ಮಂಗಳವಾರ, ಜನವರಿ 18, 2022
27 °C

ತಮಿಳು ನಟ ಜೀವಾಗೆ 37ನೇ ವರ್ಷದ ಜನ್ಮದಿನ ಸಂಭ್ರಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚೆನ್ನೈ: ತಮಿಳು ನಟ ಜೀವಾ 37ನೇ ವರ್ಷದ ಜನ್ಮದಿನ ಸಂಭ್ರಮದಲ್ಲಿದ್ದು ಅವರ ’ವರಲಾರು ಮುಕ್ಕಿಯಾಂ’ ಸಿನಿಮಾ ಘೋಷಣೆಯಾಗಿದೆ.

ಜೀವಾ ಅವರಿಗೆ ಚಿತ್ರರಂಗದ ಗಣ್ಯರು ಹಾಗೂ ಅಭಿಮಾನಿಗಳು ಜನ್ಮದಿನದ ಶುಭಾಶಯ ಕೋರುತ್ತಿದ್ದಾರೆ. 

ಜೀವಾ ಅವರ ತಂದೆ ಚೌದರಿ ಒಡೆತನದ ಸೂಪರ್‌ ಗುಡ್‌ ಫಿಲಂಸ್‌ ಈ ಸಿನಿಮಾವನ್ನು ನಿರ್ಮಾಣ ಮಾಡಲಿದೆ. ಹಲವು ಹಿಟ್‌ ಚಿತ್ರಗಳನ್ನು ನೀಡಿರುವ ಜೀವಾ ಅವರ ಈ ಹೊಸ ಚಿತ್ರಕ್ಕೆ ಸಂತೋಷ್‌ ರಾಜನ್‌ ನಿರ್ದೇಶನ ಮಾಡಲಿದ್ದಾರೆ.

ಕಳೆದ ವರ್ಷದಲ್ಲಿ ಅವರು ನಟಿಸಿದ್ದ ಜೀವಾ ಹಾಗೂ 83 ಸಿನಿಮಾಗಳು ಸೂಪರ್ ಹಿಟ್‌ ಆಗಿವೆ. ಇದೇ ವರ್ಷದಲ್ಲಿ ಈ ಸಿನಿಮಾ ತೆರೆಗೆ ಬರಲಿದೆ ಎಂದು ನಿರ್ದೇಶಕ ಸಂತೋಷ್‌ ರಾಜನ್‌ ಹೇಳಿದ್ದಾರೆ.

ಸಂಕ್ರಾಂತಿ ಬಳಿಕ ಈ ಸಿನಿಮಾದ ಶೂಟಿಂಗ್‌ ನಡೆಯಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು