ಮುಂಬೈ: 'ಕ್ರಿಶ್ 4‘ ಸಿನಿಮಾ ಮೂಲಕ ಬಾಲಿವುಡ್ ನಟ ಹೃತಿಕ್ ರೋಷನ್ ಅವರು ನಿರ್ದೇಶಕರಾಗಿ ಬಡ್ತಿ ಪಡೆಯಲಿದ್ದಾರೆ.

ಬಹು ನಿರೀಕ್ಷಿತ ‘ಕ್ರಿಶ್ 4’ ಚಿತ್ರವನ್ನು ರಾಕೇಶ್ ರೋಷನ್ ಫಿಲ್ಮ್ಕ್ರಾಫ್ಟ್ ಜತೆಯಾಗಿ ಯಶ್ರಾಕ್ ಫಿಲ್ಮ್ಸ್ನಿರ್ಮಾಣ ಮಾಡುತ್ತಿದೆ. 2026ರಲ್ಲಿ ಚಿತ್ರ ಬಿಡುಗಡೆಯಾಗುವ ಸಾಧ್ಯತೆಯಿರುವುದಾಗಿ ನಿರ್ಮಾಪಕರು ಹೇಳಿದ್ದಾರೆ.

ಕುರಿತು ಮಾತನಾಡಿರುವ ಹೃತಿಕ್ ತಂದೆ ರಾಕೇಶ್ ರೋಷನ್, ‘ಕ್ರಿಶ್ 4 ನಿರ್ದೇಶನದ ಜವಾಬ್ದಾರಿಯನ್ನು ನನ್ನ ಪುತ್ರನಿಗೆ ನೀಡುತ್ತಿದ್ದೇನೆ. ಮುಂದಿನ ದಶಕಗಳಷ್ಟು ದೂರ ಕ್ರಿಶ್ ಪಯಣವನ್ನು ಪ್ರೇಕ್ಷಕರ ಎದುರು ತೆರೆದಿಡಲು ಹೃತಿಕ್ಗೆ ಮಹತ್ವಾಕಂಕ್ಷೆಯ ದೃಷ್ಟಿಕೋನವಿದೆ. ನಿರ್ದೇಶಕನ ಟೋಪಿ ಧರಿಸಿ ಅವನನ್ನು ನೋಡುವುದಕ್ಕಿಂತ ಹೆಚ್ಚಿನ ಹೆಮ್ಮೆ ಇನ್ನೊಂದಿಲ್ಲ. ಸೂಪರ್ ಹೀರೋ ಕ್ರಿಶ್ನ ಮುಂದಿನ ಭಾಗವನ್ನು ಹೃತಿಕ್ ತೆರೆದಿಡಲಿದ್ದಾರೆ’ ಎಂದು ಹೇಳಿದ್ದಾರೆ.

2006ರಲ್ಲಿ ಕ್ರಿಶ್ ಸಿನಿಮಾ ಬಿಡುಗಡೆಗೊಂಡಿತ್ತು. ಅದಾದ ಬಳಿಕ 2013ರಲ್ಲಿ ಕ್ರಿಶ್ 3 ಸಿನಿಮಾ ತೆರೆಕಂಡಿತ್ತು. ಎರಡೂ ಸಿನಿಮಾಗಳು ಗಲ್ಲಾ ಪೆಟ್ಟಿಗೆಯಲ್ಲಿ ಭರ್ಜರಿ ಯಶಸ್ಸು ಕಂಡಿತ್ತು.
.ಸದ್ಯದಲ್ಲೇ ಸೆಟ್ಟೇರಲಿದೆ ಕ್ರಿಶ್ 4.‘ಕ್ರಿಶ್ 4’ ಚಿತ್ರಕತೆ ರೆಡಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.