ಬೂಮ್ರ–ಅನುಪಮಾ ‘ಪ್ರೇಮ್’ ಕಹಾನಿ!

ಬುಧವಾರ, ಜೂನ್ 26, 2019
29 °C

ಬೂಮ್ರ–ಅನುಪಮಾ ‘ಪ್ರೇಮ್’ ಕಹಾನಿ!

Published:
Updated:

‘ನಟಸಾರ್ವಭೌಮ’ ಸಿನಿಮಾದ ನಾಯಕಿ ಅನುಪಮಾ ನೆನಪಿದ್ದಾರೆಯೇ? ಮಲಯಾಳಂ ಸಿನಿರಂಗದಲ್ಲಿ ಜನಪ್ರಿಯವಾಗಿರುವ ಮುದ್ದುಮುಖದ ಅನುಪಮಾ,ಈಚೆಗೆ ನೆಟ್ಟಿಗರಿಂದ ಸಿಕ್ಕಾಪಟ್ಟೆ ಚರ್ಚೆಗೊಳಗಾಗುತ್ತಿದ್ದಾರೆ. 

ಭಾರತೀಯ ಕ್ರಿಕೆಟ್‌ರಂಗದ ಬೆಸ್ಟ್‌ ಬೌಲರ್ ಜಸ್‌ಪ್ರೀತ್ ಬೂಮ್ರ ಅವರ ಎಸೆತಕ್ಕೆ ಅನುಪಮಾ ಕ್ಲೀನ್ ಬೋಲ್ಡ್‌ ಆಗಿದ್ಧಾರೆ ಅನ್ನುತ್ತಿದ್ದಾರೆ ನೆಟ್ಟಿಗರು. ಎಲ್ಲಿಯ ಬೂಮ್ರ? ಎಲ್ಲಿಯ ಅನುಪಮಾ ಅಂತ ಪ್ರಶ್ನಿಸಿದರೆ ಅದಕ್ಕೂ ನೆಟ್ಟಿಗರೇ ಉತ್ತರ ನೀಡುತ್ತಾರೆ.

ಅನುಪಮಾ ಮತ್ತು ಬೂಮ್ರ ಪರಸ್ಪರ ಟ್ವಿಟರ್‌ನಲ್ಲಿ ಫಾಲೋವರ್ಸ್ ಆಗಿದ್ದು, ಬೂಮ್ರ ಅನುಪಮಾ ಅವರ ಚಂದನೆಯ ಚಿತ್ರಗಳನ್ನು ಲೈಕ್ ಮಾಡುವುದಲ್ಲದೇ ಶೇರ್ ಕೂಡಾ ಮಾಡಿಕೊಂಡಿದ್ದಾರೆ. ಅನುಪಮಾ ಕೂಡಾ ಬೇರಾವ ಆಟಗಾರನನ್ನೂ ಫಾಲೋ ಮಾಡದೇ ಬೂಮ್ರಾ ಅವರೊಬ್ಬರನ್ನೇ ಟ್ವಿಟರ್‌ನಲ್ಲಿ ಫಾಲೋ ಮಾಡುತ್ತಿರುವುದು ಇಬ್ಬರ ಮಧ್ಯೆ ಬರೀ ಸ್ನೇಹವಷ್ಟೇ ಅಲ್ಲ ಪ್ರೇಮವೂ ಇದೆ ಅನ್ನುವ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಜೋರಾಗಿಯೇ ಚರ್ಚೆಯಾಗುತ್ತಿದೆ. 

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !