ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮಗಾ, ತುಸು ನಿಧಾನವಾಗಿ ಸಾಗು’

Last Updated 15 ಏಪ್ರಿಲ್ 2020, 19:30 IST
ಅಕ್ಷರ ಗಾತ್ರ

ಲಾಕ್‌ಡೌನ್‌ ಅವಧಿಯನ್ನು ಕೊಡಗಿನಲ್ಲಿ ಕಳೆಯುತ್ತಿದ್ದಾರೆ ಹರ್ಷಿಕಾ ಪೂಣಚ್ಚ. ಮೊದಲ ಹಂತದ 21 ದಿನಗಳ ಲಾಕ್‌ಡೌನ್‌ ಅವಧಿಯನ್ನು ಖುಷಿಯಿಂದಲೇ ಕಳೆದಿರುವುದಾಗಿ ಹೇಳುತ್ತಾರೆ ಅವರು. ಅದೇ ರೀತಿಯಲ್ಲಿ, ವಿಸ್ತರಣೆ ಕಂಡಿರುವ ಲಾಕ್‌ಡೌನ್‌ ಅವಧಿಯನ್ನೂ ಪಾಸಿಟಿವ್‌ ಆಗಿ ಕಳೆಯುವುದಾಗಿ ಹೇಳುತ್ತಾರೆ.

‘ಮೊದಲ ಒಂದೆರಡು ದಿನಗಳ ಅವಧಿಯಲ್ಲಿ ನನಗೆ ಕಿರಿಕಿರಿ ಆಯಿತು, ನಿಜ. ಆದರೆ ನಂತರ ನಾನು ಲಾಕ್‌ಡೌನ್‌ ಅವಧಿಯನ್ನು ಪಾಸಿಟಿವ್ ಆಗಿ ಸ್ವೀಕರಿಸಲು ಆರಂಭಿಸಿದೆ.ನನಗೆ ನನ್ನ ದಿನದ ಕೆಲಸದ ಒತ್ತಡಗಳ ನಡುವೆ, ಅಮ್ಮನ ಜೊತೆ ಕಾಲ ಕಳೆಯಲು ಸಮಯವೇ ಸಿಗುತ್ತಿರಲಿಲ್ಲ. ಈಗ ದೇವರು ನನಗೆ ನನ್ನ ಕುಟುಂಬದ ಜೊತೆ ಸಮಯ ಕಳೆಯಲು ಒಂದು ಬಿಡುವು ಕೊಟ್ಟಿದ್ದಾನೆ ಎನ್ನುವ ರೀತಿಯಲ್ಲಿ ಲಾಕ್‌ಡೌನ್‌ ಅವಧಿ ಸ್ವೀಕರಿಸಿದ್ದೇನೆ’ ಎಂದು ಹೇಳುತ್ತಾರೆ ಹರ್ಷಿಕಾ.

ನಗರ ಜೀವನ ಅನುಭವಿಸುತ್ತ ಮನುಷ್ಯನು ತೀರಾ ವೇಗವಾಗಿ ಓಡುತ್ತಿದ್ದ. ಆತ ಏಕೆ ಅಷ್ಟೊಂದು ವೇಗವಾಗಿ ಓಡುತ್ತಿದ್ದ ಎಂಬುದಕ್ಕೆ ಉತ್ತರವಿರಲಿಲ್ಲ. ಮನುಷ್ಯನಿಗೆ ತಲೆ ಎತ್ತಿ ನಕ್ಷತ್ರಗಳನ್ನು ನೋಡಲು ಕೂಡ ಸಮಯ ಇರುತ್ತಿರಲಿಲ್ಲ. ಮನೆಯ ಸದಸ್ಯರ ಜೊತೆ ಮಾತನಾಡುವುದಂತೂ ದೂರದ ಸಂಗತಿಯಾಗಿತ್ತು. ಹೀಗಿದ್ದ ಮನುಷ್ಯನಿಗೆ ದೇವರು, ‘ಮಗಾ, ತುಸು ನಿಧಾನವಾಗಿ ಸಾಗು’ ಎನ್ನುವ ಸಂದೇಶವನ್ನು ಈ ರೀತಿ ನೀಡಿದಂತಿದೆ ಎನ್ನುವುದು ಹರ್ಷಿಕಾ ಅವರ ಮಾತು.

ಈ ಅವಧಿಯನ್ನು ಹರ್ಷಿಕಾ ಅವರು ಒಂದಿಷ್ಟು ಅಡುಗೆಗಳನ್ನು ಕಲಿಯಲು ಕೂಡ ಬಳಸಿಕೊಳ್ಳುತ್ತಿದ್ದಾರೆ. ‘ನಾನು ಸಾಂಪ್ರದಾಯಿಕ ಕೊಡವ ಅಡುಗೆಗಳನ್ನು ಕಲಿಯುತ್ತ ಇದ್ದೇನೆ. ರುಚಿಕರ ಕೋಳಿ ಕರಿ, ನೂಲ್‌ಪುಟ್ ಇಂಥದ್ದನ್ನೆಲ್ಲ ಕಲಿಯುತ್ತಿದ್ದೇನೆ. ಒಂದಿಷ್ಟು ಕಜ್ಜಾಯಗಳನ್ನು ತಯಾರಿಸುವುದನ್ನು ಕೂಡ ಕಲಿಯುತ್ತಿದ್ದೇನೆ’ ಎಂದರು ಹರ್ಷಿಕಾ.

ಕೊಡಗಿನಲ್ಲಿ ಅವರು ಹೆಚ್ಚಿನ ಅವಧಿಯನ್ನು ಟಿ.ವಿ. ಮುಂದೆ ಕೂತು ಕಳೆಯುತ್ತಿಲ್ಲ. ತಾಯಿಯ ಜೊತೆ ಕೆಲವೊಂದು ಆಟಗಳನ್ನು ಆಡುವ ಮೂಲಕ ಸಮಯ ಕಳೆಯುತ್ತಾರೆ. ಆದರೆ, ಈ ಅವಧಿಯಲ್ಲಿ ಸಾಧ್ಯವಾದರೆ ‘ದಿಯಾ’ ಮತ್ತು ‘ಲವ್‌ ಮಾಕ್‌ಟೇಲ್‌’ ಸಿನಿಮಾ ವೀಕ್ಷಿಸಿ ಎಂದು ಸಲಹೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT