ಶುಕ್ರವಾರ, ಏಪ್ರಿಲ್ 3, 2020
19 °C

ಬಿಲಿಯನ್‌ ಕ್ಲಬ್‌ ಸೇರಿದ ಫ್ರೋಜನ್‌–2

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

2013ರಲ್ಲಿ ತೆರೆಕಂಡ ಫ್ರೋಜನ್ 3ಡಿ ಎನಿಮೇಟೆಡ್‌ ಸಿನಿಮಾ ಬಾಕ್ಸ್‌ ಆಫೀಸ್‌ ಲೂಟಿ ಮಾಡಿತ್ತು.ಇದೇ  ನವೆಂಬರ್‌ 22ರಂದು ತೆರೆಕಂಡಿರುವ ‘ಫ್ರೋಜನ್‌–2’ ಎರಡು ವಾರಗಳಲ್ಲಿ ವಿಶ್ವದಾದ್ಯಂತ ಎರಡು ಸಾವಿರ ಕೋಟಿ ಬಾಚಿಕೊಂಡಿದೆ. ಭಾರತದಲ್ಲಿಯೇ ₹30 ಕೋಟಿ ಗಳಿಸಿದೆ. ಫ್ರೋಜನ್‌ ಮೊದಲ ಚಿತ್ರವೂ ಕೋಟಿ, ಕೋಟಿ ಗಳಿಸಿತ್ತು. ಡಿಸ್ನಿ ಸ್ಟುಡಿಯೊ ಈ ಚಿತ್ರವನ್ನು ನಿರ್ಮಿಸಿದೆ.

ಎಲ್ಸಾ– ಆ್ಯನ್‌ ಸಹೋದರಿಯರು ಫ್ರೋಜನ್‌–2ರಲ್ಲೂ ಜಾದೂ ಮಾಡಿದ್ದಾರೆ. ಈ ಎರಡೂ ಪಾತ್ರಗಳಿಗೆ ಪ್ರೇಕ್ಷಕರು ಫಿದಾ ಆಗಿದ್ದಾರೆ. ಜಾದೂ ವಿಶೇಷ ಶಕ್ತಿ ಹೊಂದಿರುವ  ಯುವರಾಣಿ ಎಲ್ಸಾ ಹಾಗೂ ಆಕೆಯ ಸಹೋದರಿ ಆ್ಯನ್ ನಡುವಿನ ಒಡನಾಟ ಮತ್ತು ಸ್ನೇಹ ಸಿನಿಮಾದ ಕಥಾಹಂದರ. 

ಕಾದಂಬರಿಗಾರ ಹೆನ್ಸ್‌ ಕ್ರಿಸ್ಟಿಯನ್‌ ಆ್ಯಡ್ರಿಂಸನ್‌ ಅವರ ‘ದಿ ಸ್ನೋ ಕ್ವೀನ್‌’ ಕೃತಿ ಈ ಚಿತ್ರಕ್ಕೆ ಪ್ರೇರಣೆ. ಹಿಂದಿಗೂ ಡಬ್ಬ ಮಾಡಲಾದ ಚಿತ್ರಕ್ಕೆ ಪ್ರಿಯಾಂಕಾ ಚೋಪ್ರಾ ಹಾಗೂ ಪರಿಣೀತಿ ಚೋಪ್ರಾ ಧ್ವನಿ ನೀಡಿದ್ದಾರೆ. ಡಿಸ್ನಿ ಸ್ಟುಡಿಯೊ 2019ರಲ್ಲಿ ನಿರ್ಮಿಸಿದ ಎಲ್ಲ ಚಿತ್ರಗಳೂ ಬಾಕ್ಸ್‌ ಆಫೀಸ್‌ನಲ್ಲಿ ಭರ್ಜರಿ ದುಡ್ಡು ಮಾಡಿವೆ.   ‘ಅವೆಂಜರ್ಸ್ ಎಂಡ್‌ಗೇಮ್‌‌’, ‌‘ದಿ ಲಯನ್‌ ಕಿಂಗ್‌’, ‘ಕ್ಯಾಪ್ಟನ್‌ ಅಮೇರಿಕಾ’, ‘ಟಾಯ್‌ ಸ್ಟೋರಿ’, ‘ಅಲ್ಲಾದ್ದೀನ್‌’ ಭಾರಿ ಯಶಸ್ಸು ಕಂಡಿವೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)