ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೆಲುಗಿನ ‘ಹಲೋ ಜೂನ್‌‘ ಸಿನಿಮಾದ ಟ್ರೇಲರ್‌ ಬಿಡುಗಡೆ

Last Updated 29 ಮಾರ್ಚ್ 2022, 9:14 IST
ಅಕ್ಷರ ಗಾತ್ರ

ತೆಲುಗಿನಲ್ಲಿ ‘ಹಲೋ ಜೂನ್‌‘ ಸಿನಿಮಾದ ಟ್ರೇಲರ್‌ ಬಿಡುಗಡೆಯಾಗಿದ್ದು ನಟ ಪವನ್‌ ಕಲ್ಯಾಣ್‌ ಸೇರಿದಂತೆ ಟಾಲಿವುಡ್‌ ತಾರೆಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

‘ಹಲೋ ಜೂನ್‌‘ ಸಿನಿಮಾ ಏಪ್ರಿಲ್‌ 1ರಂದ ಆಹಾ ಓಟಿಟಿಯಲ್ಲಿ ಬಿಡುಗಡೆಯಾಗಲಿದೆ.

ಇದು ಮಲಯಾಳಂನ ‘ಜೂನ್‌‘ ಚಿತ್ರದ ಡಬ್ಬಿಂಗ್‌. ಈ ಚಿತ್ರ ಕೇರಳದಲ್ಲಿ ಉತ್ತಮ ಪ್ರದರ್ಶನ ಕಂಡಿತ್ತು. ಕಾಲೇಜು ವಿದ್ಯಾರ್ಥಿನಿಯ ಪ್ರೇಮ, ಕೌಟುಂಬಿಕ ವ್ಯವಸ್ಥೆ ಹಾಗೂ ವಿದ್ಯಾಭ್ಯಾಸ ಕುರಿತಾದ ಕಥಾ ಹಂದರ ಹೊಂದಿದೆ.

ಈ ಸಿನಿಮಾವನ್ನು ಅಹಮ್ಮದ್‌ ಕಬೀರ್‌ ನಿರ್ದೇಶನ ಮಾಡಿದ್ದಾರೆ. ರಜಿತಾ ವಿಜಯನ್‌, ಜೆ,ಜಾರ್ಜ್‌ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.

ತೆಲುಗು ರಾಜ್ಯಗಳಲ್ಲಿ ಈ ಸಿನಿಮಾದ ಟ್ರೇಲರ್‌ಗೆ ಮೆಚ್ಚುಗೆ ವ್ಯಕ್ತವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT