ಶನಿವಾರ, ಏಪ್ರಿಲ್ 1, 2023
25 °C
ಸಿದ್ಧಗಂಗಾ ಮಠದಲ್ಲಿ ನಟ ಸುದೀಪ್ ಹುಟ್ಟುಹಬ್ಬ ಆಚರಣೆ

ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿಲ್ಲ- ಮನೆಗೆ ಬರಬೇಡಿ: ಸುದೀಪ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತುಮಕೂರು: ‘ಕೊರೊನಾ ಸಂಕಷ್ಟದ ಸಮಯದಲ್ಲಿ ನಾನು ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿಲ್ಲ. ಹೀಗಾಗಿ ಅಭಿಮಾನಿಗಳು ಬುಧವಾರ ಬೆಂಗಳೂರಿಗೆ ಅಥವಾ ನಮ್ಮ ಮನೆಗೆ ಬರಬಾರದು’ ಎಂದು ನಟ ಸುದೀಪ್ ಮನವಿ ಮಾಡಿದರು.

ಬುಧವಾರ ನಿರ್ದೇಶಕ ಇಂದ್ರಜಿತ್ ಲಂಕೇಶ್ ಅವರೊಂದಿಗೆ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿ, ಲಿಂಗೈಕ್ಯ ಡಾ.ಶಿವಕುಮಾರ ಸ್ವಾಮೀಜಿಯವರ ಗದ್ದುಗೆ ದರ್ಶನ ಪಡೆದರು. ಈ ವೇಳೆ ಮಠಾಧ್ಯಕ್ಷರಾದ ಸಿದ್ದಲಿಂಗ ಸ್ವಾಮೀಜಿಯ ಆಶೀರ್ವಾದ ಪಡೆದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

‘ಇಂದ್ರಜಿತ್ ಲಂಕೇಶ್ ನಾನು ಸಿನಿಮಾ ರಂಗಕ್ಕೆ ಬರುವ ಮೊದಲಿನಿಂದಲೂ ಸ್ನೇಹಿತರು. ಹಾಗಾಗಿ ಅವರೊಂದಿಗೆ ಮಠಕ್ಕೆ ಬಂದಿರುವ ಬಗ್ಗೆ ವಿಶೇಷ ಅರ್ಥ ಕಲ್ಪಿಸುವ ಅಗತ್ಯವಿಲ್ಲ. ಇಂದ್ರಜಿತ್ ಲಂಕೇಶ್ ಅವರಿಗೆ ಇರುವ ಮಾಹಿತಿ ನನಗೆ ಗೊತ್ತಿಲ್ಲ. ಅವರಿಗೆ ಗೊತ್ತಿರುವುದನ್ನು ನಾನು ಕೇಳುವುದಿಲ್ಲ. ನಾನು ನನ್ನ ಹೆಂಡತಿ ಬಳಿಯೇ ಬೇಡದ ವಿಚಾರಗಳ ಬಗ್ಗೆ ಚರ್ಚೆ ಮಾಡುವುದಿಲ್ಲ’ ಎಂದು ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದರು. 

ಇನ್ನೂ ಕನ್ನಡ ಚಿತ್ರರಂಗದಲ್ಲಿ ಡ್ರಗ್ ದಂಧೆ ನಡೆಯುತ್ತಿರುವ ಬಗ್ಗೆ ನನಗೆ ಗೊತ್ತಿಲ್ಲ. ಅಂತೆ ಕಂತೆಗಳ ಬಗ್ಗೆ ಮಾತನಾಡುವುದು ಸರಿಯಲ್ಲ. ಒಂದು ವಿಚಾರವನ್ನು ಎಳೆದು ತಂದು ಚಿತ್ರರಂಗದ ದೂಷಣೆ ಸರಿಯಲ್ಲ. ಇನ್ನೂ ಅಗಲಿದ ನಟನ ಹೆಸರನ್ನು ಡ್ರಗ್ ಮಾಫಿಯಾದೊಂದಿಗೆ ತಳುಕು ಹಾಕುವುದು ಬೇಡ. ಅವರಿಗೂ ಸುಂದರ ಕುಟುಂಬವೆ. ವಿನಾ ಕಾರಣ ಅವರ ಹೆಸರು ತಂದರೆ ಕುಟುಂಬಕ್ಕೆ ನೋವಾಗುತ್ತದೆ ಎಂದರು.

‘ನಾನು ಯಾವುದೇ ಪಾರ್ಟಿಗಳಿಗೆ ಹೋಗುವುದಿಲ್ಲ. ನನಗೇನಿದ್ದರೂ ಕರೆ ಬರುವುದು ರಾಜಕೀಯ ಪಾರ್ಟಿಗಳಿಂದ ಮಾತ್ರ. ಇನ್ನೂ ನಟ ಚೇತನ್ ನನ್ನ ಬಗ್ಗೆ ಮಾತನಾಡಿರುವುದಿಲ್ಲ. ಗುಟ್ಕಾ ಜಾಹೀರಾತಿಗೆ ಅನುಮತಿ ಕೊಟ್ಟಿರುವ ಪ್ರಧಾನ ಮಂತ್ರಿಯವರ ಬಗ್ಗೆ ಮಾತನಾಡಿರಬಹುದು. ಏನಾದರೂ ಮಾತನಾಡುವವರು ನೇರವಾಗಿ ಮಾತನಾಡಬೇಕು’ ಎಂದರು.

ಇನ್ನೂ ನಿರ್ದೇಶಕ ಇಂದ್ರಜಿತ್ ಲಂಕೇಶ್ ‘ಜಾತ್ಯಾತೀತವಾದ ಸಿದ್ಧಗಂಗಾ ಮಠದಂತಹ ಪುಣ್ಯ ಸ್ಥಳದಲ್ಲಿ ಸ್ಯಾಂಡಲ್‌ವುಡ್‌ನ ಡ್ರಗ್ ಮಾಫಿಯಾ ಬಗ್ಗೆ ಮಾತನಾಡಲು ಬಯಸುವುದಿಲ್ಲ’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು