ಶುಕ್ರವಾರ, ಜನವರಿ 27, 2023
17 °C

ಭೂಗತ ಜಗತ್ತಿನ ‘ಹೆಡ್‌ಬುಷ್‌’ನಲ್ಲಿ ಲೂಸ್‌ ಮಾದ ಯೋಗಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಗ್ನಿ ಶ್ರೀಧರ್‌ ಅವರ ಆತ್ಮಕಥೆ ‘ದಾದಾಗಿರಿಯ ಆ ದಿನಗಳು’ ಕೃತಿಯನ್ನು ಆಧರಿಸಿ ನಿರ್ಮಾಣಗೊಳ್ಳುತ್ತಿರುವ ಚಿತ್ರ ‘ಹೆಡ್‌ಬುಷ್‌’–ದಿ ರೈಸ್‌ ಆ್ಯಂಡ್‌ ರೈಸ್‌ ಆಫ್‌ ಬೆಂಗಳೂರು ಅಂಡರ್‌ವಲ್ಡ್‌ ಭಾಗ–1ರಲ್ಲಿ ‘ಲೂಸ್‌ ಮಾದ’ ಖ್ಯಾತಿಯ ನಟ ಯೋಗೇಶ್‌ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳಲಿದ್ದಾರೆ. 

ಇದನ್ನೂ ಓದಿ: 

ಚಿತ್ರದಲ್ಲಿ ಎಂ.ಪಿ ಜಯರಾಜ್‌ ಪಾತ್ರದಲ್ಲಿ ನಟ ‘ಡಾಲಿ’ ಧನಂಜಯ್‌ ಕಾಣಿಸಿಕೊಂಡಿದ್ದು, ಇವರೇ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಚಿತ್ರತಂಡಕ್ಕೆ ಯೋಗೇಶ್‌ ಅವರನ್ನು ಸ್ವಾಗತಿಸಿ ಧನಂಜಯ್‌ ಬುಧವಾರ ಟ್ವೀಟ್‌ ಮಾಡಿದ್ದಾರೆ. ಇತ್ತೀಚೆಗೆ ಯೋಗೇಶ್‌ ಅವರ ಹೊಸ ಚಿತ್ರ ‘ಲಂಕೆ’ಯ ಹಾಡಿನ ಬಿಡುಗಡೆ ಸಮಾರಂಭದಲ್ಲೇ ಈ ಕುರಿತು ಮಾತನಾಡಿದ್ದ ಧನಂಜಯ್‌, ‘ಯೋಗಿ ಒಳ್ಳೆಯ ಸ್ನೇಹಿತ. ‘ಹೆಡ್‌ಬುಷ್‌’ನಲ್ಲಿ ಪ್ರಮುಖ ಪಾತ್ರದಲ್ಲಿ ಯೋಗಿ ಕಾಣಿಸಿಕೊಳ್ಳಲಿದ್ದಾರೆ. ಯೋಗಿ ಒಬ್ಬ ನ್ಯಾಚುರಲ್‌, ಫೈನ್‌ ನಟ. ಯಾವ ಪಾತ್ರಕ್ಕೂ ಬೇಕಾದರೂ ಹೊಂದಿಕೊಳ್ಳಬಲ್ಲ ಸಾಮರ್ಥ್ಯ ಅವರಲ್ಲಿದೆ. ಸಣ್ಣ ಪ್ರಾಯದಲ್ಲೇ ಸೂಪರ್‌ಸ್ಟಾರ್‌ ಆಗಿ ಎಲ್ಲ ಅಡೆತಡೆಗಳನ್ನು ದಾಟಿ ಈ ಹಂತಕ್ಕೆ ಬಂದ ಕಲಾವಿದ. ಇವರ ಸಾಮರ್ಥ್ಯವನ್ನು ಪ್ರೇಕ್ಷಕರು ಇನ್ನು ನೋಡಬೇಕಷ್ಟೇ’ ಎಂದಿದ್ದರು.  

ಡಾಲಿ ಪಿಕ್ಚರ್ಸ್‌ ಮತ್ತು ಸೋಮಣ್ಣ ಟಾಕೀಸ್‌ ಜಂಟಿಯಾಗಿ ನಿರ್ಮಾಣ ಮಾಡುತ್ತಿರುವ ‘ಹೆಡ್‌ಬುಷ್‌’ ಚಿತ್ರಕ್ಕೆ, ಅಗ್ನಿ ಶ್ರೀಧರ್‌ ಅವರು ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿದ್ದಾರೆ. ಚಿತ್ರವನ್ನು ಶೂನ್ಯ ಅವರು ನಿರ್ದೇಶಿಸುತ್ತಿದ್ದಾರೆ. ಚಿತ್ರಕ್ಕೆ ಶರಣ್‌ ರಾಜ್‌ ಸಂಗೀತವಿದೆ. ತೆಲುಗಿನ ಖ್ಯಾತ ನಟಿ ಪಾಯಲ್‌ ರಾಜ್‌ಪುತ್‌ ನಾಯಕಿಯಾಗಿ ನಟಿಸುತ್ತಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು