‘ಕಾಂತಾರ’ ಚಿತ್ರದ ಬಳಿಕ ತುಳುನಾಡಿನ ದೇವರು, ದೈವಗಳನ್ನು ಪರಿಚಯಿಸುವ ಕಥೆಗಳು ಹೆಚ್ಚಾಗಿವೆ. ಆದರೆ ದಶಕಗಳ ಹಿಂದೆಯೇ ತುಳುನಾಡಿನ ಸಾಂಸ್ಕೃತಿಕ ಜಗತ್ತನ್ನು ಹುಡುಕಿಕೊಂಡು ಹೊರಟ ಕೆಲ ನಿರ್ದೇಶಕರ ಸಾಲಿನಲ್ಲಿ ಶಿವಧ್ವಜ್ ಶೆಟ್ಟಿ ಕೂಡ ಸೇರುತ್ತಾರೆ. ಅವರ ನಿರ್ದೇಶನದ ‘ಇಂಬು’ ಚಿತ್ರ ಇಂಡಿಯನ್ ಪನೋರಮ 2025 ಸ್ಪರ್ಧೆಗೆ ಆಯ್ಕೆಗೊಂಡಿದೆ. ಚಿತ್ರ ಹಾಗೂ ತಮ್ಮ ಸಿನಿಪಯಣ ಕುರಿತು ಅವರು ಮಾತನಾಡಿದ್ದಾರೆ.