ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

’ಜೋಡಿ ಹಕ್ಕಿ' ಖ್ಯಾತಿಯ ಅರ್ಜುನ್‌ ಕಪೂರ್‌, ಮಲೈಕಾ ಬ್ರೇಕಪ್‌? ಇಲ್ಲಿದೆ ಸತ್ಯ...

Last Updated 12 ಜನವರಿ 2022, 12:49 IST
ಅಕ್ಷರ ಗಾತ್ರ

ಬಾಲಿವುಡ್‌ ಪ್ರಣಯ ಪಕ್ಷಿಗಳು ಎಂದೇ ಖ್ಯಾತಿಯಾಗಿರುವನಟ ಅರ್ಜುನ್ ಕಪೂರ್ ಹಾಗೂ ನಟಿ ಮಲೈಕಾ ಅರೋರಾ ಅವರ ಲವ್ ಲೈಫ್ ಬಗ್ಗೆ ಗಾಳಿ ಸುದ್ದಿಗಳು ಹರಿದಾಡುತ್ತಿದ್ದು ಸದ್ಯ ಅವರು ಬೇರೆಯಾಗಿದ್ದಾರೆ ಎನ್ನಲಾಗುತ್ತಿದೆ.

ಇದಕ್ಕೆ ಸಾಕ್ಷಿ ಎಂಬಂತೆ ಕಳೆದ 6 ದಿನಗಳಿಂದ ಮಲೈಕಾಮನೆಯಿಂದ ಹೊರ ಬಂದಿಲ್ಲ, ಏಕಾಂಗಿಯಾಗಿ ಇದ್ದಾರೆ ಎಂದು ಮಲೈಕಾ ಗೆಳತಿಯರು ಹೇಳಿಕೊಂಡಿದ್ದಾರೆ. ಇನ್ನು ಅರ್ಜುನ್‌ ಕಪೂರ್‌ತಂಗಿ ರಿಯಾ ಕಪೂರ್‌ ಮನೆಗೆ ಊಟಕ್ಕೆ ಹೋಗಿದ್ದರೂ ಮಲೈಕಾ ಮನೆಗೆ ಹೋಗಿಲ್ಲ ಎಂದು ರಿಯಾಕಪೂರ್‌ಮ್ಯಾನೇಜರ್‌ ಖಚಿತಪಡಿಸಿದ್ದಾರೆ. ಮಲೈಕಾ ಮನೆ ಕೂಡ ರಿಯಾ ಕಪೂರ್‌ ನಿವಾಸದ ಪಕ್ಕದಲ್ಲಿರುವುದು ವಿಶೇಷ.

ಮಲೈಕಾ ಜತೆಯಲ್ಲಿರುವ ಫೋಟೊವನ್ನು ಶೇರ್‌ ಮಾಡಿ ಅರ್ಜುನ್‌ ಕಪೂರ್‌ ಹೊಸ ವರ್ಷಕ್ಕೆ ಶುಭಾಶಯಗಳನ್ನು ಕೋರಿದ್ದರು. ಅದೇ ಪೋಸ್ಟ್‌ ಮರು ಹಂಚಿಕೆ ಮಾಡಿ ಮಲೈಕಾ ಕೂಡ ಶುಭಾಶಯ ಹೇಳಿದ್ದರು. ಇದಾದ ಬಳಿಕ ಇಬ್ಬರು ಯಾವುದೇ ಪೋಸ್ಟ್‌ಗಳನ್ನು ಹಂಚಿಕೊಂಡಿಲ್ಲ. ಇಬ್ಬರು ಜನವರಿ 5ರಿಂದ ಬೇರೆಯಾಗಿದ್ದಾರೆ ಎಂಬ ಮಾತುಗಳು ಬಾಲಿವುಡ್‌ ಅಂಗಳದಲ್ಲಿ ಕೇಳಿಬಂದಿವೆ.

ಸಾರ್ವಜನಿಕವಾಗಿ ಹಾಗೂ ಸಾಮಾಜಿಕ ಮಾಧ್ಯಮಗಳಲ್ಲಿ ಕಾಣಿಸಿಕೊಳ್ಳದ ಈ ಜೋಡಿ ಯಾವುದೇ ಅಧಿಕೃತ ನಿರ್ಧಾರವನ್ನು ಪ್ರಕಟಿಸಿಲ್ಲ. ಸಾಮಾಜಿಕ ಮಾಧ್ಯಮಗಳ ಮೂಲಕವೇ ತಮ್ಮ ಬ್ರೇಕಪ್‌ ವಿಚಾರವನ್ನು ಹಂಚಿಕೊಳ್ಳುವುದಾಗಿ ಅರ್ಜುನ್‌ ಹೇಳಿದ್ದಾರೆ ಎಂದು ಅವರ ಆಪ್ತರು ಖಚಿತಪಡಿಸಿದ್ದಾರೆ ಎಂದು ಖಾಸಗಿ ಸುದ್ದಿವಾಹಿನಿಗಳು ವರದಿ ಮಾಡಿವೆ.

ಕಳೆದ ಕೆಲವರ್ಷಗಳಿಂದಲೂ ಅರ್ಜುನ್ಹಾಗೂ ಮಲೈಕಾ ಅವರ ವಯಸ್ಸಿನ ಅಂತರವನ್ನಿಟ್ಟುಕೊಂಡು ನೆಟ್ಟಿಗರು ಟ್ರೋಲ್ ಮಾಡುತ್ತಿದ್ದರು. 36 ವರ್ಷದ ಅರ್ಜುನ್ ಮತ್ತು 48 ವರ್ಷದ ಮಲೈಕಾ ಡೇಟಿಂಗ್‌ ಮಾಡುತ್ತಿರುವುದು ಬಾಲಿವುಡ್‌ನಲ್ಲಿಚರ್ಚೆಯಾಗುತ್ತಿತ್ತು. ಈ ಜೋಡಿ 2016ರಿಂದಲೂ ಸಹ ಜೀವನ ನಡೆಸುತ್ತಿದ್ದಾರೆ.

ತಮ್ಮ ಬಗ್ಗೆ ಟ್ರೋಲ್ ಮಾಡುವವರಿಗೆ ಅರ್ಜುನ್‌ ಹಾಗೂ ಮಲೈಕಾ ಪದೇ ಪದೇ ಚಾಟಿ ಬೀಸುತ್ತಿದ್ದರು. ವಯಸ್ಸಿನ ಆಧಾರದ ಮೇಲೆ ಸಂಬಂಧವನ್ನು ಸಂದರ್ಭೋಚಿತಗೊಳಿಸುವುದು ಅವಿವೇಕದ ಆಲೋಚನಾ ಪ್ರಕ್ರಿಯೆ ಎಂಬ ಪ್ರಬುದ್ಧತೆಯ ಮಾತುಗಳನ್ನು ಅರ್ಜುನ್‌ ಹೇಳುತ್ತಿದ್ದರು. ಇವರು ಲೇಡಿ ಕಿಲ್ಲರ್‌ ಸಿನಿಮಾ ಸೇರಿದಂತೆ ಹಲವು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.

48 ವರ್ಷದ ಮಲೈಕಾ ಅರೋರ, ‘ವಿ’ ಚಾನೆಲ್ ಮೂಲಕ ತಮ್ಮ ವೃತ್ತಿಬದುಕನ್ನು ಆರಂಭಿಸಿದವರು. ಕಿರುತೆರೆ ಮತ್ತು ಬೆಳ್ಳಿತೆರೆಯಲ್ಲಿ ಕಾಲೂರಿದ ಮೇಲೆ ಸಲ್ಮಾನ್‌ ಖಾನ್‌ ಸಹೋದರ ಅರ್ಬಾಜ್ ಖಾನ್ ಅವರನ್ನು ಇಷ್ಟಪಟ್ಟು ಮದುವೆಯಾಗಿದ್ದರು. ಅವರಿಂದ ವಿಚ್ಛೇದನ ಪಡೆದು ಅರ್ಜುನ್ ಕಪೂರ್ ಜತೆಗೆ 6 ವರ್ಷಗಳಿಂದ ಸಹಜೀವನ ನಡೆಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT