ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಣದಂತೆ ಮಾಯವಾದನೋ: 'ಅಪ್ಪು' ಗಾಯನದ ಟಾಪ್‌ ಹಾಡುಗಳು

Last Updated 29 ಅಕ್ಟೋಬರ್ 2021, 9:50 IST
ಅಕ್ಷರ ಗಾತ್ರ

ಕನ್ನಡ ಚಿತ್ರರಂಗದಲ್ಲಿ ಅದ್ಭುತ ಗಾಯನ ಮೂಲಕ ಪುನೀತ್‌ ರಾಜ್‌ಕುಮಾರ್‌ ಗಾಯಕರಾಗಿಯೂ ಚಿರಪರಿಚಿತ. ಅದ್ಭುತ ಕಂಠಸಿರಿಯ ಮೂಲಕ ಕನ್ನಡಿಗರ ಮನ ಗೆದ್ದಿದ್ದಾರೆ. ಬೆಟ್ಟದ ಹೂವು ಚಿತ್ರದಲ್ಲಿಬಾಲನಟನಾಗಿ ರಾಷ್ಟ್ರ ಪ್ರಶಸ್ತಿಗೆ ಭಾಜನರಾದ 'ಅಪ್ಪು' ಕನ್ನಡದರಾಜರತ್ನ. ಅಭಿಮಾನಿಗಳು ಎಂದಿಗೂ ಮರೆಯಲಾಗದಪುನೀತ್‌ ರಾಜ್‌ಕುಮಾರ್‌ಹಾಡಿರುವ ಟಾಪ್‌ 10 ಹಾಡುಗಳ ಪಟ್ಟಿ ಇಲ್ಲಿದೆ.

1. ಕಾಣದಂತೆ ಮಾಯವಾದನು
ಚಿತ್ರ: ಚಲಿಸುವ ಮೋಡಗಳು (1982).
ಡಾ. ರಾಜ್‌ ಕುಮಾರ್‌ ಅಭಿನಯದ 'ಚಲಿಸುವ ಮೋಡಗಳು' ಚಿತ್ರದಲ್ಲಿ ರಾಮು ಪಾತ್ರವನ್ನು ನಿರ್ವಹಿಸಿದ್ದ ಪುನೀತ್‌, 'ಕಾಣದಂತೆ ಮಾಯವಾದನು' ಹಾಡನ್ನು ಹಾಡಿದ್ದರು. ಉತ್ತಮ ನಟನೆಗೆ ಕರ್ನಾಟಕ ರಾಜ್ಯ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು.

2. ತಾಲಿಬಾನ್‌ ಅಲ್ಲಾ ಅಲ್ಲಾ
ಚಿತ್ರ: ಅಪ್ಪು (2002)
ಪುನೀತ್‌ ರಾಜ್‌ಕುಮಾರ್‌ ಮತ್ತು ರಕ್ಷಿತಾ ಜೋಡಿಯ ಮೋಡಿಯಲ್ಲಿ ಮೂಡಿಬಂದ ಅಪ್ಪು ಚಿತ್ರದಲ್ಲಿ 'ತಾಲಿಬಾನ್‌ ಅಲ್ಲಾ ಅಲ್ಲಾ' ಹಾಡಿಗೆ ಸ್ವತಃ ಕಂಠದಾನ ಮಾಡಿದ್ದರು. ಉಪೇಂದ್ರರ ರಚನೆಯಲ್ಲಿ ಮೂಡಿಬಂದ ಗೀತೆಗೆ ಪುನೀತ್‌ ಧ್ವನಿ ಅದ್ಭುತ ಮ್ಯಾಜಿಕ್‌ ಸೃಷ್ಟಿಸಿತು. ಕಾಲೇಜು ಹುಡುಗರ ಗುನುಗುನಿಸುವ ಧ್ವನಿಯಾಯಿತು.

3. ಜೊತೆ ಜೊತೆಯಲಿ
ಚಿತ್ರ: ವಂಶಿ (2008)
ಗಾಯಕಿ ಶ್ರೇಯಾ ಗೋಷಾಲ್‌ ಜೊತೆ ಜೊತೆ ಜೊತೆಯಲಿ ಹಾಡನ್ನು ಪುನೀತ್ ಹಾಡಿದರು. ರಾಮ್‌ ನಾರಾಯಣ್‌ ಗೀತೆ ರಚನೆಕಾರರು.

4. ಹೊಸ ಗಾನ ಬಜಾನಾ
ಚಿತ್ರ: ರಾಮ್‌
ಪುನೀತ್‌ ಮತ್ತು ಪ್ರಿಯಾಮಣಿ ಜೋಡಿಯಲ್ಲಿ ಮೂಡಿಬಂದ ಚಿತ್ರ 'ರಾಮ್‌'ನ ಈ ಹಾಡು ಹೊಸ ಟ್ರೆಂಡ್‌ಅನ್ನು ಸೃಷ್ಟಿಸಿತ್ತು. ಯೋಗರಾಜ್‌ ಭಟ್‌ ಬರೆದ ಸಾಲುಗಳನ್ನು ಪುನೀತ್‌ ಅದ್ಭುತವಾಗಿ ಹಾಡಿದ್ದಾರೆ.

5. ಮೈಲಾಪುರ ಮೈಲಾರಿ
ಚಿತ್ರ: ಮೈಲಾರಿ (2010)
ಅಣ್ಣ ಶಿವರಾಜ್‌ ಕುಮಾರ್‌ ಅಭಿನಯದ ಮೈಲಾರಿ ಚಿತ್ರದ ಈ ಹಾಡಿಗೆ ಪುನೀತ್‌ ಧ್ವನಿ ನೀಡಿದ್ದಾರೆ. ಕವಿರಾಜ್‌ ಬರೆದ ಗೀತೆಗೆ ಗುರುಕಿರಣ್‌ ಸಂಕಲನವಿದೆ.

6. ಕಣ್ಣ ಸನ್ನೆಯಿಂದಲೇನೆ
ಚಿತ್ರ: ಅಕಿರ (2016)
ಬಿ ಅಜನೀಶ್‌ ಲೋಕನಾಥ್‌ ಕಂಪೋಸ್‌ ಮಾಡಿರುವ ಈ ಗೀತೆಗೆ ಪುನೀತ್‌ ಧ್ವನಿಯಾಗಿದ್ದಾರೆ.

7. ಜನಕ್‌ ಜನಕ್‌
ಚಿತ್ರ: ರನ್‌ ಆ್ಯಂಟನಿ (2016)
ವಿನಯ್‌ ರಾಜ್‌ಕುಮಾರ್‌ ಅಭಿನಯದ ಚಿತ್ರದ ಜನಕ್ ಜನಕ್ ಹಾಡಿಗೆ ಪುನೀತ್ ಧ್ವನಿಯಾಗಿದ್ದಾರೆ. ವಿ.ನಾಗೇಂದ್ರ ಪ್ರಸಾದ್‌ ರಚನೆಯಿರುವ ಮಣಿಕಾಂತ್‌ ಕದ್ರಿ ಅವರ ಸಂಕಲನವಿರುವ ಈ ಹಾಡು ಭಾರಿ ಮೆಚ್ಚು ಪಡೆಯಿತು.

8. ಅಭಿಮಾನಿಗಳೇ ನಮ್ಮನೆ ದೇವ್ರು
ಚಿತ್ರ: ದೊಡ್ಮನೆ ಹುಡ್ಗ (2016)
ಅಭಿಮಾನಿಗಳನ್ನು ದೇವರಾಗಿ ಮೆರೆಸಿದ ರಾಜ್‌ಕುಮಾರ್‌ ಕುಟಂಬದ ಸಾಲುಗಳಿರುವ ಈ ಹಾಡನ್ನು ಯೋಗರಾಜ್‌ ಭಟ್‌ ಬರೆದಿದ್ದಾರೆ. ವಿ. ಹರಿಕೃಷ್ಣ ಸಂಗೀತವಿರುವ ಈ ಹಾಡನ್ನು ಪುನೀತ್‌ ಅಭಿಮಾನಿಗಳು ಬಹುವಾಗಿ ಹಚ್ಚಿಕೊಂಡಿದ್ದಾರೆ.



9. ಯಾಕಿಂಗಾಗಿದೆ
ಚಿತ್ರ: ರಾಜಕುಮಾರ(2017)
ಯೋಗರಾಜ್‌ ಭಟ್‌ ಬರೆದ ಹಾಡಿದು. ಗಾಯನ ಮತ್ತು ಅಭಿನಯದ ಮೂಲಕ ಪುನೀತ್‌ ರಾಜ್‌ಕುಮಾರ್‌ ಜನಮನಸೂರೆಗೊಂಡರು.

10. ಯೇನ್‌ ಮಾಡೋದು ಸ್ವಾಮಿ
ಚಿತ್ರ: ಫ್ರೆಂಚ್‌ ಬಿರಿಯಾನಿ (2020)
ಯುವಕರು, ಮಕ್ಕಳು ಎನ್ನದೆ ಹೆಚ್ಚಿನ ಕನ್ನಡಿಗರ ಬಾಯಲ್ಲಿ ಬರುವ ಹಾಡಿದು. ವಾಸುಕಿ ವೈಭವ್‌ ಮತ್ತು ಅವಿನಾಶ್‌ ಬಲೆಕ್ಕಾಲ ರಚಿಸಿರುವ ವಿಭಿನ್ನ ಹಾಡಿಗೆ ಪುನೀತ್‌ ಧ್ವನಿಯನ್ನು ಹೊರತು ಪಡಿಸಿ ಇನ್ಯಾವ ಗಾಯಕನ ಧ್ವನಿಯೂ ಹೊಂದಿಕೆಯಾಗದು ಎಂದೆನಿಸುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT