಸ್ಸಿಗೆ ಬಂದ ಹೆಣ್ಣು ಮಕ್ಕಳನ್ನು ಮರೆಮಾಚುತ್ತಿದ್ದರಂತೆ. ಬಿಂದು ಮತ್ತು ಅರುಣಾ ಇರಾನಿ ಪಾರ್ಟಿಯಲ್ಲಿದ್ದರೆ ಮಹಿಳೆಯರು ತಮ್ಮ ಗಂಡಂದಿರ ಮೇಲೆ ಒಂದು ಕಣ್ಣಿಟ್ಟಿರುತ್ತಿದ್ದರು ಎಂಬ ಕುತೂಹಲಕಾರಿ ವಿಷಯವನ್ನು ಈ ಇಬ್ಬರೂ ಹಂಚಿಕೊಂಡಿದ್ದಾರೆ. 

‘ಕಪಿಲ್‌ ಶರ್ಮಾ ಶೋ‘ ಕೊನೆಯ ಸಂಚಿಕೆಯಲ್ಲಿ ಯಾರಿಗೂ ಗೊತ್ತಿರದ ಇಂತಹ ಅನೇಕ ಹಾಸ್ಯಮಯ ಪ್ರಸಂಗಗಳನ್ನು ಇಬ್ಬರೂ ಹಿರಿಯ ನಟಿಯರು ಹಂಚಿಕೊಂಡಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು