ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೌರಿ ಕ್ಯಾಂಪ್ ಸೇರಿದ ಮಾಧುರಿ!

ಮಾಧುರಿ ದೀಕ್ಷಿತ್, ಗೌರಿ ಖಾನ್ ಸ್ನೇಹಬಳಗಕ್ಕೆ ಸೇರ್ಪಡೆ
Last Updated 22 ಮೇ 2019, 19:30 IST
ಅಕ್ಷರ ಗಾತ್ರ

ಶಾರುಕ್ ಖಾನ್ ಪತ್ನಿ ಗೌರಿ ಖಾನ್ ಈಗಾಗಲೇ ಚಿತ್ರೋದ್ಯಮದಲ್ಲಿ ಒಳಾಂಗಣ ವಿನ್ಯಾಸಕಾರ್ತಿ ಎಂದೇ ಖ್ಯಾತಿ ಗಳಿಸಿರುವವರು. ಅಂತೆಯೇ ಗೌರಿಯ ಸ್ನೇಹ ಬಳಗವೂ ದೊಡ್ಡದಿದೆ. ಸುಸೈನ್ ಖಾನ್, ರಾಣಿ ಮುಖರ್ಜಿ, ಕಾಜೋಲ್ ಅಜಯ್ ದೇವಗನ್ ಹೀಗೆ ಗೆಳತಿಯರ ಪಟ್ಟಿ ದೊಡ್ಡದೇ ಇದೆ. ಇದೀಗ ಈ ಬಳಗಕ್ಕೆ ಮಾಧುರಿ ದೀಕ್ಷಿತ್ ಹೊಸದಾಗಿ ಸೇರ್ಪಡೆಯಾಗಿದ್ದಾರೆ.

ಇದಕ್ಕೆ ಸಾಕ್ಷಿ ಎಂಬಂತೆ ಈಚೆಗೆ ಗೌರಿ ಖಾನ್ ತಮ್ಮ ಇನ್‌ಸ್ಟಾಗ್ರಾಂ ಮತ್ತು ಟ್ವಿಟರ್ ಖಾತೆಗಳಲ್ಲಿ ಮಾಧುರಿ ಜತೆಗಿರುವ ಬಗೆ ಬಗೆಯ ಚಿತ್ರಗಳನ್ನು ಅಪ್‌ಲೋಡ್ ಮಾಡಿದ್ದಾರೆ. ಅಷ್ಟೇ ಅಲ್ಲ ತಾವು ಮಾಧುರಿಯ ದೊಡ್ಡ ಫ್ಯಾನ್ ಎಂದೂ ಬರೆದುಕೊಂಡಿದ್ದಾರೆ. ಮಾಧುರಿ, ಶಾರುಕ್ ಜೊತೆಗೆ ಕೊಯ್ಲಾ, ದಿಲ್ ತೋ ಪಾಗಲ್ ಹೈ, ಹಮ್ ದಿಲ್ ದೇ ಚುಕೆ ಸನಂ, ದೇವದಾಸ್‌ ಜೊತೆಗೆ ಜೋಡಿಯಾಗಿ ಅಭಿನಯಿಸಿದ್ದರು. ಗೌರಿಯ ಪ್ರೀತಿ ಮತ್ತು ಸ್ನೇಹಕ್ಕೆ ಮನಸೋತಿರುವ ಮಾಧುರಿ, ‘ಗೌರಿ ಜತೆಗಿನ ಭೇಟಿ ಮರೆಯಲಾಗದ್ದು. ಥ್ಯಾಂಕ್ಯೂ ಗೌರಿ’ ಎಂದು ಪ್ರತಿಕ್ರಿಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT