ಬೆಂಗಳೂರು: ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ(ಕೆಎಫ್ಸಿಸಿ) ಅಧ್ಯಕ್ಷರಾಗಿ ನಟಿ, ನಿರ್ಮಾಪಕಿ ಜಯಮಾಲಾ ಆಯ್ಕೆಯಾಗಿದ್ದಾರೆ.

ಶನಿವಾರ(ಜ.31) ರೇಸ್ ಕೋರ್ಸ್ ರಸ್ತೆಯಲ್ಲಿರುವ ಗುರುರಾಜ ಕಲ್ಯಾಣ ಮಂಟಪದಲ್ಲಿ 2026–27ನೇ ಸಾಲಿನ ವಾರ್ಷಿಕ ಚುನಾವಣೆ ನಡೆಯಿತು. ಈ ಬಾರಿಯ ಅಧ್ಯಕ್ಷ ಸ್ಥಾನ ನಿರ್ಮಾಪಕರ ವಲಯಕ್ಕೆ ಮೀಸಲಾಗಿತ್ತು. ಈಗಾಗಲೇ ಮಂಡಳಿಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿರುವ ನಟಿ ಜಯಮಾಲಾ ಹಾಗೂ ನಿರ್ಮಾಪಕ ಭಾ.ಮಾ.ಹರೀಶ್ ಅವರು ಈ ವರ್ಷದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆಯಲ್ಲಿದ್ದರು. ಒಟ್ಟು 846 ಮತಗಳು ಚಲಾವಣೆಯಾಗಿದ್ದು, ಜಯಮಾಲಾ ಅವರು 512 ಮತಗಳನ್ನು ಪಡೆದುಕೊಂಡರು.

ಉಪಾಧ್ಯಕ್ಷ ಸ್ಥಾನಕ್ಕೆ ನಿರ್ಮಾಪಕ ವಲಯದಿಂದ ನಟ ಸುಂದರ್ರಾಜ್, ವಿತರಕ ವಲಯದಿಂದ ನಿರ್ಮಾಪಕ ಕೆ.ಮಂಜು ಹಾಗೂ ಪ್ರದರ್ಶಕರ ವಲಯದಿಂದ ಕಿಶೋರ್ ಕುಮಾರ್ ಎಂ.ಎನ್. ಆಯ್ಕೆಯಾಗಿದ್ದಾರೆ. ಗೌರವ ಕಾರ್ಯದರ್ಶಿ ಸ್ಥಾನಕ್ಕೆ ನಿರ್ಮಾಪಕ ವಲಯದಿಂದ ಎ.ಗಣೇಶ್, ಪ್ರದರ್ಶಕ ವಲಯದಿಂದ ಅಶೋಕ್ ಕೆ.ಸಿ., ವಿತರಕ ವಲಯದಿಂದ ರಮೇಶ್ ಬಾಬು ಎಂ.ಆರ್. ಚುನಾಯಿತರಾದರು. ಖಜಾಂಚಿಯಾಗಿ ಜಯಸಿಂಹ ಮುಸುರಿ ಬಿ.ಕೆ. ಆಯ್ಕೆಯಾದರು. ವಾಣಿಜ್ಯ ಮಂಡಳಿಯ ಕಾರ್ಯಕಾರಿ ಸಮಿತಿಗೆ ಮೂರು ವಲಯದಿಂದ 48 ಮಂದಿ ಸದಸ್ಯರನ್ನು ಚುನಾವಣೆಯ ಮೂಲಕ ಆಯ್ಕೆ ಮಾಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.