ಮುಂಬೈ: ಮೊನ್ನೆ ಮೊನ್ನೆಯಷ್ಟೇ 39 ಕೋಟಿಯ ಅಪಾರ್ಟ್‌ಮೆಂಟ್ ಖರಿದಿಸಿ ಸುದ್ದಿಯಾಗಿದ್ದ ನಟಿ ಶ್ರೀದೇವಿ ಪುತ್ರಿ ಜಾಹ್ನವಿ ಕಪೂರ್ ಇದೀಗ ಬೆಲ್ಲಿ ಡ್ಯಾನ್ಸ್ ಮೂಲಕ ಮತ್ತೆ ಸುದ್ದಿಗೆ ಬಂದಿದ್ದಾರೆ. ತಾಯಿ ಭಾರತೀಯ ಚಿತ್ರರಂಗದ ಖ್ಯಾತ ನಟಿ ಶ್ರೀದೇವಿ ಅದ್ಬುತ ನೃತ್ಯಗಾರ್ತಿಯೂ ಹೌದು. ತಾಯಿಯ ನೃತ್ಯ ಕೌಶಲ್ಯಗಳನ್ನು ಬಳುವಳಿಯಾಗಿ ಪಡೆದ ರೀತಿ ಅವರ ಪುತ್ರಿ ಜಾಹ್ನವಿ ಕಪೂರ್ ನೃತ್ಯ ಮಾಡಿದ್ದಾರೆ.

ಇನ್ಸ್ಟಾಗ್ರಾಮಲ್ಲಿ ಜಾಹ್ನವಿ ನೃತ್ಯದ ವಿಡಿಯೊವೊಂದನ್ನುಚಿಕೊಂಡಿದ್ದು, ಅದರಲ್ಲಿ ಅವರು ಅಶೋಕ ಚಿತ್ರದ ಸನ್ ಸನನಾ ಹಾಡಿಗೆ ಬೆಲ್ಲಿ ಡ್ಯಾನ್ಸ್ ಮಾಡುವುದನ್ನು ಕಾಣಬಹುದು. ಹಾಡಿನ ಮೂಲ ವಿಡಿಯೋದಲ್ಲಿ ಕರೀನಾ ಕಪೂರ್ ಕಾಣಿಸಿಕೊಂಡಿದ್ದರು. ಈ ಗೀತೆಯನ್ನು ಅಲ್ಕಾ ಯಾಗ್ನಿಕ್ ಮತ್ತು ಹೇಮಾ ಸರ್ದೇಸಾಯಿ ಹಾಡಿದ್ದಾರೆ

ಹಾಡಿಗೆ ತಕ್ಕಂತೆ ಮನೋಹರವಾಗಿ ನೃತ್ಯ ಮಾಡಿರುವ ಜಾಹ್ನವಿ, ಬೆಲ್ಲಿ ಡ್ಯಾನ್ಸ್‌ನ ತಾಂತ್ರಿಕ ಅಂಶಗಳಲ್ಲಿ ತನ್ನ ಪರಿಪೂರ್ಣತೆಯನ್ನು ಪ್ರದರ್ಶಿಸಿದ್ದಾರೆ.

ಬಿಳಿ ಉಡುಪನ್ನು ತೊಟ್ಟು ಜಾಹ್ನವಿ ಕಪೂರ್ ಬೆಲ್ಲಿ ಡ್ಯಾನ್ಸ್ ಮಾಡಿರುವ ವಿಡಿಯೋ ಜಾಲತಾಣದಲ್ಲಿ ವೈರಲ್ ಆಗಿದೆ. ಬೆಲ್ಲಿ ಡ್ಯಾನ್ಸ್ ಸೆಷನ್ ಮಿಸ್ ಮಾಡಿಕೊಳ್ಳುತ್ತಿದ್ದೇವೆ ಎಂದು ಕಾಮೆಂಟ್ ಮಾಡಿರುವ ಅವರ ಚಿಕ್ಕಮ್ಮ ಮಹೀಪ್ ಕಪೂರ್, ಎಮೋಜಿಗಳನ್ನು ಹರಿಬಿಟ್ಟಿದ್ದಾರೆ. ಡಿಸೈನರ್ ಮನೀಶ್ ಮಲ್ಹೋತ್ರಾ ಸಹ "ಉಫ್" ಎಂದು ಕಾಮೆಂಟ್ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.