ಶುಕ್ರವಾರ, 23 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಗಂಗೆ ಗೌರಿ’ಗೆ ಚಾಲನೆ

Published 17 ಜನವರಿ 2024, 19:17 IST
Last Updated 17 ಜನವರಿ 2024, 19:17 IST
ಅಕ್ಷರ ಗಾತ್ರ

ರಾಜ್‌ಕುಮಾರ್‌, ಲೀಲಾವತಿ, ಭಾರತಿ ಅಭಿನಯಿಸಿದ್ದ ‘ಗಂಗೆ ಗೌರಿ’ ಚಿತ್ರ ಸೂಪ‍ರ್‌ ಹಿಟ್‌ ಚಿತ್ರ. ಇದೀಗ ಅದೇ ಹೆಸರಿನ ಮತ್ತೊಂದು ಚಿತ್ರ ಸೆಟ್ಟೇರಿದೆ. ಈ ಹಿಂದೆ ಸಾಕಷ್ಟು ಪೌರಾಣಿಕ ಸಿನಿಮಾಗಳನ್ನು ನಿರ್ದೇಶಿಸಿರುವ ಬಿ.ಎ.ಪುರುಷೋತ್ತಮ್ ಓಂಕಾರ್ ಈ ಚಿತ್ರಕ್ಕೆ ಆ್ಯಕ್ಷನ್‌ ಕಟ್‌ ಹೇಳುತ್ತಿದ್ದಾರೆ. ಮಧುಕಾರ್ತಿಕ್-ಪ್ರಜ್ವಲ್ ಜಂಟಿಯಾಗಿ ಜಿಆರ್ ಫಿಲ್ಮ್ಸ್‌ ಅಡಿಯಲ್ಲಿ ಬಂಡವಾಳ ಹೂಡುತ್ತಿದ್ದಾರೆ.

‘ಇಲ್ಲಿವರೆಗೆ 27 ಸಿನಿಮಾ ನಿರ್ದೇಶಿಸಿದ್ದೇನೆ. ಅದರಲ್ಲಿ 23 ಪೌರಾಣಿಕ ಚಿತ್ರಗಳು. ಗಂಗೆ, ಗೌರಿ ಸಂಬಂಧ ಏನು? ಗಂಗೆ ಯಾಕೆ ಶಿವನ ತಲೆ ಮೇಲೆ ಇರುತ್ತಾಳೆ? ಗೌರಿ ಯಾಕೆ ಶಿವನ ತೊಡೆ ಮೇಲೆ ಕುಳಿತಿರುತ್ತಾಳೆ? ಇದಕ್ಕೆ ಕಾರಣವೇನು? ಇಬ್ಬರನ್ನು ಶಿವನು ಯಾವ ರೀತಿ ಸಂಭಾಳಿಸುತ್ತಾನೆ ಎಂಬಿತ್ಯಾದಿ ವಿವರಗಳು ಚಿತ್ರದಲ್ಲಿವೆ’ ಎಂದರು ನಿರ್ದೇಶಕರು.

ಮೈಸೂರು, ಶ್ರೀರಂಗಪಟ್ಟಣ, ಊಟಿ ಸುತ್ತ 30 ದಿನಗಳ ಕಾಲ ಚಿತ್ರೀಕರಣ ನಡೆಸಲು ತಂಡ ಯೋಜನೆ ಹಾಕಿಕೊಂಡಿದೆ. ಗಣೇಶ್ ರಾವ್ ಕೇಸರ್‌ಕರ್‌, ರೂಪಾಲಿ, ನಿಖಿತಾಸ್ವಾಮಿ ಮುಖ್ಯ ಪಾತ್ರದಲ್ಲಿದ್ದಾರೆ. ರಾಜ್‌ ಭಾಸ್ಕರ್‌ ಸಂಗೀತ, ಗೌರಿವೆಂಕಟೇಶ್ ಛಾಯಾಚಿತ್ರಗ್ರಹಣವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT