ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಡಿಯಲು ‘ಗರ್ನಲ್‌’ ಸಿದ್ಧ

Last Updated 28 ಫೆಬ್ರುವರಿ 2019, 19:45 IST
ಅಕ್ಷರ ಗಾತ್ರ

ಜೆ. ಜೆ. ಶ್ರೀನಿವಾಸ್‌ ಅವರು ನಿರ್ದೇಶಿಸಿ, ಮುಖ್ಯಪಾತ್ರದಲ್ಲಿ ನಟಿಸಿರುವ ಸಸ್ಪೆನ್ಸ್‌, ಮರ್ಡರ್‌ ಮಿಸ್ಟ್ರಿ ‘ಗರ್ನಲ್‌’ ಸಿನಿಮಾದ ಆಡಿಯೊ ಹಾಗೂ ಟ್ರೇಲರ್‌ ಬಿಡುಗಡೆಯಾಗಿದೆ.

‘ಗರ್ನಲ್‌’ ಒಂದು ರೀತಿಯ ಸಿಡಿಮದ್ದು. ತುಳು ಭಾಷೆಯ ಈ ಪದ ಕೇಳಲು ಹಿತವೆನ್ನಿಸಿದ್ದರಿಂದ ಸಿನಿಮಾಗೆ ಆ ಹೆಸರನ್ನಿಟ್ಟಿದ್ದೇನೆ. ಸಿನಿಮಾದ ಕಥೆಯಲ್ಲಿ ಮಂಗಳೂರಿನ ಒಂದು ಎಳೆ ಇದ್ದರೂ, ಆ ಭಾಗಕ್ಕೆ ಸಂಬಂಧಿಸಿದ ಸಿನಿಮಾ ಅಲ್ಲ’ ಎಂದು ನಿರ್ದೇಶಕ ಶ್ರೀನಿವಾಸ್‌ ಸ್ಪಷ್ಟಪಡಿಸಿದರು.

ಹಿಂದೆ ‘ಮಂಡ್ಯದ ಹುಡುಗರು’ ಎಂಬ ಚಿತ್ರವನ್ನು ಶ್ರೀನಿವಾಸ್‌ ನಿರ್ದೇಶಿಸಿದ್ದರು. ಆದರೆ ಆ ಸಿನಿಮಾ ಹೆಚ್ಚು ಓಡಿರಲಿಲ್ಲ. ‘ಆ ಸಿನಿಮಾ ಬಿಡುಗಡೆಯ ಸಂದರ್ಭದಲ್ಲೇ ನೋಟ್‌ ಬ್ಯಾನ್‌ ಜಾರಿಯಾಯಿತು. ಪರಿಣಾಮ ನಮ್ಮ ಸಿನಿಮಾ ಸೋತಿತು. ಈ ಬಾರಿ ಹೆಚ್ಚು ಮುತುವರ್ಜಿ ವಹಿಸಿ ಕೆಲಸ ಮಾಡಿದ್ದೆವೆ’ ಎಂದರು.

‘ಸಿನಿಮಾದಲ್ಲಿ ಐದು ಪ್ರಮುಖ ಪಾತ್ರಗಳು ಬರುತ್ತವೆ. ಒಂದು ಪಾತ್ರವನ್ನು ನಾನೇ ಮಾಡಿದ್ದೇನೆ. ಉಳಿದ ಪಾತ್ರಗಳಲ್ಲಿ ರಾಘವ ನಾಗ್‌, ಪ್ರಭಾಸ್‌, ಎಂ.ಕೆ. ಮಠ ಹಾಗೂ ಫೈಟ್‌ ಮಾಸ್ಟರ್‌ ಶ್ರೀನಿವಾಸ ಜಿ.ಟಿ ಅಭಿನಯಿಸಿದ್ದಾರೆ. ನಟಿ ರೇಖಾಶ್ರೀ ಸಹ ಬಹುಮುಖ್ಯವಾದ ಪಾತ್ರದಲ್ಲಿ ಕಾಣಿಸಿದ್ದಾರೆ’ ಎಂಬ ಮಾಹಿತಿಯನ್ನೂ ಶ್ರೀನಿವಾಸ್‌ ಕೊಟ್ಟರು.

ಈ ಸಿನಿಮಾದಲ್ಲಿ ಒಂದೇ ಒಂದು ಹಾಡಿದೆ. ಎ.ಟಿ. ರವೀಶ್‌ ಸಂಗೀತ ಹಾಗೂ ಹಿನ್ನೆಲೆ ಸಂಗೀತ ನೀಡಿದ್ದಾರೆ. ಎಂ.ಬಿ. ಅರಳಿಕಟ್ಟಿ ಛಾಯಾಗ್ರಹಣ ಮಾಡಿದ್ದಾರೆ. ನವೀನ್ ಕುಮಾರ್‌ ಚಿತ್ರವನ್ನು ನಿರ್ಮಿಸಿದ್ದಾರೆ. ನಿರ್ಮಾಣ ಕಾರ್ಯ ಮುಗಿದಿದ್ದು, ಮಾರ್ಚ್‌ ಕೊನೆಯ ವಾರ ‘ಗರ್ನಲ್‌’ ತೆರೆಗೆ ಅಪ್ಪಳಿಸಲಿದೆ ಎಂದು ಶ್ರೀನಿವಾಸ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT