ಮಂಗಳವಾರ, ಡಿಸೆಂಬರ್ 7, 2021
23 °C

ಆರ್ಯನ್ ಖಾನ್ ಬರುವವರೆಗೆ ಮನೆಯಲ್ಲಿ ಸಿಹಿ ತಿನಿಸು ಮಾಡುವಂತಿಲ್ಲ: ಗೌರಿ ಖಾನ್

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

Bollywood actor Shah Rukh Khan with wife Gauri Khan and son Aryan Khan. Credit: PTI File Photo

ಬೆಂಗಳೂರು: ಕ್ರೂಸ್ ಹಡಗಿನಲ್ಲಿ ಡ್ರಗ್ಸ್ ಪಾರ್ಟಿ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್‌ಸಿಬಿ ಆರ್ಯನ್ ಖಾನ್‌ರನ್ನು ಬಂಧಿಸಿದೆ. ಪುತ್ರನ ಆಗಮನಕ್ಕಾಗಿ ಶಾರುಖ್ ಮತ್ತು ಗೌರಿ ದಂಪತಿ ಕಾದು ಕುಳಿತಿದ್ದು, ಮನೆಯಲ್ಲಿ ಸಂಭ್ರಮವಿಲ್ಲ.

ಈ ಮಧ್ಯೆ ಆರ್ಯನ್ ಖಾನ್ ಬರುವವರೆಗೂ ಮನೆಯಲ್ಲಿ ಯಾವುದೇ ರೀತಿಯ ಸಿಹಿ ತಿನಿಸು ಅಡುಗೆ ಮಾಡಬಾರದು ಎಂದು ಗೌರಿ ಖಾನ್ ಅಡುಗೆಯವರಿಗೆ ಹೇಳಿರುವುದಾಗಿ ಇಂಡಿಯಾ ಟುಡೇ ವರದಿ ಮಾಡಿದೆ.

ಮನೆಯಲ್ಲಿನ ಅಡುಗೆ ಸಿಬ್ಬಂದಿಗೆ ಗೌರಿ ಖಾನ್ ಈ ಕುರಿತು ಸೂಚನೆ ನೀಡಿದ್ದಾರೆ ಎಂದು ಇಂಡಿಯಾ ಟುಡೇ ವರದಿಯಲ್ಲಿ ಹೇಳಿದೆ.

ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಅವರ ಜಾಮೀನು ಅರ್ಜಿ ವಿಚಾರಣೆ ಅ. 20, ಬುಧವಾರ ನಡೆಯಲಿದೆ.

ಅ. 2ರಂದು ಆರ್ಯನ್ ಖಾನ್ ಬಂಧನವಾಗಿದ್ದು, ಅದಾದ ನಂತರ ಅವರು ನ್ಯಾಯಾಂಗ ಬಂಧನ ಮತ್ತು ಎನ್‌ಸಿಬಿ ಬಂಧನಕ್ಕೆ ಒಳಗಾಗಿ ಮುಂಬೈನ ಅರ್ಥರ್ ರೋಡ್ ಜೈಲಿನಲ್ಲಿಯೇ ಇರಬೇಕಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು