ಸೋಮವಾರ, ಜುಲೈ 4, 2022
23 °C

ಗರ್ಲ್‌ಫ್ರೆಂಡ್‌ ಸಬಾ ಆಜಾದ್ ನಟನೆಯನ್ನು ಹೊಗಳಿದ ಹೃತಿಕ್‌ ರೋಷನ್‌

ಪ್ರಜಾವಾಣಿ ವೆಬ್‌ ಡೆಸ್ಕ್ Updated:

ಅಕ್ಷರ ಗಾತ್ರ : | |

ಸೋನಿ ಲೈವ್‌ ಒಟಿಟಿಯಲ್ಲಿ ಬಿಡುಗಡೆಯಾಗಿರುವ ‘ರಾಕೆಟ್‌ ಬಾಯ್ಸ್‌’ ವೆಬ್‌ ಸೀರಿಸ್‌ನಲ್ಲಿನ ಸಬಾ ಆಜಾದ್‌ ನಟನೆಯನ್ನು ಹೃತಿಕ್‌ ರೋಷನ್‌ ಹಾಡಿಹೊಗಳಿದ್ದಾರೆ. 

ಈ ಕುರಿತು ಇನ್‌ಸ್ಟಾಗ್ರಾಮ್‌ ಸ್ಟೋರಿಸ್‌ನಲ್ಲಿ ಶುಕ್ರವಾರ ಬರೆದುಕೊಂಡಿರುವ ಅವರು, ‘ನಾನು ನೋಡಿದ ಅತ್ಯುತ್ತಮ ನಟಿಯರಲ್ಲಿ ಸಬಾ ಆಜಾದ್‌ ಸಹ ಒಬ್ಬರು. ನೀನು(ಸಬಾ) ನನಗೆ ಸ್ಫೂರ್ತಿ’ ಎಂದು ಹೃತಿಕ್‌ ತಿಳಿಸಿದ್ದಾರೆ. 

ಚಿತ್ರದ ಬಗ್ಗೆಯೂ ಮೆಚ್ಚುಗೆ ವ್ಯಕ್ತಪಡಿಸಿರುವ ಹೃತಿಕ್‌,  ‘ಇದನ್ನು(ರಾಕೆಟ್‌ ಬಾಯ್ಸ್‌) ಮತ್ತೊಮ್ಮೆ ನೋಡುತ್ತಿದ್ದೇನೆ. ಇದರಿಂದ ಕಲಿಯುವುದು ತುಂಬಾ ಇದೆ. ಇಡೀ ತಂಡವು ಎಂತಹ ಅದ್ಭುತ ಕೆಲಸ ಮಾಡಿದೆ. ಇದರ ಬಗ್ಗೆ ಹೆಮ್ಮೆಯಾಗುತ್ತಿದೆ’ ಎಂದು ಹೇಳಿದ್ದಾರೆ. 

ಹೃತಿಕ್ –ಸಬಾ ಇತ್ತೀಚಿಗೆ ರೆಸ್ಟೋರೆಂಟ್‌ನಿಂದ ಒಟ್ಟಿಗೆ ಹೊರಬರುತ್ತಿರುವ ಫೋಟೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದವು. ಜತೆಗೆ, ಹೃತಿಕ್ ರೋಶನ್ ಫ್ಯಾಮಿಲಿ ಪಾರ್ಟಿಯಲ್ಲೂ ಸಬಾ ಕಾಣಿಸಿಕೊಂಡಿದ್ದರು. 

ಹೃತಿಕ್​ ರೋಷನ್ ಅವರು ಸಬಾ ಆಜಾದ್ ಜತೆಗೆ ಡೇಟಿಂಗ್​ ಮಾಡುತ್ತಿದ್ದಾರೆ ಎಂಬ ವದಂತಿ ಬಾಲಿವುಡ್‌ ಅಂಗಳದಲ್ಲಿ ಹರಿದಾಡುತ್ತಿದೆ. ಆದರೆ, ಈ ಬಗ್ಗೆ ಅವರು ಎಲ್ಲಿಯೂ ಅಧಿಕೃತವಾಗಿ ಹೇಳಿಕೊಂಡಿಲ್ಲ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು