ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡ್ರಗ್ಸ್‌ ಕೇಸ್‌ನಲ್ಲಿ‌ ಅನುಶ್ರೀ: ಎಲ್ಲರನ್ನೇಕೆ ಪರೀಕ್ಷಿಸಿಲ್ಲ ಎಂದ ಇಂದ್ರಜಿತ್

Last Updated 8 ಸೆಪ್ಟೆಂಬರ್ 2021, 9:04 IST
ಅಕ್ಷರ ಗಾತ್ರ

ಬೆಂಗಳೂರು: ‘ಡ್ರಗ್ಸ್‌ ಕೇಸಿನಲ್ಲಿ ಆರೋಪಪಟ್ಟಿಯಲ್ಲಿ ಹೆಸರಿರುವ ಎಲ್ಲರ ಪರೀಕ್ಷೆ ಏಕೆ ಮಾಡಿಸಿಲ್ಲ’ ಎಂದು ಪತ್ರಕರ್ತ ಇಂದ್ರಜಿತ್‌ ಲಂಕೇಶ್‌ ಪ್ರಶ್ನಿಸಿದ್ದಾರೆ.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಈ ಪ್ರಕರಣಕ್ಕೆ ರಾಜಕೀಯ, ಚಿತ್ರರಂಗ, ಸಾಮಾಜಿಕ ಸೇರಿದಂತೆ ಹಲವಾರು ಆಯಾಮಗಳಿವೆ. ಆದ್ದರಿಂದಲೇ ಇದು ನಮ್ಮ ರಾಜ್ಯದ ಇತಿಹಾಸದಲ್ಲೇ ಇದು ಅತ್ಯಂತ ದೊಡ್ಡ ಹಗರಣ.ಸಿಸಿಬಿಗೆ ಹೇಳಿಕೆ ನೀಡಿದವರು ಕೂಡ ಮತ್ತೆ ಡ್ರಗ್ಸ್‌ ಪಾರ್ಟಿಗಳಲ್ಲಿ ಭಾಗಿಯಾಗುತ್ತಿದ್ದಾರೆ. ಕಾನೂನಾತ್ಮಕವಾಗಿ ಡ್ರಗ್ಸ್ ಪೆಡ್ಲರ್ಗೆ ಶಿಕ್ಷೆ ಜಾಸ್ತಿ ಇದೆ. ಆದರೆ ಡ್ರಗ್ಸ್ ಸೇವನೆ ಮಾಡಿದವರಿಗೆ ಕಡಿಮೆ ಪ್ರಮಾಣದ ಶಿಕ್ಷೆ ಇದೆ. ಡ್ರಗ್ಸ್ ಸೇವನೆ ಮಾಡಿದವರನ್ನು ಪುನರ್ವಸತಿಗೆ ಒಳಪಡಿಸಬೇಕು’ ಎಂದು ಒತ್ತಾಯಿಸಿದ್ದಾರೆ.

‘ನಿರೂಪಕಿ ಅನುಶ್ರೀ ಅವರ ಹೆಸರನ್ನು ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಲಾಗಿದ್ದರೂ ಅವರನ್ನೇಕೆ ಪರೀಕ್ಷೆಗೆ ಒಳಪಡಿಸಿಲ್ಲ. ಪ್ರಕರಣದ ಆರೋಪಿ ಕಿಶೋರ್‌ ಶೆಟ್ಟಿ ಕೂಡಾ ಅನುಶ್ರೀ ಹೆಸರನ್ನು ಉಲ್ಲೇಖಿಸಿದ್ದರೂ ಏಕೆ ವಿಚಾರಣೆ ಮುಂದುವರಿಯಲಿಲ್ಲ?ಸಿಸಿಬಿ ಪೊಲೀಸರಿಗೆ ನನ್ನ ಬಳಿ ಇದ್ದ ಎಲ್ಲ ಮಾಹಿತಿ ನೀಡಿದ್ದೆ. ಮೂತ್ರ, ರಕ್ತದ ಮಾದರಿ ಪರೀಕ್ಷೆ ಸಾಕಾಗುವುದಿಲ್ಲ. ಕೂದಲ ಮಾದರಿ ಪರೀಕ್ಷಿಸಬೇಕು ಎಂದು ಹೇಳಿದ್ದೆ. ಆದರೆ ಕೆಲವರಿಗೆ ಬೆಣ್ಣೆ, ಕೆಲವರಿಗೆ ಸುಣ್ಣ ಎಂಬಂತೆ ಪರೀಕ್ಷೆ ಮಾಡಿದ್ದಾರೆ. ಸಿಸಿಬಿಯವರಿಗೆ ರಾಜಕೀಯ ಒತ್ತಡವಿತ್ತೇ?’ ಎಂದು ಅವರು ಪ್ರಶ್ನಿಸಿದರು.

ಪ್ರಕರಣದ ವಿಚಾರಣೆ ವಿಳಂಬ ಆಗಿರುವುದಕ್ಕೆ ಇಂದ್ರಜಿತ್ ಬೇಸರ ವ್ಯಕ್ತಪಡಿಸಿದ್ದಾರೆ. ‘ಕಿಶೋರ್ ಶೆಟ್ಟಿ ಹೇಳಿಕೆ ಕೊಟ್ಟ ತಕ್ಷಣ ತನಿಖೆ ಮಾಡಬೇಕಾಗಿತ್ತು. ಆದರೆ ಮಾಡಿಲ್ಲ. ಆದ್ದರಿಂದಲೇ ನ್ಯಾಯಾಲಯದಲ್ಲಿ ಪ್ರಕರಣಗಳು ಬಿದ್ದು ಹೋಗುತ್ತಿವೆ. ಗೌರಿ ಹತ್ಯೆ ಆಗಿ 4 ವರ್ಷ ಕಳೆದಿದೆ. ಆದರೆ ಇನ್ನೂ ನ್ಯಾಯಾಲಯದಲ್ಲಿ ವಿಚಾರಣೆ ನಡೆದಿಲ್ಲ.. ಇದನ್ನೆಲ್ಲ ನೋಡಿದಾಗ ವ್ಯವಸ್ಥೆ ಬಗ್ಗೆ ಬೇಸರವಾಗುತ್ತದೆ’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT