ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭರ್ಜರಿ ಸದ್ದು ಮಾಡುತ್ತಿರುವ ತೆಲುಗಿನ ’ಗೀತ ಗೋವಿಂದಂ’ ಟೀಸರ್‌

Last Updated 25 ಜುಲೈ 2018, 11:47 IST
ಅಕ್ಷರ ಗಾತ್ರ

ಹೈದರಾಬಾದ್‌: ಅರ್ಜುನ್‌ ರೆಡ್ಡಿ ಖ್ಯಾತಿಯ ವಿಜಯ್ ದೇವರಕೊಂಡ ಅಭಿನಯದ ’ಗೀತ ಗೋವಿಂದಂ’ ಸಿನಿಮಾದ ಟೀಸರ್ ಬಿಡುಗಡೆಯಾಗಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಭರ್ಜರಿ ಸದ್ದು ಮಾಡುತ್ತಿದೆ.

ಜುಲೈ 22ರಂದು ಬಿಡುಗಡೆಯಾದ ಈ ಚಿತ್ರದ ಟೀಸರ್‌ ಅನ್ನು 46 ಲಕ್ಷಕ್ಕೂ ಹೆಚ್ಚು ಜನರು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.ವಿಜಯ್‌ ದೇವರಕೊಂಡ ಜೊತೆಗೆ ಕನ್ನಡದ ಹುಡುಗಿರಶ್ಮಿಕಾ ಮಂದಣ್ಣ ನಟಿಸಿದ್ದಾರೆ. ಪರುಶುರಾಮ್ ನಿರ್ದೇಶಿಸಿರುವ ಈ ಚಿತ್ರಕ್ಕೆ ಗೋಪಿ ಸುಂದರ್ ಸಂಗೀತ ನೀಡಿದ್ದಾರೆ.

ಟೀಸರ್‌ನಲ್ಲಿ ಹಳ್ಳಿಯ ಚಿತ್ರಣವಿರುವ ಕಪ್ಪು ಬಿಳುಪಿನ ದೃಶ್ಯ ಅನಾವರಣಗೊಂಡಿದೆ. ಡಾ. ರಾಜ್‌ ಕುಮಾರ್ ಅಭಿನಯದ ’ಎರಡು ಕನಸು’ ಸಿನಿಮಾದ ತೆಲುಗು ಅವತರಿಣಿಕೆಯ ’ಎಂದೆಂದೂ ನಿನ್ನನು ಮರೆತು ’ ಸೂಪರ್ ಹಿಟ್‌ ಹಾಡಿನ ಟ್ಯೂನ್ ಸಿನಿ ಪ್ರಿಯರ ಮೆಚ್ಚುಗೆಗೆ ಪಾತ್ರವಾಗಿದೆ.

ಲವ್‌ ಮತ್ತು ಕಾಮಿಡಿಯ ಕಥಾ ಹಂದರ ಇರುವ ಈ ಸಿನಿಮಾ ಆಗಸ್ಟ್‌ ತಿಂಗಳಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT