ಭಾನುವಾರ, 21 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

'ಹೇರಾ ಫೇರಿ 3': ಸೆಟ್ಟೇರುತ್ತಿದೆ ಅಕ್ಷಯ್-ಸುನಿಲ್ ನಟನೆಯ ಚಿತ್ರ

Last Updated 1 ಮಾರ್ಚ್ 2023, 9:16 IST
ಅಕ್ಷರ ಗಾತ್ರ

ಬಾಲಿವುಡ್‌ನ ಜನಪ್ರಿಯ ಹೇರಾ ಫೇರಿ ಸಿನಿಮಾದ ಮೂರನೇ ಭಾಗ ಶೀಘ್ರದಲ್ಲೇ ಸೆಟ್ಟೇರಲಿದೆ ಎಂದು ನಟ ಸುನಿಲ್ ಶೆಟ್ಟಿ ಖಚಿತಪಡಿಸಿದ್ದಾರೆ.

ನಟ ಅಕ್ಷಯ್ ಕುಮಾರ್ ಹಾಗೂ ಪರೇಶ್ ರಾವಲ್ ಜೊತೆ ಅಭಿನಯಿಸಲು ಎದುರು ನೋಡುತ್ತಿರುವುದಾಗಿ ಸುನಿಲ್ ಶೆಟ್ಟಿ ತಿಳಿಸಿದ್ದಾರೆ.

'ಕೊನೆಗೂ ಹೇರಾ ಫೇರಿ 3 ನನಸಾಗುತ್ತಿದೆ. ಪರೇಶ್ ಹಾಗೂ ಅಕ್ಕಿ (ಅಕ್ಷಯ್) ಜೊತೆ ಕೆಲಸ ಮಾಡುವುದನ್ನು ಎದುರು ನೋಡುತ್ತಿದ್ದೇನೆ. ಎಲ್ಲ ಒಳ್ಳೆಯ ಕೆಲಸಗಳಂತೆ ಇದು ಕೂಡ ಆರಂಭವಾಗಲು ಸ್ವಲ್ಪ ಸಮಯ ತಗುಲಿತು. ಕೊನೆಗೂ ಈ ಪ್ರಶ್ನೆಗೆ ಉತ್ತರ ಸಿಗುವುದರೊಂದಿಗೆ ನಿರಾಳತೆ ಮೂಡಿದೆ' ಎಂದು ಹೇಳಿದ್ದಾರೆ.

2000ನೇ ಇಸವಿಯಲ್ಲಿ ಹಾಸ್ಯ ಭರಿತ 'ಹೇರಾ ಫೇರಿ' ಸಿನಿಮಾದ ಮೊದಲನೇ ಭಾಗ ಬಿಡುಗಡೆಯಾಗಿತ್ತು. ಪ್ರಮುಖವಾಗಿಯೂ ಪರೇಶ್, ಅಕ್ಷಯ್ ಹಾಗೂ ಸುನಿಲ್ ಅವರ ಅಭಿನಯ ಜನಮನ್ನಣೆಗೆ ಪಾತ್ರವಾಯಿತು.

2006ರಲ್ಲಿ 'ಫಿರ್ ಹೇರಾ ಫೇರಿ' ಎಂಬ ಹೆಸರಿನಲ್ಲಿ ಎರಡನೇ ಭಾಗ ಬಿಡುಗಡೆಯಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT