ಮಂಗಳವಾರ, ಆಗಸ್ಟ್ 3, 2021
28 °C

‘ಟ್ರಿಪಲ್ ಎಕ್ಸ್’ ಆಕ್ಷೇಪಾರ್ಹ ದೃಶ್ಯಕ್ಕೆ ಕತ್ತರಿ ಹಾಕಿದ ಏಕ್ತಾ ಕಪೂರ್‌

ಪಿಟಿಐ Updated:

ಅಕ್ಷರ ಗಾತ್ರ : | |

ಮುಂಬೈ: ‘ಟ್ರಿಪಲ್ ಎಕ್ಸ್’ ವೆಬ್ ಶೋ ಸೀಸನ್ 2 ಆವೃತ್ತಿಗಳ ಮೂಲಕ ಪ್ರಚೋದನಾತ್ಮಕ ಭಾವನೆ ಬೆಳೆಸುತ್ತಿದ್ದಾರೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ ಆಕ್ಷೇಪಾರ್ಹ ದೃಶ್ಯಗಳನ್ನು ನಿರ್ಮಾಪಕಿ ಏಕ್ತಾ ಕಪೂರ್ ಕೈಬಿಟ್ಟಿದ್ದಾರೆ.

ಈ ಆರೋಪಗಳ ಕಾರಣಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ತಮಗೆ ಅತ್ಯಾಚಾರ ಬೆದರಿಕೆ ಬಂದಿದ್ದು ಹಾಗೂ ನಿಂದಿಸುವ ಬೆಳವಣಿಗೆಗಳನ್ನು ನಾನು ವಿರೋಧಿಸುತ್ತೇನೆ ಎಂದು ಅವರು ಹೇಳಿದ್ದಾರೆ.

ಪ್ರಚೋದನಾತ್ಮಕ ಭಾವನೆ ಬೆಳೆಸುತ್ತಿದ್ದಾರೆ ಎಂಬ ಆರೋಪದಡಿ ಏಕ್ತಾ ಕಪೂರ್ ಮತ್ತು ಇತರೆ ಇಬ್ಬರ ವಿರುದ್ಧ ಮಧ್ಯಪ್ರದೇಶದ ಇಂದೋರ್ ನಲ್ಲಿ ದೂರು ದಾಖಲಾಗಿತ್ತು. ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ. ರಾಷ್ಟ್ರಲಾಂಛನಗಳನ್ನು ತಪ್ಪಾಗಿ ಬಳಸಿಕೊಂಡಿದ್ದಾರೆ ಎಂದು ಆರೋಪಿಸಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಟ್ರಿಪಲ್ ಎಕ್ಸ್ ಶೋದಲ್ಲಿ ಭಾರತೀಯ ಸೇನೆಯ ಸಮವಸ್ತ್ರವನ್ನು ಆಕ್ಷೇಪಾರ್ಹ ರೀತಿಯಲ್ಲಿ ಬಳಸಲಾಗಿದೆ ಎಂಬ ನಿರ್ದಿಷ್ಟ ದೃಶ್ಯವನ್ನು ಉಲ್ಲೇಖಿಸಿ ಎಫ್ಐಆರ್ ದಾಖಲು ಮಾಡಲಾಗಿತ್ತು.

ಬಾಲಾಜಿ ಟೆಲಿಫಿಲ್ಮ್ಸ್ ಮಾಲೀಕತ್ವದ ಆಲ್ಟ್ ಬಾಲಾಜಿ ಸ್ಥಾಪಕಿಯಾದ ಏಕ್ತಾ ಅವರು, ನಮ್ಮ ಸಂಸ್ಥೆಗೆ ಭಾರತೀಯ ಸೇನೆ ಕುರಿತು ಅತೀವವಾದ ಗೌರವವಿದೆ. ನಮ್ಮ ರಕ್ಷಣೆಗಾಗಿ ಸೇನೆಯ ಕೊಡುಗೆ ಗಣನೀಯ. ಈಗ ಚರ್ಚಾಸ್ಪದವಾಗಿರುವ ದೃಶ್ಯವನ್ನು ನಾವು ತೆಗೆದಿದ್ದೇವೆ. ನಮ್ಮ ಕಡೆಯಿಂದ ಅಗತ್ಯ ಕ್ರಮವಹಿಸಿದ್ದೇವೆ ಎಂದರು.

ಉದ್ದೇಶಪೂರ್ವಕವಲ್ಲದ ಈ ದೃಶ್ಯದಿಂದ ಯಾರದ್ದಾದರೂ ಭಾವನೆಗಳಿಗೆ ಧಕ್ಕೆ ಆಗಿದ್ದರೆ ಅದಕ್ಕಾಗಿ ಕ್ಷಮೆ ಕೋರುತ್ತೇವೆ. ಆದರೆ, ಇದೇ ಕಾರಣಕ್ಕೆ ಟ್ರೋಲ್ ಮೂಲಕ ತಮಗೆ ಅತ್ಯಾಚಾರ ಬೆದರಿಕೆ ಬಂದಿದ್ದು ಹಾಗೂ ಕಟುವಾಗಿ ನಿಂದಿಸಿದ್ದನ್ನು ಸಹಿಸಲಾಗದು ಎಂದು ಹೇಳಿಕೆಯಲ್ಲಿ ಅವರು ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು