ಬೆಂಗಳೂರು:ದಕ್ಷಿಣ ಭಾರತದ ಖ್ಯಾತ ನಟಿ ನಯನತಾರಾ ಅವರಿಗೆ ಇಂದು (ನ.18) 35ನೇ ವರ್ಷದ ಹುಟ್ಟುಹಬ್ಬಸಂಭ್ರಮ. ಈಬಾರಿ ಪ್ರಿಯಕರನ ಜತೆ ಹುಟ್ಟುಹಬ್ಬ ಆಚರಿಸಿಕೊಂಡಿದ್ದು ವಿಶೇಷ.

ಈ ಸಲ ವಿಶೇಷವಾಗಿ ಜನ್ಮದಿನವನ್ನು ಆಚರಿಸಿಕೊಳ್ಳಬೇಕು ಎಂದು ಪ್ಲಾನ್ ಮಾಡಿದ್ದ ನಯನತಾರ, ಪ್ರಿಯಕರವಿಜ್ಞೇಶ್ ಶಿವನ್ ಜೊತೆ ನ್ಯೂರ್ಯಾಕ್‌ಗೆ ತೆರಳಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಈ ಫೋಟೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಸದ್ಯದಲ್ಲೇ ಈ ಜೋಡಿ ಮದುವೆಯಾಗಲಿದೆ ಎಂಬ ಮಾತುಗಳು ಕೇಳಿ ಬಂದಿವೆ.

ಸೈರಾ ನರಸಿಂಹ ರೆಡ್ಡಿ ಹಾಗೂ ಬಿಗಿಲ್ ಸಿನಿಮಾದಲ್ಲಿ ನಯನತಾರಾ ನಟಿಸಿದ್ದರು. ಈ ಎರಡು ಸಿನಿಮಾಗಳು ಭರ್ಜರಿ ಯಶಸ್ಸುಗಳಿಸುವ ಮೂಲಕ ನಯನತಾರಾಗೆ ಉತ್ತಮಹೆಸರು ತಂದುಕೊಟ್ಟಿವೆ. ಇದೀಗ ರಜನಿಕಾಂತ್ ನಾಯಕನಾಗಿ ನಟಿಸುತ್ತಿರುವದರ್ಬಾರ್ ಸಿನಿಮಾದಲ್ಲಿ ನಯನ ನಟಿಸುತ್ತಿದ್ದಾರೆ.

ಕಳೆದ 16 ವರ್ಷಗಳಿಂದ ನಯನತಾರಾ ಸಿನಿಮಾರಂಗದಲ್ಲಿ ಸಕ್ರಿಯರಾಗಿದ್ದಾರೆ. 2003ರಲ್ಲಿ ನಯನತಾರಾ ಬೆಳ್ಳಿ ಪರದೆ ಪ್ರವೇಶ ಮಾಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.