ಶನಿವಾರ, ಸೆಪ್ಟೆಂಬರ್ 25, 2021
29 °C

ಮೇಕಪ್ ಇಲ್ಲದ ನಟಿ ಇಲಿಯಾನ ಇವರೇ ನೋಡಿ! 

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಹು ಭಾಷೆ ತಾರೆ, ಮಾದಕ ಚೆಲುವೆ ನಟಿ ಇಲಿಯಾನ ಡಿಕ್ರೂಜ್‌ ಮೇಕಪ್ ಇಲ್ಲದಿರುವ ಫೋಟೊ ಹಾಕುವ ಮೂಲಕ ಅಭಿಮಾನಿಗಳಿಗೆ ಸೌಂದರ್ಯದ ಪಾಠ ಹೇಳಿದ್ದಾರೆ.

ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಂನಲ್ಲಿ ಮೇಕಪ್‌ ಇಲ್ಲದಿರುವ ಚಿತ್ರವನ್ನು ಹಾಕಿ, ಇದು ನಾನೇ, ಪಿಲ್ಟರ್‌ ಇಲ್ಲದಿರುವ ಸಹಜ ಸೌಂದರ್ಯ ಎಂದು ಬರೆದುಕೊಂಡಿದ್ದಾರೆ. ಈ ಪೋಸ್ಟ್‌ಗೆ ಅಭಿಮಾನಿಗಳಿಂದ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದೆ.


ಇಲಿಯಾನ

ಸಹಜವಾಗಿ ನಟಿಯರು ಮೇಕಪ್‌ ಇಲ್ಲದ ಫೋಟೊಗಳನ್ನು ಹಂಚಿಕೊಳ್ಳುವುದಿಲ್ಲ, ಆದರೆ ಈ ರೀತಿ ಶೇರ್ ಮಾಡಲು ಧೈರ್ಯ ಬೇಕು ಎಂದು ಕೆಲವರು ಕಮೆಂಟ್‌ ಹಾಕಿದ್ದಾರೆ.

ನಿಜವಾಗಿಯೂ ಆ ಚಿತ್ರದಲ್ಲಿ ಇರುವುದು ನಿವೇನಾ? ಎಂದು ಕೆಲವರು ಪ್ರಶ್ನೆ ಹಾಕಿದ್ದಾರೆ.

18ನೇ ವರ್ಷದಲ್ಲೇ ಮಾಡೆಲಿಂಗ್ ಮತ್ತು ಸಿನಿಜಗತ್ತಿಗೆ ಪದಾರ್ಪಣೆ ಮಾಡಿದ ಇಲಿಯಾನಾ, ವೃತ್ತಿ ಜೀವನದ ಆರಂಭಿಕ ದಿನಗಳಲ್ಲಿ ತಮ್ಮ ಮೈಕಟ್ಟಿನ ಕಾರಣಕ್ಕಾಗಿ ಮಾನಸಿಕ ವೇದನೆ ಅನುಭವಿಸಿ ಖಿನ್ನತೆಗೆ ಜಾರಿದ್ದರು. ‘ಬಾಡಿ ಡಿಸ್ಮಾರ್ಫಿಕ್‌ ಡಿಸಾರ್ಡರ್‌’ (ಬಿಡಿಡಿ) ಎಂಬ ಮಾನಸಿಕ ಸಮಸ್ಯೆಯಿಂದ ಬಳಲಿದ್ದ ಅವರು ಅದರಿಂದ ಹೊರಬಂದು ಆತ್ಮವಿಶ್ವಾಸ ಬೆಳೆಸಿಕೊಂಡಿದ್ದರು.

2019 ರಲ್ಲಿ ಗೆಳೆಯ ಹಾಗೂ  ಫೋಟೊಗ್ರಾಫರ್ ಆ್ಯಂಡ್ರೂ ನೀಬೋನ್ ಅವರೊಂದಿಗಿನ ಸಂಬಂಧವನ್ನು ಕಡಿದುಕೊಂಡ ನಂತರ ಸಿನಿಮಾಗಳಲ್ಲಿ ಅಭಿನಯಿಸಿದ್ದು ವಿರಳ. ಇತ್ತೀಚೆಗೆ ಬುಗ್‌ಬುಲ್‌ ವೆಬ್‌ ಸಿರೀಸ್‌ನಲ್ಲಿ ಕಾಣಿಸಿಕೊಂಡಿದ್ದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು