ಮಂಗಳವಾರ, ಅಕ್ಟೋಬರ್ 15, 2019
22 °C

ಬೋನಿ ಕಪೂರ್‌ ಸಿನಿಮಾದಲ್ಲಿ ಮಗಳು ಜಾಹ್ನವಿ

Published:
Updated:
Prajavani

ಇದೇ ಮೊದಲ ಬಾರಿಗೆ ಅಪ್ಪ ಬೋನಿ ಕಪೂರ್‌ ನಿರ್ಮಾಣ ಮಾಡುತ್ತಿರುವ ಸಿನಿಮಾದಲ್ಲಿ ನಟಿ ಜಾಹ್ನವಿ ಕಪೂರ್‌ ನಟಿಸುತ್ತಿದ್ದಾರೆ. ಬೋನಿ ಕಪೂರ್‌ ನಿರ್ಮಾಣದ ‘ಬಾಂಬೆ ಗರ್ಲ್‌’ ಸಿನಿಮಾದ ನಾಯಕಿ ಜಾಹ್ನವಿ ಕಪೂರ್‌. ಇದು ಹದಿಹರೆಯದ ಯುವಕ– ಯುವತಿಯರ ಕುರಿತಾದ ಸಿನಿಮವಾಗಿದ್ದು, ಇದನ್ನು ಸಂಜಯ್ ತ್ರಿಪಾಠಿ ನಿರ್ದೇಶನ ಮಾಡುತ್ತಿದ್ದಾರೆ.

ಸದ್ಯ ಜಾಹ್ನವಿ ಕಪೂರ್‌ ‘ರೂಹಿಆಫ್ಜಾ’ ಚಿತ್ರದಲ್ಲಿ ಬ್ಯುಸಿಯಾಗಿದ್ದು, ರಾಜ್‌ಕುಮಾರ್‌ ರಾವ್‌ ಹಾಗೂ ವರುಣ್‌ ಶರ್ಮಾ ಇದರಲ್ಲಿ ನಾಯಕನಾಗಿ ನಟಿಸುತ್ತಿದ್ದಾರೆ. ಇದರಲ್ಲಿ ಜಾಹ್ನವಿ ಕಪೂರ್‌ ಅವರು ದ್ವಿಪಾತ್ರದಲ್ಲಿ ನಟಿಸುತ್ತಿದ್ದು, ರೂಹಿ ಹಾಗೂ ಅಫ್ಸಾನಾ ಎಂಬ ಎರಡು ಪರಸ್ಪರ ತದ್ವಿರುದ್ಧ ಪಾತ್ರಗಳಲ್ಲಿ ನಟಿಸಿದ್ದಾರೆ.  ಈ ಚಿತ್ರದ ನಿರ್ದೇಶಕ ಹಾರ್ದಿಕ್‌ ಮೆಹ್ತಾ. ದಿನೇಶ್‌ ವಿಜನ್‌ ಇದಕ್ಕೆ ಬಂಡವಾಳ ಹೂಡಿದ್ದಾರೆ. ಭಾರತೀಯ ವಾಯುಪಡೆಯ ಮೊದಲ ಮಹಿಳಾ ಕ್ಯಾಪ್ಟನ್‌ ಗುಂಜನ್‌ ಸಕ್ಸೇನಾ ಅವರ ಜೀವನಕತೆ ಆಧಾರಿತ ‘ಕಾರ್ಗಿಲ್‌ ವಾರ್‌’ ಸಿನಿಮಾದಲ್ಲೂ ಜಾಹ್ನವಿ ನಟಿಸುತ್ತಿದ್ದಾರೆ.

ಇದನ್ನೂ ಓದಿ: ‘ಕೋಮಲಿ’ ಹಕ್ಕು ಬೋನಿ ಕಪೂರ್ ಕೈಯಲ್ಲಿ

Post Comments (+)