ಸೋಮವಾರ, 4 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರಿಕೆಟಿಗ ರಿಷಬ್‌ ಪಂತ್‌ ಕ್ಷಮೆ ಕೋರಿದ ನಟಿ ಊರ್ವಶಿ ರೌಟೇಲ! ಏನಿದು ಘಟನೆ?

Last Updated 14 ಸೆಪ್ಟೆಂಬರ್ 2022, 7:31 IST
ಅಕ್ಷರ ಗಾತ್ರ

ಬಾಲಿವುಡ್‌ ನಟಿ ಹಾಗೂ ರೂಪದರ್ಶಿಊರ್ವಶಿ ರೌಟೇಲ ಅವರು ಕ್ರಿಕೆಟಿಗ ರಿಷಬ್‌ ಪಂತ್‌ ಕ್ಷಮೆ ಕೋರಿದ್ದಾರೆ. ‘ಕ್ಷಮಿಸಿ ಪಂತ್‌‘ ಎಂದುಊರ್ವಶಿ ರೌಟೇಲ ಟಿ.ವಿ ಸಂದರ್ಶನದಲ್ಲಿ ಹೇಳಿದ್ದಾರೆ.

ಕೆಲವು ದಿನಗಳ ಹಿಂದೆ ಸಾಮಾಜಿಕ ಮಾಧ್ಯಮಗಳಲ್ಲಿಊರ್ವಶಿ ರೌಟೇಲ, ಪಂತ್‌ ನಡುವಿನ ಟ್ವೀಟ್‌ ಸಮರ ಸಿಕ್ಕಾಪಟ್ಟೆ ಸದ್ದು ಮಾಡಿತ್ತು. ಅಂತಿಮವಾಗಿಊರ್ವಶಿ ರೌಟೇಲ ಕ್ಷಮೆ ಕೇಳುವ ಮೂಲಕ ಈ ವಿವಾದಕ್ಕೆ ಇತಿಶ್ರೀ ಹಾಡಿದ್ದಾರೆ.

ಊರ್ವಶಿ ರೌಟೇಲಾ ಕೆಲವು ದಿನಗಳ ಹಿಂದೆ ಟಿ.ವಿ ಸಂದರ್ಶನದಲ್ಲಿ ಮಾತನಾಡುತ್ತ, ‘ಕ್ರಿಕೆಟಿಗ ರಿಷಬ್‌ ಪಂತ್‌ ನನ್ನ ಹಿಂದೆ ಬಿದ್ದಿದ್ದರು, ನನ್ನ ಇನ್ನಿಲ್ಲದಂತೆ ಕಾಡಿದ್ದರು‘ ಎಂದು ಹೇಳಿದ್ದರು. ಈ ಹೇಳಿಕೆ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹರಿದಾಡಿತ್ತು.

ಈ ಬಗ್ಗೆ ರಿಷಬ್‌ ಕೂಡ ಟ್ರೋಲ್‌ಗಳನ್ನು ಎದುರಿಸಬೇಕಾಯಿತು. ಕೊನೆಗೆ ಅವರು ಕೂಡ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್‌ ಹಾಕಿ ಪ್ರತಿಕ್ರಿಯೆ ನೀಡಿದ್ದರು. ‘ಪುಕ್ಕಟೆ ಪ್ರಚಾರಕ್ಕಾಗಿ ಕೆಲವರು ಏನೆಲ್ಲಾ ಸರ್ಕಸ್‌ ಮಾಡುತ್ತಾರೆ ಎಂಬುದನ್ನು ನೋಡಿದರೆ ಬೇಸರವಾಗುತ್ತದೆ. ಅವರಿಗೆ ದೇವರು ಒಳ್ಳೆಯದು ಮಾಡಲಿ,ನನ್ನನ್ನು ಬಿಟ್ಟು ಬಿಡಿ ಅಕ್ಕ‘ ಎಂದು ತಿರುಗೇಟು ನೀಡಿದ್ದರು.

ಪಂತ್‌ ಅವರ ಪ್ರತಿಕ್ರಿಯೆ ಹಾಗೂ ಟ್ರೋಲ್‌ಗಳ ಬಗ್ಗೆ ಸಂದರ್ಶನದಲ್ಲಿ ಮಾತನಾಡಿರುವ ಊವರ್ಶಿ, ನನಗೆ ಏನು ಹೇಳಬೇಕು ಎಂದು ಗೊತ್ತಾಗುತ್ತಿಲ್ಲ, ‘ಪಂತ್ ನನ್ನ ಕ್ಷಮಿಸಿ‘ ಎಂದು ಹೇಳಿದ್ದಾರೆ.

ಇತ್ತೀಚಿನ ಪಾಕಿಸ್ತಾನ, ಭಾರತ ನಡುವಿನ ಕ್ರಿಕೆಟ್‌ ಪಂದ್ಯದ ಸಂದರ್ಭದಲ್ಲೂ ಊವರ್ಶಿ, ಪಾಕ್‌ ಬೌಲರ್‌ ನಸೀಮ್‌ ಶಾ ಅವರ ಪೋಟೊ ಇದ್ದ ಮೀಮ್ಸ್‌ ಹಂಚಿಕೊಂಡು ಸಹ ಟ್ರೋಲ್‌ಗೆ ಒಳಗಾಗಿದ್ದರು. ನಿನಗೆ ಪಾಕಿಸ್ತಾನದವರು ಮಾತ್ರ ಬೇಕೆ? ಭಾರತದವರು ಬೇಡವೇ? ಎಂಬ ಪ್ರಶ್ನೆಗಳನ್ನು ಎದುರಿಸಿದ್ದರು.

ಕನ್ನಡದ 'ಮಿ. ಐರಾವತ' ಚಿತ್ರದಲ್ಲಿ ನಟ ದರ್ಶನ್ ಜೋಡಿಯಾಗಿ ಊವರ್ಶಿ ನಟಿಸಿದ್ದರು. ಸದ್ಯ ಅವರು ಮಾಡೆಲಿಂಗ್‌ ಹಾಗೂ ಸಿನಿಮಾಗಳ ಐಟಂ ಸಾಂಗಿನಲ್ಲಿ ಬ್ಯಸಿಯಾಗಿದ್ದಾರೆ. ಈ ಹಿಂದೆ ಪಂತ್‌ ಹಾಗೂ ಊವರ್ಶಿ ಡೇಟಿಂಗ್‌ ಮಾಡುತ್ತಿದ್ದಾರೆ ಎಂಬ ಸುದ್ದಿಗಳು ಹರಿದಾಡಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT