ಸೋಮವಾರ, ಮಾರ್ಚ್ 30, 2020
19 °C

‘ಗೋದ್ರಾ’ ತಂಡದ ಆರೋಗ್ಯ ಮನವಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೊರೊನಾ ವೈರಾಣು ಹರಡುವುದನ್ನು ತಡೆಯುವ ಅಭಿಯಾನದಲ್ಲಿ ಸೆಲೆಬ್ರಿಟಿಗಳನ್ನೂ ಸೇರಿಸಿಕೊಂಡು, ಜಾಗೃತಿ ಮೂಡಿಸುವ ಕೆಲಸವನ್ನು ಅವರಿಂದ ಮಾಡಿಸುವಂತೆ ‘ಗೋದ್ರಾ’ ಚಿತ್ರತಂಡವು ಸರ್ಕಾರಕ್ಕೆ ಮನವಿ ಮಾಡಿದೆ.

‘ಇಡೀ ಜಗತ್ತನ್ನೇ ತಲ್ಲಣಕ್ಕೆ ನೂಕಿರುವ ಕೊರೊನಾ ವೈರಸ್ ವಿರುದ್ಧದ ಹೋರಾಟದಲ್ಲಿ ಭಾರತವೂ ಹಲವು ಪ್ರಯತ್ನಗಳನ್ನು ಮಾಡುತ್ತಿದೆ. ವೈರಾಣು ಹರಡುವುದನ್ನು ತಡೆಯಲು ಹರಸಾಹಸ ಪಡುವಂತೆ ಆಗಿದೆ. ಜನರ ಅಸಹಕಾರ ಕೂಡ ಇದಕ್ಕೆ ಒಂದು ಕಾರಣ’ ಎಂದು ಗೋದ್ರಾ ಸಿನಿಮಾ ತಂಡ ಹೇಳಿದೆ. ಸತೀಶ್ ನೀನಾಸಂ ಅವರು ಇದರ ನಾಯಕ ನಟ. ಶ್ರದ್ಧಾ ಶ್ರೀನಾಥ್ ಅವರು ಇದರ ನಾಯಕಿ.

‘ಹಲವು ಜನ ಸಿನಿಮಾ ತಾರೆಯರು, ಕ್ರೀಡಾಪಟುಗಳು, ಗಣ್ಯರು ಕೊರೊನಾ ವಿರುದ್ಧ ಜಾಗೃತಿ ಮೂಡಿಸುವ ಕೆಲಸದಲ್ಲಿ ಈಗಾಗಲೇ ನಿರತರಾಗಿದ್ದಾರೆ. ಹೀಗೆ ಕೆಲಸ ಮಾಡುವವರ ಸಂಖ್ಯೆ ಇನ್ನೂ ಹೆಚ್ಚಬೇಕಿದೆ. ಯಾವುದನ್ನು ಪ್ರಚಾರ ಮಾಡಬೇಕು, ಯಾವುದು ಸುಳ್ಳು ಎನ್ನುವ ಕುರಿತು ಸರ್ಕಾರ ಮತ್ತು ಆರೋಗ್ಯ ಇಲಾಖೆ ಕಾಲ ಕಾಲಕ್ಕೆ ಮಾಹಿತಿ ಹಂಚಿಕೊಳ್ಳಬೇಕಿದೆ. ಅದು ಸೆಲೆಬ್ರಿಟಿಗಳಿಗೂ ತಲುಪಿದರೆ, ಅವರು ಅದನ್ನು ತಮ್ಮ ಸಾಮಾಜಿಕ ಜಾಲತಾಣ ಖಾತೆಗಳ ಮೂಲಕ ಹಂಚಿಕೊಳ್ಳಲು ಅನುಕೂಲ ಆಗುತ್ತವೆ. ಖ್ಯಾತ ಸೆಲೆಬ್ರಿಟಿಗಳನ್ನು ಆಯ್ಕೆ ಮಾಡಿಕೊಂಡು, ಸರ್ಕಾರವು ಅವರಿಂದ ಜಾಗೃತಿ ಮೂಡಿಸುವ ಕೆಲಸ ಮಾಡಿಸಬೇಕು’ ಎಂದು ಸಿನಿತಂಡ ಮನವಿಯಲ್ಲಿ ಹೇಳಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು