ಬುಧವಾರ, ಏಪ್ರಿಲ್ 1, 2020
19 °C

'ಡಿಂಪಲ್‌ ಕ್ವೀನ್‌' ರಚಿತಾ ವಿರುದ್ಧ 'ಫೈರಿಂಗ್‌ ಸ್ಟಾರ್‌' ಹುಚ್ಚ ವೆಂಕಟ್‌ ಗರಂ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: 'ಡಿಂಪಲ್‌ ಕ್ವೀನ್‌' ರಚಿತಾ ರಾಮ್‌ ವಿರುದ್ಧ 'ಫೈರಿಂಗ್‌ ಸ್ಟಾರ್' ಹುಚ್ಚ ವೆಂಕಟ್‌ ಗರಂ ಆಗಿದ್ದು, ರಚಿತಾ ಇದೆಲ್ಲಾ ನಿನಗೆ ಬೇಕಿತ್ತಾ? ಎಂದು ಕೇಳಿದ್ದಾರೆ. 

ಹೌದು, ರಚಿತಾ ರಾಮ್‌ ‘ಧಮ್‌‘ ಎಳೆದು ಕಿಸ್‌ ಮಾಡಿರುವುದಕ್ಕೆ ವೆಂಕಟ್‌ ಕೋಪಗೊಂಡಿದ್ದಾರೆ.

 ‘ಏಕ್‌ ಲವ್‌ ಯಾ’ ಸಿನಿಮಾದ ಟೀಸರ್‌ನಲ್ಲಿ ರಚಿತಾ ರಾಮ್‌ ಸಿಗರೇಟ್‌ ಸೇದಿ ನಾಯಕ ರಾಣಗೆ ಕಿಸ್‌ ಮಾಡುವ ದೃಶ್ಯವನ್ನು ನೋಡಿ ಬೇಸರಗೊಂಡಿರುವ ಹುಚ್ಚ ವೆಂಕಟ್‌ ಆ ದೃಶ್ಯವನ್ನು ತೆಗೆದುಹಾಕುವಂತೆ ನಿರ್ದೇಶಕ ಪ್ರೇಮ್‌ ಅವರಲ್ಲಿ ಮನವಿ ಮಾಡಿದ್ದಾರೆ.

ಇಂತಹ ಅಶ್ಲೀಲ ದೃಶ್ಯಗಳ ಮೂಲಕ ಕನ್ನಡ ಚಿತ್ರರಂಗಕ್ಕೆ ಕೆಟ್ಟ ಹೆಸರು ಬರುತ್ತದೆ. ಇಂತಹ ದೃಶ್ಯಗಳಿಂದ ಮಕ್ಕಳು ಮತ್ತು ಕುಟುಂಬದವರು ಮುಜುಗರಕ್ಕೆ ಒಳಗಾಗುತ್ತಾರೆ ಎಂದು ವೆಂಕಟ್‌ ವಿಡಿಯೊ ಮೂಲಕ ಹೇಳಿದ್ದಾರೆ.

ಇಂತಹ ದೃಶ್ಯಗಳಿಂದ ಹೆಣ್ಣು ಮಕ್ಕಳು ಸಿನಿಮಾ ಮಂದಿರದಲ್ಲಿ ಚಿತ್ರ ನೋಡಲು ಸಾಧ್ಯವೇ? ಎಂದು ಪ್ರಶ್ನೆ ಮಾಡಿದ್ದಾರೆ. ಇಂತಹ ದೃಶ್ಯಗಳಲ್ಲಿ ನಟಿಸುವಂತೆ ಯಾವುದೇ ನಿರ್ದೇಶಕರು ಬಲವಂತ ಮಾಡುವುದಿಲ್ಲ, ನೀವು ಯಾಕೆ ಈ ರೀತಿ ಮಾಡಿದ್ರಿ? ನಿಮಗೆ ಪ್ರತಿಭೆ ತೋರಿಸಲು ಬೇರೆ ಮಾರ್ಗಗಳಿವೆ ಎಂದು ವೆಂಕಟ್‌ ಹೇಳಿದ್ದಾರೆ. 

ವೆಂಕಟ್‌ ಅವರ ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.  

‘ಏಕ್‌ ಲವ್‌ ಯಾ’ ಸಿನಿಮಾವನ್ನು ಪ್ರೇಮ್‌ ನಿರ್ದೇಶನ ಮಾಡಿದ್ದಾರೆ. ಖ್ಯಾತ ನಟಿ ರಕ್ಷಿತಾ ಪ್ರೇಮ್‌ ಸಹೋದರ ರಾಣ ನಾಯಕರಾಗಿದ್ದಾರೆ. ಈ ಚಿತ್ರದಲ್ಲಿ ರಚಿತಾ ರಾಮ್‌ ಬೋಲ್ಡ್‌ ಆಗಿ ಕಾಣಿಸಿಕೊಂಡಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು