ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2021ರ ಗೂಗಲ್‌ ಸರ್ಚ್‌: ಟಾಪ್‌ ಟ್ರೆಂಡ್‌ನಲ್ಲಿ 'ಸೂರ್ಯಾ' ಅಭಿನಯದ ‘ಜೈ ಭೀಮ್’

Last Updated 9 ಡಿಸೆಂಬರ್ 2021, 6:21 IST
ಅಕ್ಷರ ಗಾತ್ರ

ತಮಿಳು ನಟ ಸೂರ್ಯಾ ಅಭಿನಯದ ‘ಜೈ ಭೀಮ್’ ಸಿನಿಮಾ 2021ರ ಗೂಗಲ್‌ ಸರ್ಚ್‌ನಲ್ಲಿ ಟಾಪ್‌ ಟ್ರೆಂಡ್‌ನಲ್ಲಿ ಇದೆ.

ತೆಲುಗು, ತಮಿಳು, ಮಲಯಾಳಂ ಸೇರಿದಂತೆ ಕನ್ನಡ ಭಾಷೆಗಳಲ್ಲಿ ಈ ಸಿನಿಮಾ ದೀಪಾವಳಿ ಸಂದರ್ಭದಲ್ಲಿ ನವೆಂಬರ್ 2 ಕ್ಕೆ ನೇರವಾಗಿ ಅಮೆಜಾನ್ ಪ್ರೈಮ್‌ನಲ್ಲಿ ಬಿಡುಗಡೆಯಾಗಿತ್ತು.

ಗೂಗಲ್‌ ಸರ್ಚ್‌ನಲ್ಲಿ ಈ ಸಿನಿಮಾವನ್ನು ಹೆಚ್ಚು ಜನರು ಹುಡುಕಿದ್ದಾರೆ. ಎರಡನೇ ಸ್ಥಾನದಲ್ಲಿ ಶೇರ್‌ಷಾ, ಮೂರನೇ ಸ್ಥಾನಲ್ಲಿ ರಾಧೆ ಸಿನಿಮಾ ಇವೆ.

ಉಳಿದಂತೆ ಬೆಲ್‌ಬಾಟಂ, ದೃಶ್ಯಂ 2, ಸೂರ್ಯವಂಶಿ, ಮಾಸ್ಟರ್‌, ಭುಜ್‌ ಸಿನಿಮಾಗಳು ಟಾಪ್‌ 10ರಲ್ಲಿ ಸ್ಥಾನಪಡೆದುಕೊಂಡಿವೆ.

ಸೂರ್ಯಾ ಹಾಗೂ ಅವರ ಪತ್ನಿ ಜ್ಯೋತಿಕಾ ಒಡೆತನದ ‘2ಡಿ ಎಂಟರ್‌ಟೈನ್‌ಮೆಂಟ್’ ಸಂಸ್ಥೆ ನಿರ್ಮಾಣ ಮಾಡಿರುವ ‘ಜೈ ಭೀಮ್‌’ ಅನ್ನು ನಿರ್ದೇಶಕ ಜ್ಞಾನವೇಲ ನಿರ್ದೇಶಿಸಿದ್ದಾರೆ. ನ್ಯಾಯಾಂಗ ಹಾಗೂ ಬಡವರ ಹೋರಾಟದ ಕಥೆಯನ್ನು ಈ ಸಿನಿಮಾ ಹೊಂದಿದ್ದು, ಸೂರ್ಯಾ ಅವರು ಲಾಯರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾ ವಿಮರ್ಶಕರ ಮೆಚ್ಚುಗೆಗೆ ಪಾತ್ರವಾಗಿದೆ.

ಉಳಿದಂತೆ ಚಿತ್ರದಲ್ಲಿ ಪ್ರಕಾಶ್ ರಾಜ್, ರಾಜಿಶಾ ವಿಜಯನ್, ಲಿಜ್‌ಮೋಲ್ ಜೋಶ್ ಇದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT