ಬುಧವಾರ, ಮಾರ್ಚ್ 22, 2023
31 °C

ಶಾರೂಖ್‌ ಮನೆಯಲ್ಲಿ ಗಣೇಶ ಹಬ್ಬ: ಫೋಟೊ ಹಂಚಿಕೊಂಡ ಬಾದ್‌ಶಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಾಲಿವುಡ್‌ ಬಾದ್‌ಶಾ ಶಾರೂಖ್‌ ಖಾನ್‌ ತಮ್ಮ ಮನೆಯಲ್ಲಿ ಗಣೇಶ ಹಬ್ಬ ಆಚರಸಿದ ಫೋಟೊವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

ಶಾರುಖ್ ಖಾನ್ ತಮ್ಮ ಮನೆಯಲ್ಲಿ ಹಲವು ಹಿಂದೂ ಹಬ್ಬಗಳನ್ನು ಅದ್ದೂರಿಯಾಗಿ ಆಚರಣೆ ಮಾಡುತ್ತಾರೆ. ಪ್ರತಿ ವರ್ಷವೂ ಅವರು ತಪ್ಪದೇ ಗಣೇಶ ಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತಾರೆ.

ಮನೆಯಲ್ಲಿ ಗಣಪತಿಯನ್ನು ತಂದು ಕೂರಿಸಿ ವಿಶೇಷ ಪೂಜೆ ಮಾಡಿ ಗಣೇಶನ ಆರಾಧನೆ ಮಾಡುತ್ತಾರೆ. ಗಣೇಶನ ವಿಸರ್ಜನೆ ಮಾಡುವ ಮೊದಲು ಗಣಪನಿಗೆ ನಮಸ್ಕರಿಸುತ್ತಾರೆ. ನಂತರ ಆ ಫೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಾರೆ. 

ಟ್ವಿಟರ್‌ನಲ್ಲಿ ಗಣೇಶನ ಫೋಟೊವನ್ನು ಹಂಚಿಕೊಂಡು, ಗಣಪತಿ ಎಲ್ಲರಿಗೂ ಒಳ್ಳೆಯದು ಮಾಡಲಿ, ನಮ್ಮ ಮೇಲೆ ಅಶಿರ್ವಾದ ಇರಲಿ ಎಂದು ಶಾರುಖ್ ಟ್ವೀಟ್‌ ಮಾಡಿದ್ದಾರೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು