ಸೋಮವಾರ, ಜುಲೈ 4, 2022
21 °C

ಹೊಸ ಚಿತ್ರದಲ್ಲಿ ಹೃತಿಕ್‌ ಜೊತೆ ನಟಿಸಲಿದ್ದಾರೆ ಸಾರಾ, ಧನುಷ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

'ಕೇದಾರನಾಥ್' ಸಿನಿಮಾದ ಮೂಲಕ ಬಾಲಿವುಡ್‌ಗೆ ಕಾಲಿಟ್ಟ ನಟಿ ಸಾರಾ ಅಲಿಖಾನ್‌ ಈಗ ಬಹುಬೇಡಿಕೆಯ ನಟಿಯಾಗಿ ಗುರುತಿಸಿಕೊಳ್ಳುತ್ತಿದ್ದಾರೆ. ನಟ ವರುಣ್‌ ಧವನ್‌ ಜೊತೆ ಕೂಲಿ ನಂ.1 ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈಗ ಆನಂದ್‌ ಎಲ್‌. ರಾಯ್‌ ಅವರ ಮುಂದಿನ ಚಿತ್ರದಲ್ಲಿ ಹೃತಿಕ್‌ ರೋಷನ್‌ ಹಾಗೂ ಧನುಷ್‌ ಜೊತೆಗೂ ನಟಿಸಲಿದ್ದಾರೆ.

ಹೃತಿಕ್‌ ಜೊತೆ ಆನಂದ್‌ ಎಲ್‌. ರಾಯ್‌ ಸಿನಿಮಾ ಬಗ್ಗೆ ಮಾತುಕತೆ ನಡೆಸಿದ್ದಾರೆ. ಇನ್ನೂ ಹೆಸರಿಡದ ಆ ಚಿತ್ರದಲ್ಲಿ ಹೃತಿಕ್‌ ಜೊತೆಗೆ ಸಾರಾ ಅಲಿಖಾನ್‌ ಮತ್ತು ತಮಿಳು ನಟ ಧನುಷ್‌ ನಟಿಸುತ್ತಿದ್ದಾರೆ.

ಸಾರಾ ಆಲಿಖಾನ್‌ ಈ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದು, ರಾಯ್‌ ಅವರನ್ನು ತಿಂಗಳ ಹಿಂದೆ, ಅಂಧೇರಿಯಲ್ಲಿನ ಕಚೇರಿಯಲ್ಲಿ ಭೇಟಿ ಮಾಡಿದ್ದರು.

ರಾಯ್‌, ಸಾರಾ ಎರಡು ಚಿತ್ರಗಳ ಬಗ್ಗೆ ಮಾತುಕತೆ ನಡೆಸಿದ್ದರು. ಧನುಷ್‌ ಹಾಗೂ ಹೃತಿಕ್‌ ಇಬ್ಬರ ಜೊತೆಯೂ ಸಾರಾ ರೊಮಾನ್ಸ್‌ ಮಾಡಲಿದ್ದಾರೆ ಎಂದು ತಂಡ ಹೇಳಿಕೊಂಡಿದೆ. ಸಾರಾ, ಇಮ್ತಿಯಾಜ್‌ ಆಲಿ ಅವರ ‘ಆಜ್‌ಕಲ್‌’ ಸಿನಿಮಾದಲ್ಲಿ ಕಾರ್ತಿಕ್‌ ಆರ್ಯನ್‌ ಜೊತೆ ನಟಿಸುತ್ತಿದ್ದಾರೆ. ಇದು 2009ರಲ್ಲಿ ಬಿಡುಗಡೆಯಾಗಿದ್ದ ‘ಲವ್‌ ಆಜ್‌ ಕಲ್‌’ ಸಿನಿಮಾದ ಸೀಕ್ವೆಲ್‌. 

ಹೃತಿಕ್‌ ‘ಸತ್ತೇ ಪೆ ಸತ್ತಾ’ ರಿಮೇಕ್‌ ಚಿತ್ರದಲ್ಲಿ ನಟಿಸುತ್ತಿದ್ದಾರೆ.

ಧನುಷ್‌ ಹಾಗೂ ಆನಂದ್‌ ಎಲ್‌. ರಾಯ್‌ ಅವರು ಆರು
ವರ್ಷಗಳ ನಂತರ ಈ ಸಿನಿಮಾದಲ್ಲಿ ಒಟ್ಟಿಗೆ ಕೆಲಸ ಮಾಡುತ್ತಿದ್ದಾರೆ. ಈ ಹಿಂದೆ ಈ ಜೋಡಿ ‘ರಾಂಝಣಾ’ ಚಿತ್ರ ಮಾಡಿತ್ತು. ಹೊಸ ಸಿನಿಮಾದ ಅಧಿಕೃತ ಘೋಷಣೆ ಬಾಕಿಯಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು