ಸೋಮವಾರ, 4 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೆಳತಿಯ ಚಪ್ಪಲಿ ಹಿಡಿದ ಹೃತಿಕ್‌ ರೋಷನ್; ‘ಬೆಸ್ಟ್ ಬಾಯ್‌ಫ್ರೆಂಡ್‌‘ಎಂದ ನೆಟ್ಟಿಗರು

Last Updated 4 ಏಪ್ರಿಲ್ 2023, 9:49 IST
ಅಕ್ಷರ ಗಾತ್ರ

ಮುಂಬೈ: ಬಾಲಿವುಡ್‌ ನಟ ಹೃತಿಕ್‌ ರೋಷನ್‌ ತನ್ನ ಗೆಳತಿಯ ಚಪ್ಪಲಿಗಳನ್ನು ಹಿಡಿದುಕೊಂಡಿರುವ ಫೋಟೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ‘ಬೆಸ್ಟ್ ಬಾಯ್‌ ಫ್ರೆಂಡ್‌‘ ಎಂದು ನೆಟ್ಟಿಗರು ಹೃತಿಕ್‌ ರೋಷನ್‌ ಅವರನ್ನು ಕಾಲೆಳೆದಿದ್ದಾರೆ.

ಇತ್ತೀಚೆಗೆ ‘ನೀತಾ ಮುಖೇಶ್‌ ಅಂಬಾನಿ ಕಲ್ಚರಲ್‌ ಸೆಂಟರ್‌‘ನ ಉದ್ಘಾಟನೆ ಸಮಾರಂಭ ನಡೆಯಿತು. ಈ ಸಮಾರಂಭದಲ್ಲಿ ಹಲವಾರು ಬಾಲಿವುಡ್‌–ಹಾಲಿವುಡ್‌ ತಾರೆಯರು ಭಾಗವಹಿಸಿದ್ದರು. ಈ ಕಾರ್ಯಕ್ರಮದಲ್ಲಿ ಬಾಲಿವುಡ್‌ನ ‘ಲವ್‌ಬರ್ಡ್‌‘ ಎಂದೇ ಖ್ಯಾತಿ ಪಡೆದ ಹೃತಿಕ್‌ ರೋಷನ್‌ ಹಾಗೂ ಗೆಳತಿ ಸಬಾ ಆಝಾದ್‌ ಕೂಡ ಭಾಗವಹಿಸಿದ್ದರು.

ವಸ್ತ್ರ ವಿನ್ಯಾಸಕ ಅಮಿತ್‌ ಅಗರ್‌ವಾಲ್‌ ಟ್ವಿಟ್ಟರ್‌ನಲ್ಲಿ ಸಬಾ ಜೊತೆಗೆ ತೆಗೆದಿದ್ದ ಫೋಟೊವನ್ನು ಹಂಚಿಕೊಂಡಿದ್ದು, ಈ ಫೋಟೊದಲ್ಲಿ ಹೃತಿಕ್‌ ರೋಷನ್‌ ತನ್ನ ಗೆಳತಿ ಸಬಾ ಆಜಾದ್‌ ‘ಹೀಲ್ಸ್‌‘ಗಳನ್ನು ಹಿಡಿದುಕೊಂಡ ನಿಂತಿರುವ ದೃಶ್ಯವೂ ಸೆರೆಯಾಗಿದೆ. ಈ ಫೋಟೊವನ್ನು ನೋಡಿದ ಹೃತಿಕ್‌ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದರೆ, ಕೆಲವರು ವ್ಯಂಗ್ಯ ಮಾಡಿದ್ದಾರೆ.

’ಹೃತಿಕ್‌ ತನ್ನ ಗೆಳತಿಯ ಚಪ್ಪಲಿಗಳನ್ನು ಹಿಡಿದುಕೊಂಡಿರುವುದು ಈ ಪೋಟೋದ ಅತ್ಯಂತ ವಿಶಿಷ್ಟತೆಯಾಗಿದೆ‘ ಎಂದು ಅಭಿಮಾನಿಯೊಬ್ಬರು ಟ್ವೀಟ್‌ಗೆ ಪ್ರತಿಕ್ರಿಯಿಸಿದ್ದಾರೆ.

ಹೃತಿಕ್‌–ಸಬಾ ಜೋಡಿ ಕಳೆದ ಕೆಲವು ವರ್ಷಗಳಿಂದ ಡೇಟಿಂಗ್‌ ನಡೆಸುತ್ತಿದ್ದು, ಇದೇ ವರ್ಷ ಈ ಜೋಡಿ ಹಸೆಮಣೆ ಏರಲಿದೆ ಎಂಬ ಸುದ್ದಿ ಹರಿದಾಡುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT