ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಐ1’ ಹೊಸಬರ ಪ್ರಯತ್ನ

Last Updated 28 ನವೆಂಬರ್ 2019, 19:30 IST
ಅಕ್ಷರ ಗಾತ್ರ

ಮೂವರು ಅಮಾಯಕ ಹುಡುಗರನ್ನು ವ್ಯಕ್ತಿಯೊಬ್ಬ ಟೆಂಪೋ ಟ್ರಾವಲರ್‌ನಲ್ಲಿ (ಟಿಟಿ) ಬಂಧಿಯಾಗಿಸುತ್ತಾನೆ. ಆ ರೀತಿ ಮಾಡಲು ಕಾರಣವೇನು? ಕೆಟ್ಟ ಮನುಷ್ಯರು ಎಷ್ಟೇ ಕೆಡುಕು ಮಾಡುತ್ತಾ ಹೋದರೂ ಅದನ್ನು ನೋಡಲು ಅವರ ಹಿಂದೆ ಒಬ್ಬ ಇದ್ದೇ ಇರುತ್ತಾನೆ ಎಂದು ಕುತೂಹಲ ಮೂಡಿಸುವ ಹಾರರ್‌, ಮರ್ಡರ್‌ ಮಿಸ್ಟ್ರಿ ಕಥೆಯ ಚಿತ್ರ ‘ಐ1’.

ಸಮಾಜದದಲ್ಲಿ ನಡೆಯುವ ಕೆಡುಕುಗಳನ್ನು ಯಾವ ರೀತಿ ತಡೆಯಬಹುದು ಎನ್ನುವ ಸಂದೇಶವನ್ನು ಈ ಚಿತ್ರದಲ್ಲಿ ನೀಡಲಾಗಿದೆಯಂತೆ.

ಚಿತ್ರದ ಟ್ರೇಲರ್‌ ಬಿಡುಗಡೆ ಮಾಡಿದ ನಟ ಸುದೀಪ್‌, ‘ಒಂದು ಕಾಲದಲ್ಲಿ ನಾನು ಸಹ ಹೊಸಬನಾಗಿದ್ದೆ. ಆಗ ನಾನೂ ಹೀಗೆ ನಿರೀಕ್ಷೆಗಳನ್ನಿಟ್ಟುಕೊಂಡು ವೇದಿಕೆಯ ಮೇಲೆ ನಿಂತಿದ್ದೆ. ನೀವು ಸಹ ನಾಳೆ ಏನೋ ಸಾಧಿಸಬಹುದು. ಚಿತ್ರದ ದೃಶ್ಯಗಳನ್ನು ನೋಡಿದಾಗ ನಿಮ್ಮಪರಿಕಲ್ಪನೆ ತುಂಬಾ ಚೆನ್ನಾಗಿ ಮೂಡಿಬಂದಿದೆ’ ಎಂದು ಹೊಸಬರ ತಂಡವನ್ನು ಬೆನ್ನುತಟ್ಟಿದರು.

ಪ್ರತಿ ಹತ್ತು ನಿಮಿಷಕ್ಕೆ ಪ್ರೇಕ್ಷಕಊಹಿಸಲಾಗದ, ಸೋಜಿಗದ ದೃಶ್ಯಗಳು ಈ ಚಿತ್ರದಲ್ಲಿ ತೆರೆದುಕೊಳ್ಳುತ್ತವೆ. ಕುತೂಹಲ ಮತ್ತು ಥ್ರಿಲ್ಲರ್‌ ಅಂಶಗಳ ಚಿತ್ರವಿದು. ಮೂವರು ಹುಡುಗರನ್ನು ಟಿಟಿಯಲ್ಲಿ ಕೂಡಿ ಹಾಕುವ ಸೂತ್ರಧಾರನನ್ನು ಮತ್ತು ಈ ಚಿತ್ರದ ನಾಯಕಿಯ ಹೆಸರನ್ನು ಗೋಪ್ಯವಾಗಿಟ್ಟಿದ್ದೇವೆ ಎನ್ನುವ ಮಾತು ಸೇರಿಸಿದರು ಚಿತ್ರದ ನಿರ್ದೇಶಕಆರ್.ಎಸ್.ರಾಜ್‍ಕುಮಾರ್.

ಹಿರಿಯ ನಿರ್ದೇಶಕ ಭವಾನಿ ಶಂಕರ್ ಅವರ ಬಳಿ ಕೆಲಸ ಕಲಿತಿರುವ ಇವರು ಮೊದಲ ಬಾರಿಗೆ ಸ್ವತಂತ್ರವಾಗಿಆ್ಯಕ್ಷನ್ ಕಟ್ ಹೇಳಿದ್ದಾರೆ. ರಚನೆ ಕೂಡ ಇವರದ್ದೆ. ಚಿತ್ರದ ಬಹುಪಾಲು ದೃಶ್ಯಗಳ ಚಿತ್ರೀಕರಣ ಒಂದುಟಿಟಿ ವಾಹನದಲ್ಲಿ ನಡೆಯುತ್ತದೆ. ಉಳಿದ ಸನ್ನಿವೇಶಗಳ ದೃಶ್ಯಗಳನ್ನುನೆಲಮಂಗಲ ಸುತ್ತಮುತ್ತ ಚಿತ್ರೀಕರಿಸಲಾಗಿದೆ.

ಕಿರುತೆರೆಯ ನಟ ಕಿಶೋರ್, ರಂಜನ್ ಮತ್ತು ರಂಗಭೂಮಿ ನಟ ಧೀರಜ್‍ಪ್ರಸಾದ್ ಮೂವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ನಾಗೇಂದ್ರಪ್ರಸಾದ್, ಉಮೇಶ್ ಸಾಹಿತ್ಯವಿದೆ. ವಿಭಿನ್ ಸಂಗೀತ ಸಂಯೋಜಿಸಿದ್ದಾರೆ. ಛಾಯಾಗ್ರಹಣ ಶಿವು ಪಿ.ಚಾಕೋ, ಸಂಕಲನ ವಿಶಾಲ್‍ ರಾಜೇಂದ್ರನ್, ಸಾಹಸ ಅಶೋಕ್ ಅವರದ್ದು. ವೃತ್ತಿಯಲ್ಲಿ ಶಿಕ್ಷಕಿಯಾಗಿರುವ ಬೆಂಗಳೂರಿನವರಾದಶೈಲಜಾ ಪ್ರಕಾಶ್ ಅವರನ್ನು ಬಣ್ಣದ ಲೋಕದ ಸೆಳೆತ ಈ ಚಿತ್ರದ ಮೂಲಕ ನಿರ್ಮಾಪಕಿಯನ್ನಾಗಿಸಿದೆ. ಚಿತ್ರವನ್ನು ಡಿಸೆಂಬರ್ 6ರಂದು ತೆರೆಗೆ ತರಲು ವಿತರಕ ನಿಹಾಲ್ ಸಿದ್ಧತೆ ಮಾಡಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT