ಸೋಮವಾರ, ಮಾರ್ಚ್ 27, 2023
33 °C

ಜಾನು ಟ್ರೇಲರ್‌: ಸಮಂತಾ ಬಾಳಲ್ಲಿ ಪ್ರೀತಿಯ ಅಲೆ ಎಬ್ಬಿಸಿದ ಶರ್ವಾನಂದ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೈದರಾಬಾದ್‌: ಟಾಲಿವುಡ್‌ ಖ್ಯಾತ ನಟ ಶರ್ವಾನಂದ ಹಾಗೂ ಸಮಂತಾ ನಟಿಸಿರುವ ‘ಜಾನು’ ಸಿನಿಮಾದ ಟ್ರೇಲರ್‌ ಯುಟ್ಯೂಬ್‌ನಲ್ಲಿ ಬಿಡುಗಡೆಯಾಗಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. 

ಟ್ರೇಲರ್‌ ಬಿಡುಗಡೆಯಾಗಿ 24 ಗಂಟೆಗಳಲ್ಲಿ 23 ಲಕ್ಷಕ್ಕೂ ಹೆಚ್ಚು ಜನರು ವೀಕ್ಷಣೆ ಮಾಡಿದ್ದು, ಸಿನಿಮಾದ ಮೇಕಿಂಗ್‌ ಚೆನ್ನಾಗಿದೆ ಎಂದು ಶರ್ವಾನಂದ ಅಭಿಮಾನಿಗಳು ಕಮೆಂಟ್‌ ಮಾಡಿದ್ದಾರೆ. 

ತಮಿಳಿನ ವಿಜಯ್‌ ಸೇತುಪತಿ ಹಾಗೂ ತ್ರಿಷಾ ಅಭಿನಯದ ‘96’ ಸಿನಿಮಾ ಜಾನು ಆಗಿ ತೆಲುಗಿಗೆ ರಿಮೇಕ್‌ ಆಗುತ್ತಿದೆ. ಈ ಚಿತ್ರ ಈಗಾಗಲೇ ಕನ್ನಡದಲ್ಲಿ '99' ಆಗಿ ತೆರೆಕಂಡಿತ್ತು. ಇದರಲ್ಲಿ ಗೋಲ್ಡನ್‌ ಸ್ಟಾರ್‌ ಗಣೇಶ್‌ ಹಾಗೂ ಭಾವನಾ ನಟಿಸಿದ್ದರು.

ಎರಡು ದಶಕಗಳ ಹಿಂದೆ ಯಾವ್ಯಾವುದೋ ಪರಿಸ್ಥಿತಿಯಿಂದ ಬೇರೆಯಾದ ಎರಡು ಪುಟ್ಟ ಹೃದಯಗಳು ಬದಲಾದ ಕಾಲಘಟ್ಟದಲ್ಲಿ ಮತ್ತೆ ಮುಖಾಮುಖಿಯಾಗಿ, ನೆನಪಿನ ಅಲೆ ಎಬ್ಬಿಸಿಕೊಂಡು ಸಾಗುವ ಕಥಾ ಹಂದರ ಇರುವ ಸಿನಿಮಾವಿದು. ತಮಿಳಿನಲ್ಲಿ ಈ ಚಿತ್ರ ಸೂಪರ್‌ ಹಿಟ್‌ ಆಗಿತ್ತು.

ಜಾನು ಚಿತ್ರವನ್ನು ಸಿ. ಪ್ರೇಮಕುಮಾರ್‌ ನಿರ್ದೇಶನ ಮಾಡಿದ್ದಾರೆ. ಸಂಗೀತ ಸಂಯೋಜನೆ ಗೋವಿಂದ ವಸಂತನ್‌ ಅವರದು. ದಿಲ್‌ ರಾಜು ಪ್ರೊಡಕ್ಷನ್‌ನಲ್ಲಿ ಜಾನು ನಿರ್ಮಾಣವಾಗಿದೆ. ಫೆಬ್ರುವರಿ 7ರಂದು ಈ ಸಿನಿಮಾ ಬಿಡುಗಡೆಯಾಗಲಿದೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು